ಭಾರತ-ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ

   

Last Updated : Nov 20, 2017, 06:36 PM IST
ಭಾರತ-ಶ್ರೀಲಂಕಾ ನಡುವಣ ಮೊದಲ ಟೆಸ್ಟ್ ಡ್ರಾನಲ್ಲಿ ಅಂತ್ಯ title=

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದೆ.

ಹಿಂದಿನ ದಿನದ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತನ್ನ 50 ನೇ ಅಂತಾರಾಷ್ಟ್ರೀಯ ಶತಕವನ್ನು ಹೊಡೆದಿದ್ದರು. ಟೀಂ ಇಂಡಿಯಾ ಪರ ಭರ್ಜರಿ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ 70 ರನ್ಗಳ ವರೆಗೆ ಬಹಳ  ತಾಳ್ಮೆಯಿಂದಿದ್ದರು. ನಂತರ ತಮ್ಮ ಮಾರಕ ಬ್ಯಾಟಿಂಗ್ ದಾಳಿ ನಡೆಸಿದ್ದರಿಂದ ಪಂದ್ಯ ಭಾರತದ ಪರ ತಿರುಗಿತು. ನಂತರದಲ್ಲಿ ಕೊಹ್ಲಿ 6 ಮತ್ತು 4 ರನ್ಗಳನ್ನು ಹೊಡೆಯುವ ಮೂಲಕ ತಂಡವನ್ನು ಮುನ್ನಡೆಸಿದರು. 

18ನೇ ಟೆಸ್ಟ್ ಶತಕಗಳನ್ನು ಗಳಿಸುವ ಮೂಲಕ ಕೊಹ್ಲಿ ಅವರ ಹೆಸರು ಮೊಹಮ್ಮದ್ ಅಜರುದ್ದೀನ್ (22), ವೀರೇಂದ್ರ ಸೆಹ್ವಾಗ್ (23), ಸುನಿಲ್ ಗಾವಸ್ಕರ್ (34), ರಾಹುಲ್ ದ್ರಾವಿಡ್ (36) ಮತ್ತು ಸಚಿನ್ ತೆಂಡೂಲ್ಕರ್ (51), ದಿಲೀಪ್ ವೆಂಗ್ಸರ್ಕರ್ (17) ಅವರಿಗಿಂತ ಮುಂದಿದ್ದಾರೆ. 

ಭಾರತವು ಎಂಟು ವಿಕೆಟ್ ನಷ್ಟಕ್ಕೆ ಭಾರತ 352 ರನ್ಗಳನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡು ಶ್ರೀಲಂಕಾಗೆ ಟೆಸ್ಟ್ ಪಂದ್ಯವನ್ನು ಗೆಲ್ಲಲು 231 ರನ್ಗಳ ಟಾರ್ಗೆಟ್ ನಿಗದಿಗೊಳಿಸಿತು. ಭಾರತವು 190 ರನ್ಗಳ ಮುನ್ನಡೆ ದಾಟಿದ ನಂತರ, ಕೊಹ್ಲಿ ತ್ವರಿತ ರನ್ ಗಳಿಸುವ ಮೂಲಕ ಮುನ್ನಡೆ ಕಾಯ್ದುಕೊಳ್ಳಲು ನಿರ್ಧರಿಸಿ, ಎರಡನೇ ಇನ್ನಿಂಗ್ಸ್ ನಲ್ಲಿ ಅಜೇಯ 104 ರನ್ ಗಳಿಸಿಸುವ ಮೂಲಕ ಔಟಾಗದೆ ಉಳಿದರು. ಶಿಖರ್ ಧವನ್ 94, ಕೆಎಲ್ ರಾಹುಲ್ 79 ರನ್ ಗಳಿಸಿದ್ದಾರೆ.

18ನೇ ಟೆಸ್ಟ್ ಶತಕಗಳನ್ನು ಗಳಿಸುವ ಮೂಲಕ ಕೊಹ್ಲಿ ಅವರ ಹೆಸರು ಮೊಹಾಮ್ಮದ್ ಅಜರುದ್ದೀನ್ (22), ವೀರೇಂದ್ರ ಸೆಹ್ವಾಗ್ (23), ಸುನಿಲ್ ಗಾವಸ್ಕರ್ (34), ರಾಹುಲ್ ದ್ರಾವಿಡ್  (36) ಮತ್ತು ಸಚಿನ್ ತೆಂಡೂಲ್ಕರ್ (51), ದಿಲೀಪ್ ವೆಂಗ್ಸರ್ಕರ್ (17) ಅವರಿಗಿಂತ ಮುಂದಿದ್ದಾರೆ.

ಎರಡನೇ ಇನ್ನಿಂಗ್ಸ್ ನಲ್ಲಿ ಶ್ರೀಲಂಕಾ ಆಟಗಾರರು ನಿಧಾನಗತಿಯ ಬ್ಯಾಟಿಂಗ್ ಮಾಡಿದರು. ಲಂಕಾದ ಆರಂಭಿಕರು ವೈಫಲ್ಯ ಕಂಡದರು. ಈ ವೇಳೆ ಚಾಂಡಿಮಲ್ 20, ಡಿಕ್ವೆಲ್ಲಾ 27 ರನ್ ಗಳಿಸಿ ತಂಡ ಸೋಲಿನ ಸುಳಿಯಿಂದ ಪಾರಾಗಲು ನೆರವಾದರು. 

ಈ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

Trending News