ಟಿ-20 ವಿಶ್ವಕಪ್ ಗೆಲ್ಲಬೇಕಾದ್ರೆ ಈ ಆಟಗಾರನಿಗೆ ಅವಕಾಶ ನೀಡಿ: ರವಿಶಾಸ್ತ್ರಿ ಸಲಹೆ

ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಬಲಿಷ್ಠವಾಗಬೇಕೆಂದರೆ ಅರ್ಷದೀಪ್‍ ಸಿಂಗ್‍ಗೆ ಅವಕಾಶ ನೀಡಬೇಕೆಂದು ರವಿಶಾಸ್ತ್ರೀ ಸಲಹೆ ನೀಡಿದ್ದಾರೆ.

Written by - Puttaraj K Alur | Last Updated : Aug 8, 2022, 04:22 PM IST
  • ಟಿ-20 ವಿಶ್ವಕಪ್‍ ಗೆಲ್ಲಬೇಕೆಂದರೆ ಅರ್ಷದೀಪ್ ಸಿಂಗ್‍ಗೆ ಅವಕಾಶ ನೀಡಬೇಕು
  • ಟೀಂ ಇಂಡಿಯಾಗೆ ಉಪಯುಕ್ತ ಸಲಹೆ ನೀಡಿದ ಮಾಜಿ ಕೋಚ್ ರವಿಶಾಸ್ತ್ರಿ
  • ಟಿ-20 ವಿಶ್ವಕಪ್‍ ತಂಡದಲ್ಲಿ ಸ್ಥಾನ ಪಡೆಯಲು ಆಟಗಾರರ ನಡುವೆ ಪೈಪೋಟಿ
ಟಿ-20 ವಿಶ್ವಕಪ್ ಗೆಲ್ಲಬೇಕಾದ್ರೆ ಈ ಆಟಗಾರನಿಗೆ ಅವಕಾಶ ನೀಡಿ: ರವಿಶಾಸ್ತ್ರಿ ಸಲಹೆ title=
ಅರ್ಷದೀಪ್ ಸಿಂಗ್‍ಗೆ ಅವಕಾಶ ನೀಡುವಂತೆ ಸಲಹೆ

ನವದೆಹಲಿ: ಟಿ-20 ವಿಶ್ವಕಪ್‌ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಇದಕ್ಕೂ ಮುನ್ನ ಭಾರತ ತಂಡ ದುಬೈನಲ್ಲಿ ನಡೆಯಲಿರುವ ಏಷ್ಯಾಕಪ್‍ನಲ್ಲಿ ಭಾಗವಹಿಸಬೇಕಿದೆ. ಟಿ-20 ವಿಶ್ವಕಪ್ ಗಮನದಲ್ಲಿಟ್ಟುಕೊಂಡು ವೆಸ್ಟ್ ಇಂಡೀಸ್ ನೆಲದಲ್ಲಿ ಟೀಂ ಇಂಡಿಯಾ ಸರಣಿ ಆಡುತ್ತಿದೆ. ಇದೀಗ ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಟೀಂ ಇಂಡಿಯಾಗೆ ಉತ್ತಮ ಸಲಹೆ ನೀಡಿದ್ದಾರೆ. ಮಾರಣಾಂತಿಕ ಬೌಲರ್ ನನ್ನು ಟೀಂ ಇಂಡಿಯಾಕ್ಕೆ ಸೇರಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ಆಟಗಾರನಿಗೆ ಅವಕಾಶ ನೀಡುವಂತೆ ರವಿಶಾಸ್ತ್ರಿ ಸಲಹೆ

ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ರವಿಶಾಸ್ತ್ರಿ, ‘ಭಾರತ ತಂಡಕ್ಕೆ ವೈವಿಧ್ಯತೆಯ ಅಗತ್ಯವಿದೆ. ಎಡಗೈ ಬೌಲರ್‌ಗಳು ಸಾಮಾನ್ಯವಾಗಿ ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡುವುದರಿಂದ ತಂಡಕ್ಕೆ + ಪಾಯಿಂಟ್ ಆಗಬಹುದು. ಟೀಂ ಇಂಡಿಯಾದ ಬೌಲಿಂಗ್ ವಿಭಾಗ ಬಲಿಷ್ಠವಾಗಬೇಕೆಂದರೆ ಅರ್ಷದೀಪ್‍ ಸಿಂಗ್‍ಗೆ ಅವಕಾಶ ನೀಡಬೇಕೆಂದು ರವಿಶಾಸ್ತ್ರೀ ಸಲಹೆ ನೀಡಿದ್ದಾರೆ.

ಇದನ್ನೂ ಓದಿಕಾಮನ್‌ವೆಲ್ತ್ ಗೇಮ್ಸ್ 2022: 17 ಚಿನ್ನ ಸೇರಿದಂತೆ ಒಟ್ಟು 49 ಪದಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ತಲುಪಿದ ಭಾರತ

ಬುಮ್ರಾಗೆ ಸ್ಥಾನ ಖಚಿತ  

ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಟಿ-20 ವಿಶ್ವಕಪ್‌ಗೆ ಆಡಲು ಸಿದ್ಧರಾಗಿದ್ದಾರೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ. ತಂಡದಲ್ಲಿ ಭುವಿ, ಜಸ್ಪ್ರೀತ್, ಶಮಿ ಇರಬೇಕು. ಇವರ ಜೊತೆಗೆ ತಂಡದಲ್ಲಿ ಅರ್ಷದೀಪ್ ಸಿಂಗ್ ಅವರಿಗೂ ಅವಕಾಶ ಕಲ್ಪಿಸಬೇಕು. ಈ ಬೌಲರ್ ಟೀಂ ನಿರೀಕ್ಷೆಗೆ ತಕ್ಕಂತೆ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಹೊಸ ಮತ್ತು ಹಳೆಯ ಚೆಂಡಿನೊಂದಿಗೆ ಆತ ಉತ್ತಮ ಪ್ರದರ್ಶನ ನೀಡಬಲ್ಲವೆಂದು ರವಿಶ್ರಾಸ್ತ್ರಿ ಹೇಳಿದ್ದಾರೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅದ್ಭುತ ಪ್ರದರ್ಶನ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅರ್ಷದೀಪ್ ಸಿಂಗ್ ಅದ್ಭುತ ಆಟ ಪ್ರದರ್ಶಿಸಿದರು. ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ 5 ಟಿ-20 ಪಂದ್ಯಗಳಲ್ಲಿ ಪ್ರಮುಖ ವಿಕೆಟ್‌ಗಳನ್ನು ಪಡೆದು ಮಿಂಚಿದರು. ಅರ್ಷದೀಪ್ ಬೌಲಿಂಗ್‍ ಎದುರಿಸವುದು ಸುಲಭವಲ್ಲ. ಅವರ 4 ಓವರ್‌ಗಳು ಸೋಲು ಮತ್ತು ಗೆಲುವಿನ ನಡುವಿನ ವ್ಯತ್ಯಾಸ ನಿರ್ಧರಿಸುತ್ತವೆ. ಡೆತ್ ಓವರ್‌ಗಳಲ್ಲಿ ಅವರು ಅಪಾಯಕಾರಿ ಬೌಲಿಂಗ್ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ.

ಇದನ್ನೂ ಓದಿ: ಕಾಮನ್ ವೆಲ್ತ್ ಗೇಮ್ಸ್ನಲ್ಲಿ ಪದಕ ಗೆದ್ದ ದೀಪಿಕಾ: ಪತ್ನಿಗೆ ಹೀಗೆ ಶುಭಕೋರಿದ ದಿನೇಶ್ ಕಾರ್ತಿಕ್

ಟಿ-20 ವಿಶ್ವಕಪ್‌ಗೆ ತೀವ್ರ ಪೈಪೋಟಿ  

ಟಿ-20 ವಿಶ್ವಕಪ್ ತಂಡಕ್ಕೆ ಕೇವಲ 15 ಆಟಗಾರರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ತಂಡದಲ್ಲಿ ಸ್ಥಾನ ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಬೌಲಿಂಗ್ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜಸ್ಪ್ರೀತ್ ಬುಮ್ರಾ ಆಡುವ XIಗೆ ಸೇರ್ಪಡೆಗೊಳ್ಳಲಿದ್ದಾರೆ. ಹರ್ಷಲ್ ಪಟೇಲ್ ಗಾಯಗೊಂಡ ನಂತರ ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್ ಕೂಡ ರೇಸ್‍ನಲ್ಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News