ಕೇವಲ 20 ರನ್ ಗಳಿಸಿದ್ರೆ ಸಾಕು ವಿರಾಟ್-ರೋಹಿತ್’ರ ಈ 3 ವಿಶ್ವದಾಖಲೆಗಳನ್ನೇ ಬ್ರೇಕ್ ಮಾಡಲಿದ್ದಾರೆ ಸೂರ್ಯಕುಮಾರ್!

Suryakumar Yadav World Records: ಸೂರ್ಯಕುಮಾರ್ 54 ಇನ್ನಿಂಗ್ಸ್‌’ಗಳಲ್ಲಿ 1980 ರನ್ ಗಳಿಸಿದ್ದಾರೆ. ಅಂದರೆ ಆಸೀಸ್ ಸರಣಿಯ ಕೊನೆಯ T20I ಪಂದ್ಯದಲ್ಲಿ ಕೇವಲ 20 ರನ್ ಗಳಿಸಿದರೆ, 55 ಇನ್ನಿಂಗ್ಸ್‌’ಗಳಲ್ಲಿ 2000 ರನ್‌’ಗಳನ್ನು ಪೂರೈಸಲಿದ್ದಾರೆ. ಜೊತೆಗೆ ಭಾರತದ ಪರ 2000 ರನ್ ಪೂರೈಸಿದ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

Written by - Bhavishya Shetty | Last Updated : Dec 2, 2023, 08:23 PM IST
    • ಶ್ರೇಷ್ಠ ದಾಖಲೆಯನ್ನು ಮುರಿಯಲು ಸೂರ್ಯಕುಮಾರ್’ಗೆ ಉತ್ತಮ ಅವಕಾಶ
    • ಸೂರ್ಯಕುಮಾರ್ 54 ಇನ್ನಿಂಗ್ಸ್‌’ಗಳಲ್ಲಿ 1980 ರನ್ ಗಳಿಸಿದ್ದಾರೆ
    • ಸೂರ್ಯಕುಮಾರ್’ಗೆ ವಿಶ್ವ ದಾಖಲೆ ಸರಿಗಟ್ಟುವ ಅವಕಾಶವೂ ಇದೆ
ಕೇವಲ 20 ರನ್ ಗಳಿಸಿದ್ರೆ ಸಾಕು ವಿರಾಟ್-ರೋಹಿತ್’ರ ಈ 3 ವಿಶ್ವದಾಖಲೆಗಳನ್ನೇ ಬ್ರೇಕ್ ಮಾಡಲಿದ್ದಾರೆ ಸೂರ್ಯಕುಮಾರ್! title=
Suryakumar Yadav

Suryakumar Yadav World Records: ಭಾರತೀಯ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ವೇಗವಾಗಿ 2000 ರನ್ ಪೂರೈಸಿದ ಬ್ಯಾಟ್ಸ್‌’ಮನ್ ವಿರಾಟ್ ಕೊಹ್ಲಿ. 56 ಇನ್ನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಈ ಶ್ರೇಷ್ಠ ದಾಖಲೆಯನ್ನು ಮುರಿಯಲು ಸೂರ್ಯಕುಮಾರ್ ಯಾದವ್ ಅವರಿಗೆ ಉತ್ತಮ ಅವಕಾಶವಿದೆ.

ಇದನ್ನೂ ಓದಿ:  “ಈ ಆಟಗಾರ ಭಾರತದಲ್ಲಿರೋದು ಪುಣ್ಯದ ಫಲ-ಹೆಮ್ಮೆಯ ಸಂಗತಿ”: ಮುತ್ತಯ್ಯ ಮುರಳೀಧರನ್ ಹೇಳಿದ್ದು ಯಾರ ಬಗ್ಗೆ?

ಸೂರ್ಯಕುಮಾರ್ 54 ಇನ್ನಿಂಗ್ಸ್‌’ಗಳಲ್ಲಿ 1980 ರನ್ ಗಳಿಸಿದ್ದಾರೆ. ಅಂದರೆ ಆಸೀಸ್ ಸರಣಿಯ ಕೊನೆಯ T20I ಪಂದ್ಯದಲ್ಲಿ ಕೇವಲ 20 ರನ್ ಗಳಿಸಿದರೆ, 55 ಇನ್ನಿಂಗ್ಸ್‌’ಗಳಲ್ಲಿ 2000 ರನ್‌’ಗಳನ್ನು ಪೂರೈಸಲಿದ್ದಾರೆ. ಜೊತೆಗೆ ಭಾರತದ ಪರ 2000 ರನ್ ಪೂರೈಸಿದ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.

ಅಂತರಾಷ್ಟ್ರೀಯ ಕ್ರಿಕೆಟ್‌’ನ ಅತಿ ಕಡಿಮೆ ಮಾದರಿಯಲ್ಲಿ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ 182 ಸಿಕ್ಸರ್‌’ಗಳೊಂದಿಗೆ ತಮ್ಮ ಪ್ರಾಬಲ್ಯವನ್ನು ಉಳಿಸಿಕೊಂಡಿದ್ದಾರೆ. ಈ ಮೂಲಕ ಭಾರತ ಮತ್ತು ವಿಶ್ವ ಎರಡರಲ್ಲೂ ನಂಬರ್-1 ಆಗಿದ್ದಾರೆ. ಭಾರತದ ಪರ ಅತಿ ಹೆಚ್ಚು ಸಿಕ್ಸರ್‌’ಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕೊಹ್ಲಿ ಹೆಸರಿನಲ್ಲಿ 117 ಟಿ20 ಸಿಕ್ಸರ್‌’ಗಳಿವೆ. ಈ ವಿಚಾರದಲ್ಲಿ ಸೂರ್ಯ ಕೊಹ್ಲಿಯನ್ನೇ ಮೀರಿಸಬಹುದು.

ಸೂರ್ಯ 6 ಸಿಕ್ಸರ್‌’ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ಈ ಸ್ವರೂಪದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಸದ್ಯ ಸೂರ್ಯಕುಮಾರ್ ಹೆಸರಿನಲ್ಲಿ 112 ಸಿಕ್ಸರ್‌ಗಳಿವೆ.

ಇದನ್ನೂ ಓದಿ: ಕಿಂಗ್ ಕೋಬ್ರಾ ಹೆಡೆಯನ್ನು ನೆಕ್ಕುತ್ತಾ ಮುದ್ದಾಡಿದ ಗೋಮಾತೆ… ಅಸಾಮಾನ್ಯದ ಸ್ನೇಹದ ವಿಡಿಯೋ ವೈರಲ್

ಅಂದಹಾಗೆ ಸೂರ್ಯಕುಮಾರ್ ಯಾದವ್ ಅವರಿಗೂ ವಿಶ್ವ ದಾಖಲೆ ಸರಿಗಟ್ಟುವ ಅವಕಾಶವಿದೆ. T20 ಅಂತಾರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್‌’ಗಳೆಂದರೆ ರೋಹಿತ್ ಶರ್ಮಾ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್. ಈ ಇಬ್ಬರೂ ಬ್ಯಾಟ್ಸ್‌ಮನ್‌’ಗಳ ಹೆಸರಿನಲ್ಲಿ ತಲಾ 4 ಶತಕಗಳಿವೆ. ಹೀಗಾಗಿ ಸೂರ್ಯಕುಮಾರ್ ಯಾದವ್ ಕೊನೆಯ ಪಂದ್ಯದಲ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾದರೆ, ರೋಹಿತ್ ಮತ್ತು ಮ್ಯಾಕ್ಸ್‌ವೆಲ್ ಅವರೊಂದಿಗೆ ಜಂಟಿಯಾಗಿ ಟಿ20 ಐ ಶತಕಗಳನ್ನು ಗಳಿಸಿದ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಸದ್ಯ ಸೂರ್ಯ ಅವರ ಹೆಸರಿನಲ್ಲಿ ಮೂರು ಶತಕಗಳಿವೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News