ರಣಜಿ ಕ್ರಿಕೆಟ್ಗೆ ಮರಳಿದ ಭಜ್ಜಿಗೆ 'ಮುದಿನಾಯಿ' ಎಂದ ಟ್ವಿಟ್ಟರ್ ಫಾಲೋವರ್

                      

Last Updated : Nov 23, 2017, 11:44 AM IST
ರಣಜಿ ಕ್ರಿಕೆಟ್ಗೆ ಮರಳಿದ ಭಜ್ಜಿಗೆ 'ಮುದಿನಾಯಿ' ಎಂದ ಟ್ವಿಟ್ಟರ್ ಫಾಲೋವರ್  title=

ನವದೆಹಲಿ: ಟ್ವೀಟರ್ ನಲ್ಲಿ ಸಧಾ ಕ್ರಿಯಾಶೀಲವಾಗಿರುವ ಹರ್ಭಜನಸಿಂಗ್ ಈಗ ತಮ್ಮ ಟ್ವೀಟರನಲ್ಲಿನ ಪೋಸ್ಟ್ ಗೆ ಕುರಿತಾಗಿ ಅವರ ಹಿಂಬಾಲಕರಿಂದ ಟ್ರೋಲ್ ಒಳಪಟ್ಟಿದ್ದಾರೆ.ಸದ್ಯ ರಣಜಿ ಪಂಧ್ಯದಲ್ಲಿ  ಪಂಜಾಬ್ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಿಂಗ್ .ಈ ಕುರಿತು ಟ್ವೀಟರ ನಲ್ಲಿ ಪೋಟೋ ಹಂಚಿಕೊಂಡಿರುವ ಭಜ್ಜಿಗೆ ನೋಯಲ್ ಸ್ಮಿತ್ ಎನ್ನುವುವರು ಪ್ರತಿಕ್ರಿಯಿಸಿ' ನಿಮ್ಮ ಮುದಿ ನಾಯಿಯ ಹೊಸತಂತ್ರಗಳನ್ನು ಕಲಿಸಬೇಡಿ ಭಜ್ಜಿ ಯವರೇ ನಿಮ್ಮ ದಿನಗಳು ಈಗ ಮುಗಿದುಹೊಗಿವೆ ಆದ್ದರಿಂದ ಅಂತರಾಷ್ಟ್ರೀಯ ಕ್ರಿಕೆಟ್ಗೆ ವಿಧಾಯ ಹೇಳುವುದು ಒಳ್ಳೆಯದು ಎಂದಿದ್ದಾರೆ.ಅಲ್ಲದೆ ಈ ಹಿಂದಿನವರಂತೆ ನೀವು ಇತರರನ್ನು  ಮೂರ್ಖರನ್ನಾಗಿ ಮಾಡಬೇಡಿ ಇಷ್ಟನ್ನು ಮಾತ್ರ ನಾ ಹೇಳಬಲ್ಲೆ" ಎಂದು ಭಜ್ಜಿಯವರನ್ನು ಕಾಲೆಳೆದಿದ್ದಾರೆ.

 

ಇದಕ್ಕೆ ತಮ್ಮ ಎಂದಿನ ಶೈಲಿಯಲ್ಲಿ ಪ್ರತ್ಯುತ್ತರ ನೀಡಿರುವ 'ಟರ್ಬನೆಟರ್' ನಿಮ್ಮಂತಹ ಮುದಿ ನಾಯಿಗಳು ಮಾತ್ರ ಈ ರೀತಿ ಬೊಗಳುತ್ತವೆ...ಆದ್ದರಿಂದ ದಯವಿಟ್ಟು ಅದನ್ನು ಮುಂದುವರೆಸಿ. ನನಗನಿಸುತ್ತೆ ನಿಮ್ಮ ಜೀವನಪೂರ್ತಿ ಇಂತಹದ್ದನ್ನೇ ಕಲಿತಿರುವ ಹಾಗೆ ಕಾಣಿಸುತ್ತದೆ.ಆಗಲೇ ನೀವು ಸೋತಿರುವ ಹಾಗೆ ಕಾಣಿಸುತ್ತದೆ.ನೀವು ಜೀವನದಲ್ಲಿ ಹೊಸ ಸಂಗತಿಗಳಿಗೆ ತಿಲಾಂಜಲಿ ಇಟ್ಟ ಹಾಗೆ ಕಾಣಿಸುತ್ತೆ, ಪ್ರತಿ ದಿನ ಜೀವನದಲ್ಲಿ ಹೊಸ ವಿಷಯಗಳನ್ನು ಕಲಿಯುವುದಿರುತ್ತದೆ ಆದ್ದರಿಂದ  ನಿಮ್ಮ ವಿಚಾರವನ್ನು ಇನ್ನೊಬ್ಬರಿಗೆ ಕಳಿಸಬೇಡಿ ಎಂದು ಮರು ಟ್ವೀಟ ಮೂಲಕ ಅವರಿಗೆ ಭರ್ಜರಿ ದೂಸ್ರಾ ಎಸೆದಿದ್ದಾರೆ.  

 

37 ವರ್ಷದ ಈ ಆಫ್ ಸ್ಪಿನ್ನರ್ ಕಳೆದ ಕೊನೆಯ ಬಾರಿಗೆ ಭಾರತ ತಂಡವನ್ನು ಪ್ರತಿನಿಧಿಸಿದ್ದು 2016 ರ  ಯುಎಇ ವಿರುದ್ದದ T20 ಪಂದ್ಯದಲ್ಲಿ ಅಲ್ಲದೆ ಅವರು ರಾಷ್ಟ್ರೀಯ ತಂಡಕ್ಕೆ 2015 ರಿಂದ ಟೆಸ್ಟ್ ಮತ್ತು ಏಕದಿನಗಳ ಪಂದ್ಯಕ್ಕೆ ಆಯ್ಕೆಯಾಗಿಲ್ಲ.ಭಜ್ಜಿ ಇದುವರೆಗೂ 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ಗಳನ್ನೂ ತೆಗೆದುಕೊಂಡಿದ್ದಾರೆ ಅಲ್ಲದೆ 2011 ವಿಶ್ವಕಪ್ ವಿಜೇತ ತಂಡದ ಸದಸ್ಯರು ಹೌದು, 236 ಏಕದಿನಪಂದ್ಯಗಳಲ್ಲಿ 269 ವಿಕೆಟ್ಗಳನ್ನೂ ತೆಗೆದುಕೊಂಡಿದ್ದಾರೆ.
ಮತ್ತು 25 T20 ಪಂದ್ಯಗಳಿಂದ 28 ವಿಕೆಟ್ಗಳನ್ನುಗಳನ್ನು ಗಳಿಸಿದ್ದಾರೆ.

Trending News