ಪಾಕ್ ವಿರುದ್ಧ ಭಾರತ ತಂಡವೇ ಕಿಂಗ್..!‌ ದಾಖಲೆಗಳು ಹೇಳೋದೇನು..?

ಈ ಜಗತ್ತಿನಲ್ಲಿ ಕ್ರಿಕೆಟ್‌ ಮ್ಯಾಚ್‌ಗಳು ಅದೆಷ್ಟೋ ನಡೆದಿವೆ, ಮುಗಿದಿವೆ. ಆದರೆ ಸದಾ ನೆನಪಲ್ಲಿ ಉಳಿಯೋದು ಭಾರತ VS ಪಾಕ್‌ ಪಂದ್ಯಗಳು ಮಾತ್ರ. ಅರೆರೆ ಏನಿದು ಸಿನಿಮಾ ಡೈಲಾಗ್‌ ಅಂದುಕೊಂಡ್ರಾ..? ಇಲ್ಲ ಇದು ವಾಸ್ತವ ಕಣ್ರೀ. ಈ ವಾಸ್ತವ ಜಗತ್ತಿಗೇ ಗೊತ್ತು. ಭಾರತ VS ಪಾಕಿಸ್ತಾನ ಮ್ಯಾಚ್‌ ಯುದ್ಧಕ್ಕಿಂತ ರಣಭೀಕರ ಮತ್ತು ಕ್ಷಣಕ್ಷಣಕ್ಕೂ ಗಂಭೀರ. ಇಂತಹ ಪಂದ್ಯವನ್ನ ನೋಡಲು ಜಗತ್ತೇ ಕಾಯುತ್ತಿರುತ್ತೆ. ಇವತ್ತು ಕೂಡ ಅಂತಹದ್ದೇ ಘಳಿಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ಭಾರತ VS ಪಾಕ್‌ ಹೈವೋಲ್ಟೇಜ್‌ ಮ್ಯಾಚ್‌ ಶುರುವಾಗಲಿದೆ.

Written by - Malathesha M | Last Updated : Aug 28, 2022, 05:49 PM IST
  • ಬರೋಬ್ಬರಿ 14 ಪಂದ್ಯಗಳು ಏಷ್ಯಾ ಕಪ್‌ ಟೋರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದಿವೆ.‌
  • ಗೆಲುವಿನ ವಿಚಾರಕ್ಕೆ ಬರೋದಾದ್ರೆ ಟೀಂ ಇಂಡಿಯಾ ಕಿಂಗ್ ಎನ್ನಬಹುದು.‌
ಪಾಕ್ ವಿರುದ್ಧ ಭಾರತ ತಂಡವೇ ಕಿಂಗ್..!‌ ದಾಖಲೆಗಳು ಹೇಳೋದೇನು..? title=

ನವದೆಹಲಿ: ಈ ಜಗತ್ತಿನಲ್ಲಿ ಕ್ರಿಕೆಟ್‌ ಮ್ಯಾಚ್‌ಗಳು ಅದೆಷ್ಟೋ ನಡೆದಿವೆ, ಮುಗಿದಿವೆ. ಆದರೆ ಸದಾ ನೆನಪಲ್ಲಿ ಉಳಿಯೋದು ಭಾರತ VS ಪಾಕ್‌ ಪಂದ್ಯಗಳು ಮಾತ್ರ. ಅರೆರೆ ಏನಿದು ಸಿನಿಮಾ ಡೈಲಾಗ್‌ ಅಂದುಕೊಂಡ್ರಾ..? ಇಲ್ಲ ಇದು ವಾಸ್ತವ ಕಣ್ರೀ. ಈ ವಾಸ್ತವ ಜಗತ್ತಿಗೇ ಗೊತ್ತು. ಭಾರತ VS ಪಾಕಿಸ್ತಾನ ಮ್ಯಾಚ್‌ ಯುದ್ಧಕ್ಕಿಂತ ರಣಭೀಕರ ಮತ್ತು ಕ್ಷಣಕ್ಷಣಕ್ಕೂ ಗಂಭೀರ. ಇಂತಹ ಪಂದ್ಯವನ್ನ ನೋಡಲು ಜಗತ್ತೇ ಕಾಯುತ್ತಿರುತ್ತೆ. ಇವತ್ತು ಕೂಡ ಅಂತಹದ್ದೇ ಘಳಿಗೆ ಬಂದಿದೆ. ಕೆಲವೇ ಕ್ಷಣಗಳಲ್ಲಿ ಭಾರತ VS ಪಾಕ್‌ ಹೈವೋಲ್ಟೇಜ್‌ ಮ್ಯಾಚ್‌ ಶುರುವಾಗಲಿದೆ.

ಏಷ್ಯಾ ಕಪ್‌ನಲ್ಲಿ ಭಾರತವೇ ರಾಜನಂತೆ ರಾರಾಜಿಸುತ್ತಿದೆ. ಏಕಂದರೆ ಭಾರತ ಈವರೆಗೂ ಒಟ್ಟು 7 ಬಾರಿ ಏಷ್ಯಾ ಕಪ್‌ ಗೆದ್ದು ಬೀಗಿದೆ. ಆದರೆ ಪಾಕ್‌ ಕೇವಲ 2 ಬಾರಿ ಏಷ್ಯಾ ಕಪ್‌ ಟ್ರೋಪಿಯನ್ನ ಗೆದ್ದಿದೆ. ಇದೀಗ ಮೊದಲ ಪಂದ್ಯದಲ್ಲೇ ಬದ್ಧ ವೈರಿಗಳ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಇನ್ನು ಭಾರತ & ಪಾಕಿಸ್ತಾನ ನಡುವಿನ ಏಷ್ಯಾ ಕಪ್‌ ಜರ್ನಿಯನ್ನ ಡೀಟೇಲ್‌ ಆಗಿ ಮುಂದೆ ತಿಳಿಯೋಣ.

ಭಾರತವೇ ಕಿಂಗ್..!

ಏಷ್ಯಾ ಕಪ್‌ ಟೂರ್ನಿಗೆ ಭಾರಿ ಅಭಿಮಾನಿ ಬಳಗವಿದ್ದು, ನೂರಾರು ಕೋಟಿ ಅಭಿಮಾನಿಗಳು ಏಷ್ಯಾ ಕಪ್‌ ನೋಡಲು ಕಾಯುತ್ತಿದ್ದಾರೆ. ಹಾಗಾದರೆ ಏಷ್ಯಾ ಕಪ್‌ ಟೋರ್ನಿಯಲ್ಲಿ ಪಾಕ್ ವಿರುದ್ಧ ಭಾರತ ಎಷ್ಟು ಪಂದ್ಯ ಆಡಿರಬಹುದು ಹೇಳಿ..? ಬರೋಬ್ಬರಿ 14 ಪಂದ್ಯಗಳು ಏಷ್ಯಾ ಕಪ್‌ ಟೋರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆದಿವೆ.‌ ಗೆಲುವಿನ ವಿಚಾರಕ್ಕೆ ಬರೋದಾದ್ರೆ ಟೀಂ ಇಂಡಿಯಾ ಕಿಂಗ್ ಎನ್ನಬಹುದು.‌ ಯಾಕಂದ್ರೆ ಒಟ್ಟು 14 ಪಂದ್ಯಗಳಲ್ಲಿ ಭಾರತ 8 ಪಂದ್ಯ ಗೆದ್ದು ಬೀಗಿದೆ, ಆದರೆ ಪಾಕಿಸ್ತಾನ ಕೇವಲ 5 ಪಂದ್ಯಗಳಲ್ಲಿ ಗೆದ್ದಿದೆ. ಇನ್ನೊಂದು ಪಂದ್ಯ ಮಾತ್ರ ಫಲಿತಾಂಶ ಇಲ್ಲದೆಯೇ ಅಂತ್ಯವಾಗಿದೆ.

ಇದನ್ನೂ ಓದಿ: Talikoti : ಮಹಾಗಣಪತಿ ಪ್ರತಿಷ್ಠಾಪನೆ ಸ್ಥಳದ ಭೂಮಿಪೂಜಾದಲ್ಲಿ ಸಾವರ್ಕರ್ ಪೋಟೋ!

ಟಿ-20ಯಲ್ಲೂ ಹವಾ

ಏಷ್ಯಾ ಕಪ್‌ ಮಾತ್ರವಲ್ಲ ಅಂತಾರಾಷ್ಟ್ರೀಯ ಟಿ-20 ಪಂದ್ಯಾವಳಿ ವಿಚಾರಕ್ಕೆ ಬಂದರೂ ಭಾರತ ಕಿಂಗ್‌. ಪಾಕಿಸ್ತಾನ ವಿರುದ್ಧ ಭಾರತ ಈವರೆಗೂ 9 ಪಂದ್ಯ ಆಡಿದೆ. ಈ ಪೈಕಿ ಭಾರತ 7 ಟಿ-20 ಪಂದ್ಯಗಳನ್ನ ಗೆದ್ದು ಬೀಗಿದೆ. ಆದರೆ ಪಾಕ್ ಕೇವಲ 2 ಟಿ-20 ಮ್ಯಾಚ್‌ಗಳಲ್ಲಿ ಭಾರತ ವಿರುದ್ಧ ಗೆಲುವು ಕಂಡಿದೆ. ಹೀಗಾಗಿ ಭಾರತವೇ ಇಂದಿನ ಪಂದ್ಯದಲ್ಲೂ ಗೆಲ್ಲುವ ಫೇವರಿಟ್‌ ತಂಡವಾಗಿದೆ. ಇಂದು ಭಾರತ VS ಪಾಕ್‌ ಮಧ್ಯೆ ನಡೆಯಲಿರುವ ಏಷ್ಯಾ ಕಪ್‌ ಟಿ-20 ಮ್ಯಾಚ್‌ ಕಿಚ್ಚು ಹಚ್ಚಿದೆ.

ಭಾರತ-ಪಾಕ್‌ ಟಿ-20 ಮ್ಯಾಚ್‌ ಹಿಸ್ಟರಿ

1) 2007, ಸೆಪ್ಟೆಂಬರ್‌ 14: ಭಾರತಕ್ಕೆ ಬೌಲ್‌ ಔಟ್‌ನಲ್ಲಿ ಗೆಲುವು
2) 2007, ಸೆಪ್ಟೆಂಬರ್‌ 24: ಭಾರತಕ್ಕೆ 5 ರನ್‌ಗಳ ರೋಚಕ ಜಯ
3) 2012, ಸೆಪ್ಟೆಂಬರ್‌ 30: ಭಾರತಕ್ಕೆ 8 ವಿಕೆಟ್‌ ಭರ್ಜರಿ ಗೆಲುವು
4) 2012, ಡಿಸೆಂಬರ್‌ 25: ಪಾಕ್‌ ವಿರುದ್ಧ ಭಾರತಕ್ಕೆ 5 ವಿಕೆಟ್‌ ಸೋಲು
5) 2012, ಡಿಸೆಂಬರ್‌ 28: ಭಾರತಕ್ಕೆ 11 ರನ್‌ಗಳ ರೋಚಕ ಜಯ
6) 2014, ಮಾರ್ಚ್ 21: ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಗೆಲುವು
7) 2016, ಫೆಬ್ರವರಿ 02: ಭಾರತಕ್ಕೆ 5 ವಿಕೆಟ್‌ಗಳ‌ ಗೆಲುವು
8) 2016, ಮಾರ್ಚ್ 19: ಭಾರತಕ್ಕೆ 6 ವಿಕೆಟ್‌ಗಳ ಜಯ
9) 2021, ಅಕ್ಟೋಬರ್‌ 24: ಭಾರತ ತಂಡಕ್ಕೆ 10 ವಿಕೆಟ್‌ಗಳ ಸೋಲು

ಇನ್ನು ಪಾಕಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ತೋರಿರುವ ಭಾರತದ ಬ್ಯಾಟ್ಸ್‌ಮನ್‌ ಯಾರು ಅಂತಾ ನೋಡುವುದಾದರೆ, ಕೊಹ್ಲಿಯೇ ಮೊದಲ ಸ್ಥಾನವನ್ನ ಪಡೆಯುತ್ತಾರೆ. ವಿರಾಟ್‌ ಕೊಹ್ಲಿ ಒಟ್ಟಾರೆ 311 ರನ್‌ ಸಿಡಿಸಿ 7 ಬಾರಿ ಪಾಕ್‌ ವಿರುದ್ಧ ಬ್ಯಾಟ್‌ ಬೀಸಿದ್ದಾರೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಜೊತೆಗೆ ಇಂದಿನ ಮ್ಯಾಚ್ ಕೊಹ್ಲಿಗೆ 100ನೇ ಪಂದ್ಯವೂ ಹೌದು. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಜಗತ್ತಿನ ಕ್ರಿಕೆಟ್‌ ಪ್ರೇಮಿಗಳ ಗಮನ ಸೆಳೆದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News