ತೆಲುಗು ಹಾಡಿಗೆ ಮತ್ತೊಮ್ಮೆ ಪತ್ನಿ ಜೊತೆ ಭರ್ಜರಿ ಸ್ಟೆಪ್ ಹಾಕಿದ ಡೇವಿಡ್ ವಾರ್ನರ್ ...!

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೇವಲ ತಮ್ಮ ಬ್ಯಾಟಿಂಗ್ ಕೌಶಲ್ಯವಷ್ಟೇ ಅಲ್ಲದೆ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಅವರು ಆಗಾಗ ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕ ಸಾಬೀತುಪಡಿಸುತ್ತಲೇ ಇರುತ್ತಾರೆ.

Last Updated : May 12, 2020, 11:44 PM IST
ತೆಲುಗು ಹಾಡಿಗೆ ಮತ್ತೊಮ್ಮೆ ಪತ್ನಿ ಜೊತೆ ಭರ್ಜರಿ ಸ್ಟೆಪ್ ಹಾಕಿದ ಡೇವಿಡ್ ವಾರ್ನರ್ ...! title=
Photo Courtsey : Instagram

ನವದೆಹಲಿ: ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೇವಲ ತಮ್ಮ ಬ್ಯಾಟಿಂಗ್ ಕೌಶಲ್ಯವಷ್ಟೇ ಅಲ್ಲದೆ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು ಅವರು ಆಗಾಗ ಸಾಮಾಜಿಕ ಮಾಧ್ಯಮದ ವೇದಿಕೆಗಳ ಮೂಲಕ ಸಾಬೀತುಪಡಿಸುತ್ತಲೇ ಇರುತ್ತಾರೆ.

ಇದಕ್ಕೂ ಮೊದಲು, ಮಹೇಶ್ ಬಾಬು ಅಭಿನಯದ 2006 ರ ಆಕ್ಷನ್ ಥ್ರಿಲ್ಲರ್ 'ಪೋಕಿರಿ' ಯಿಂದ ಪ್ರಸಿದ್ಧ ತೆಲುಗು ಚಲನಚಿತ್ರ ಸಂಭಾಷಣೆಯನ್ನು ತುಟಿ-ಸಿಂಕ್  ಮಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ಇದಾದ ನಂತರ ಈಗ ವಾರ್ನರ್ ಈಗ ಮತ್ತೊಂದು ತೆಲುಗು ಸಾಂಗ್ ನೊಂದಿಗೆ ಬಂದಿದ್ದಾರೆ. ಇದರಲ್ಲಿ ತಮ್ಮ ಪತ್ನಿ ಹಾಗೂ ಪುತ್ರಿ ಇಬ್ಬರು ರಾಮಲೂ  ರಾಮೂಲು ಹಾಡಿಗೆ ಸ್ಟೆಪ್ ಹಾಕಿದ್ದಾರೆ.

ಒಂದೆಡೆಗೆ ಮಗಳು ತನಗೆ ಇಷ್ಟ ಬಂದಂತೆ ಹಾಡಿಗೆ ಹೆಜ್ಜೆ ಹಾಕುತ್ತಿದ್ದರೆ, ವಾರ್ನರ್ ಹಾಗೂ ಆತನ ಪತ್ನಿ ಮಾತ್ರ ಹಾಡಿಗೆ ತಾಳ ಬದ್ದವಾಗಿ ಡ್ಯಾನ್ಸ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.ಐಪಿಎಲ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ತಂಡದ ಭಾಗವಾಗಿರುವುದರಿಂದಾಗಿವಾರ್ನರ್‌ಗೆ ಹೈದರಾಬಾದ್‌ನಲ್ಲಿ ಅಪಾರ ಅಭಿಮಾನಿಗಳಿದ್ದಾರೆ.

ತಮ್ಮ ಕೈಯಲ್ಲಿ ಬ್ಯಾಟ್‌ನೊಂದಿಗೆ ತನ್ನ ಎಸ್‌ಆರ್‌ಹೆಚ್ ಕಿಟ್‌ನಲ್ಲಿ ಧರಿಸಿದ ವಾರ್ನರ್, ಸಂಪೂರ್ಣ ಸಿಂಕ್‌ನೊಂದಿಗೆ ಡೈಲಾಗ್ ಹೇಳಿದ್ದರು. ಆದರೆ ಅವರಿಗೆ ಈ ಡೈಲಾಗ್ ಯಾವ ಸಿನಿಮಾದ್ದು ಎನ್ನುವ ಮಾಹಿತಿ ಇರಲಿಲ್ಲ  ಆದ್ದರಿಂದ ಅವರು ತಮ್ಮ ಅಭಿಮಾನಿಗಳನ್ನು ಊಹಿಸಲು ಕೇಳಿದರು.

Trending News