CSK vs KKR: ಈ ಭಾರತೀಯ ಆಟಗಾರ ಮಾತ್ರ ಸಿಕ್ಸರ್ ಬಾರಿಸುವಲ್ಲಿ ನನ್ನೊಂದಿಗೆ ಸ್ಪರ್ಧಿಸಬಲ್ಲರು ಎಂದ ಆಂಡ್ರೆ ರಸೆಲ್..!

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಿಂಕು ಸಿಂಗ್ ಮಾತ್ರ ತಮ್ಮ ಸಿಕ್ಸ್ ಹೊಡೆಯುವ ಸಾಮರ್ಥ್ಯವನ್ನು ಸರಿಗಟ್ಟಬಲ್ಲರು ಎಂದು ಆಂಡ್ರೆ ರಸೆಲ್ ಹೇಳಿದ್ದಾರೆ. 

Written by - Manjunath N | Last Updated : Apr 9, 2024, 01:58 AM IST
  • ನಾವು ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ
  • ನಾವು ಪ್ರತಿ ಪಂದ್ಯವನ್ನು ಹೇಗೆ ಬರುತ್ತೋ ಹಾಗೆ ತೆಗೆದುಕೊಳ್ಳಲು ಯೋಜಿಸಿದ್ದೇವೆ
  • ಇನ್ನು ಅತಿದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವ ವಿಷಯದಲ್ಲಿ ಯಾರೂ ಡ್ರೆ ರಸ್‌ನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ
CSK vs KKR: ಈ ಭಾರತೀಯ ಆಟಗಾರ ಮಾತ್ರ ಸಿಕ್ಸರ್ ಬಾರಿಸುವಲ್ಲಿ ನನ್ನೊಂದಿಗೆ ಸ್ಪರ್ಧಿಸಬಲ್ಲರು ಎಂದ ಆಂಡ್ರೆ ರಸೆಲ್..! title=

ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಿಂಕು ಸಿಂಗ್ ಮಾತ್ರ ತಮ್ಮ ಸಿಕ್ಸ್ ಹೊಡೆಯುವ ಸಾಮರ್ಥ್ಯವನ್ನು ಸರಿಗಟ್ಟಬಲ್ಲರು ಎಂದು ಆಂಡ್ರೆ ರಸೆಲ್ ಹೇಳಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್’ನದ್ದು ಗೂಂಡಾ ರಾಜ್ಯ, ಪೊಲೀಸ್ ಇಲಾಖೆ ಸತ್ತಿದೆ: ಆರ್ ಅಶೋಕ್ ಆಕ್ರೋಶ

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದ ವೇಳೆ ಮಾತನಾಡಿದ ಅವರು 115 ಮೀ ಸಿಕ್ಸರ್‌ಗಳನ್ನು ಹೊಡೆಯುವ ಸಾಮರ್ಥ್ಯ ಇದೆ ಮತ್ತು ಅದನ್ನು ರಿಂಕು ಮಾತ್ರ ಪೂರೈಸಬಹುದು ಎಂದು ಹೇಳಿದ್ದಾರೆ.ಇದೇ ವೇಳೆ ಋತುವಿನಲ್ಲಿ ಕೆಕೆಆರ್ ಆರಂಭಿಕ ಯಶಸ್ಸಿನ ಬಗ್ಗೆ ಮಾತನಾಡಿದ ರಸೆಲ್,"ನಾವು ಇಲ್ಲಿಯವರೆಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ.ನಾವು ಪ್ರತಿ ಪಂದ್ಯವನ್ನು ಹೇಗೆ ಬರುತ್ತೋ ಹಾಗೆ ತೆಗೆದುಕೊಳ್ಳಲು ಯೋಜಿಸಿದ್ದೇವೆ, ಇದಕ್ಕಿಂತ ಹೆಚ್ಚಾಗಿ ಯೋಚಿಸುಸಲು ಹೋಗುವುದಿಲ್ಲ.ಇನ್ನು ಅತಿದೊಡ್ಡ ಸಿಕ್ಸರ್‌ಗಳನ್ನು ಹೊಡೆಯುವ ವಿಷಯದಲ್ಲಿ ಯಾರೂ ಡ್ರೆ ರಸ್‌ನೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ನಾನು ಭಾವಿಸುತ್ತೇನೆ.ನನಗೆ ಒಂದು ಗುಡ್ ಲೆಂಗ್ತ್ ಬಾಲ್ ಇದ್ರೆ ಮುಗಿತು, ಈ ವಿಚಾರದಲ್ಲಿ ರಿಂಕು ನನಗೆ ಸ್ಪರ್ಧಿಯಾಗಿದ್ದಾನೆ.ಅವನೊಬ್ಬ ಪಾಕೆಟ್ ರಾಕೆಟ್ ಆಗಿದ್ದಾನೆ. ಆದರೆ ನನ್ನ ಬ್ಯಾಟ್ ನ ವೇಗ ನನಗೆ ತಿಳಿದಿದೆ.ನಾನು ಉತ್ತಮ ಸಂಪರ್ಕವನ್ನು ಮಾಡಿದರೆ ಸುಲಭವಾಗಿ 115 ಮೀಟರ್ ದೂರ ಸಿಕ್ಸರ್ ಹೊಡೆಯಬಹುದು" ಎಂದು ರಸೆಲ್ ಹೇಳಿದರು.

ಇದನ್ನೂ ಓದಿ: ಮೂವರು ಕ್ರಿಕೆಟ್ ದಂತಕಥೆಗಳ ಹೆಸರನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಸ್ಟ್ಯಾಂಡ್‌ಗಳಿಗೆ ಇಡಲು ಸಿಎಂ ಮನವಿ 

ಪಂದ್ಯಾವಳಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಕೆಕೆಆರ್ ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳನ್ನು ಗೆದ್ದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

 

Trending News