ದ್ವಿಶತಕ ಸಿಡಿಸಿದ ಮ್ಯಾಕ್ಸ್‌ವೆಲ್‌ಗೆ ಈ ಭಾರತೀಯ ಬೌಲರ್‌ ಕಂಡ್ರೆ ಭಯ..! ಏಕೆ ಗೊತ್ತಾ? 

Glenn Maxwell : ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ತಂಡಗಳು ವಿಶ್ವಕಪ್ 2023 ರ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಬೌಲರ್ ಬಗ್ಗೆ ನೀಡಿರುವ ಹೇಳಿಕೆಯೊಂದು ಕುತೂಹಲ ಮೂಡಿಸಿದೆ. ಬನ್ನಿ ಈ ಕುರಿತ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ..

Written by - Krishna N K | Last Updated : Nov 11, 2023, 05:37 PM IST
  • ಆಸ್ಟ್ರೇಲಿಯಾ ಮತ್ತು ಭಾರತ ವಿಶ್ವಕಪ್ 2023 ರ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ.
  • ಆಸ್ಟ್ರೇಲಿಯಾದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಶಮಿ ಬಗ್ಗೆ ಮಾತನಾಡಿದ್ದಾರೆ.
  • ಮಾರಕ ಪ್ರದರ್ಶನದ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ.
ದ್ವಿಶತಕ ಸಿಡಿಸಿದ ಮ್ಯಾಕ್ಸ್‌ವೆಲ್‌ಗೆ ಈ ಭಾರತೀಯ ಬೌಲರ್‌ ಕಂಡ್ರೆ ಭಯ..! ಏಕೆ ಗೊತ್ತಾ?  title=

World Cup 2023 : ಆಸ್ಟ್ರೇಲಿಯಾ ಮತ್ತು ಭಾರತ ಎರಡೂ ತಂಡಗಳು ವಿಶ್ವಕಪ್ 2023 ಸೆಮಿಫೈನಲ್‌ಗೆ ಅರ್ಹತೆ ಪಡೆಕೊಂಡಿವೆ. ಟೀಂ ಇಂಡಿಯಾ ವೇಗದ ಬೌಲರ್ ಮೊಹಮ್ಮದ್ ಶಮಿ ಈ ಬಾರಿಯ ವಿಶ್ವಕಪ್‌ನಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಕೇವಲ 4 ಪಂದ್ಯಗಳಲ್ಲಿ ತಮ್ಮ ಮಾರಕ ಪ್ರದರ್ಶನದ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳಿಗೆ ಸಿಂಹಸ್ವಪ್ನವಾಗಿದ್ದಾರೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್ ವೆಲ್ ಶಮಿ ಬಗ್ಗೆ ನೀಡಿರುವ ಹೇಳಿಕೆ ಇದೀಗ ಕುತೂಹಲ ಮೂಡಿಸಿದೆ.

ಹೌದು.. ಅಫ್ಘಾನಿಸ್ತಾನ ವಿರುದ್ಧದ ಲೀಗ್ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ದ್ವಿಶತಕದೊಂದಿಗೆ ಅದ್ಧೂರಿ ಗೆಲ್ಲುವ ಸಾಧಿಸಿದ್ದರು. ಏಕಾಂಗಿಯಾಗಿ ತಂಡವನ್ನು ಗುರಿಯತ್ತ ಮುನ್ನಡೆಸಿ ಸೆಮಿಫೈನಲ್‌ ಪ್ರವೇಶಿಸಿದರು. ಈ ಪಂದ್ಯದಲ್ಲಿ 292 ರನ್ ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 91 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಅಫ್ಘಾನಿಸ್ತಾನ ಪಂದ್ಯ ಗೆಲ್ಲುತ್ತದೆ ಎಂದು ಅಭಿಮಾನಿಗಳಿಂದ ಹಿಡಿದು ಎಲ್ಲರೂ ಭಾವಿಸಿದ್ದರು. ಆದರೆ ಮ್ಯಾಕ್ಸ್‌ವೆಲ್ ಎಂಬ ಚಂಡಮಾರುತ ಎಲ್ಲವನ್ನೂ ಬದಲಾಯಿಸುತ್ತೆ ಅಂತ ಯಾರು ಭಾವಿಸಿರಲಿಲ್ಲ.

ಇದನ್ನೂ ಓದಿ:IPL 2024 ರಲ್ಲಿ ಈ ತಂಡಕ್ಕಾಗಿ ಆಡಲಿದ್ದಾರೆ ರಚಿನ್ ರವೀಂದ್ರ.. ಹೊಸ ಇತಿಹಾಸ ಬರೆಯೋದು ಫಿಕ್ಸ್‌!!

ದೈಹಿಕವಾಗಿ ಸ್ಟ್ರಾಂಗ್‌ ಇಲ್ಲದಿದ್ದರೂ ಸಹ ಒಂಟಿ ಸಲಗದಂತೆ ಬ್ಯಾಟ್‌ ಹಿಡಿದು ನಿಂತು ಸೆಣಸಾಡಿದ ಮ್ಯಾಕ್ಸ್ ವೆಲ್ ಆಸ್ಟ್ರೇಲಿಯಾಗೆ ಗೆಲುವಿನ ಕಿರೀಟ ತೊಡಿಸಿದರು. ಮ್ಯಾಕ್ಸ್‌ವೆಲ್ 128 ಎಸೆತಗಳಲ್ಲಿ ಅಜೇಯ ದ್ವಿಶತಕ (201) ಬಾರಿಸಿದರು. ಇದರಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್‌ಗಳು ಸೇರಿವೆ. 

ಶಮಿಗೆ ಹೆದರಿದ ಮ್ಯಾಕ್ಸ್‌ವೆಲ್? : ಮೊಹಮ್ಮದ್ ಶಮಿಯನ್ನು ಎದುರಿಸುವುದು ತುಂಬಾ ಕಷ್ಟ ಎಂದು ಗ್ಲೆನ್ ಮ್ಯಾಕ್ಸ್‌ವೆಲ್ ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ. ಶಮಿ ಬೌಲ್‌ ಸ್ವಿಂಗ್ ಆಗುತ್ತದೆ, ಆಡಲು ತುಂಬಾ ಕಷ್ಟ. ಯಾರು ಬೇಕಾದರೂ ಬೌಲಿಂಗ್ ಮಾಡಬಹುದು ಆದರೆ ಶಮಿಯಂತೆ ಮಾಡಲು ಸಾಧ್ಯವಿಲ್ಲ. 2023 ರ ವಿಶ್ವಕಪ್‌ಗೆ ಟೀಮ್ ಇಂಡಿಯಾ ಅತ್ಯುತ್ತಮ ಬೌಲಿಂಗ್ ಲೈನ್‌ಅಪ್ ಹೊಂದಿದೆ. ಸಿರಾಜ್, ಶಮಿ, ಬುಮ್ರಾ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಮ್ಯಾಕ್ಸಿ ಟೀಂ ಇಂಡಿಯಾದ ಬೌಲರ್‌ಗಳನ್ನು ಶ್ಲಾಘಿಸಿದರು.

ಇದನ್ನೂ ಓದಿ: ವರೇ ಟೀಮ್‌ ಇಂಡಿಯಾದ ಮುಂದಿನ ಹಾರ್ದಿಕ್ ಪಾಂಡ್ಯ.. ಭಾರತದ ಆಲ್ ರೌಂಡರ್ ಆಗಿ ಮಿಂಚ್ತಾರಾ ಈ ಯುವ ಆಟಗಾರ?

ಮಾರಣಾಂತಿಕ ಫಾರ್ಮ್‌ನಲ್ಲಿರುವ ಶಮಿ : ವಿಶ್ವಕಪ್‌ 2023 ಮೊಹಮ್ಮದ್ ಶಮಿ ಅಬ್ಬರಕ್ಕೆ ಸಾಕ್ಷಿಯಾಗಿದೆ. ಶಮಿ ಎಸೆತಗಳನ್ನು ಎದುರಿಸಲು ದೊಡ್ಡ ದೊಡ್ಡ ಬ್ಯಾಟ್ಸ್‌ಮನ್‌ಗಳು ಹೆದರುತ್ತಿದ್ದಾರೆ. ಇಲ್ಲಿಯವರೆಗೆ ಕೇವಲ 4 ಪಂದ್ಯಗಳನ್ನು ಆಡುವ ಮೂಲಕ 16 ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ್ದಾರೆ. ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ತಲಾ 5 ವಿಕೆಟ್ ಪಡೆದಿದ್ದಾರೆ. ಸೆಮಿಫೈನಲ್‌ನಲ್ಲೂ ಅವರ ಪ್ರದರ್ಶನ ಇದೇ ರೀತಿ ಮುಂದುವರೆದರೆದ ಭಾರತ ಫೈನಲ್‌ ತಲುಪುವ ದಾರಿಯನ್ನು ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕದೇಶವಿದೇಶಮನರಂಜನೆಶಿಕ್ಷಣಉದ್ಯೋಗಆರೋಗ್ಯಜೀವನಶೈಲಿಆಧ್ಯಾತ್ಮ,  ಕ್ರೀಡೆಕ್ರೈಂವೈರಲ್ವ್ಯಾಪಾರತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm 
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News