IPL : ಶತಕದ ಹಾದಿಯಲ್ಲಿ ಕೊಹ್ಲಿ ಅಬ್ಬರದ ಆಟ, ಪಂಜಾಬ್ ಗೆ 242 ರನ್ ಟಾರ್ಗೆಟ್ ನೀಡಿದ ರಾಯಲ್ ಚಾಲೆಂಜರ್ಸ್

IPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದು, ಮೊದಲ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ  ರನ್ ಗಳ ಟಾರ್ಗೆಟ್ ನೀಡಿದೆ. 

Written by - Zee Kannada News Desk | Last Updated : May 9, 2024, 10:07 PM IST
  • ಒಟ್ಟು 7 ಫೋರ್ ಹಾಗೂ 6 ಸಿಕ್ಸ್ ಬಾರಿಸಿದ ಕೊಹ್ಲಿ ಭರ್ಜರಿ ಆಟವನ್ನು ಆಡಿದ್ದಾರೆ
  • ಪಂಜಾಬ್ ಕಿಂಗ್ಸ್ ತಂಡಕ್ಕೆ 242 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ .
  • ಐಪಿಎಲ್ 2024ರ 58ನೇ ಪಂದ್ಯ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ .
IPL : ಶತಕದ ಹಾದಿಯಲ್ಲಿ ಕೊಹ್ಲಿ ಅಬ್ಬರದ ಆಟ, ಪಂಜಾಬ್ ಗೆ 242 ರನ್ ಟಾರ್ಗೆಟ್ ನೀಡಿದ ರಾಯಲ್ ಚಾಲೆಂಜರ್ಸ್  title=

PBKS needs 242 runs to win : ಐಪಿಎಲ್ 2024ರ 58ನೇ ಪಂದ್ಯ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಟಾಸ್ ಆಗಿ, ಪಂಜಾಬ್ ಕಿಂಗ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಇದನ್ನು ಓದಿ : ಎಸ್‌ಎಸ್‌ಎಲ್‌ಸಿ ಟಾಪರ್‌ ಬಾಗಲಕೋಟೆ ಅಂಕಿತಾಗೆ ಶುಭಕೋರಿದ ರಿಷಬ್ ಶೆಟ್ಟಿ

ಈ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಒಟ್ಟು 11 ಪಂದ್ಯಗಳನ್ನು ಆಡಿ ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಏಳು ಪಂದ್ಯಗಳಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 11 ಪಂದ್ಯಗಳನ್ನು ಆಡಿ ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಏಳು ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿ 7ನೇ ಸ್ಥಾನದಲ್ಲಿದೆ. 

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಭರ್ಜರಿ   47 ಎಸೆತಕ್ಕೆ 92 ರನ್ ಗಳಿಸಿದ್ದು, ಸ್ವಲ್ಪದರಲ್ಲೇ ಶತಕ ಬಾರಿಸುವಲ್ಲಿ ಮಿಸ್ ಆಗಿದ್ದಾರೆ. ಒಟ್ಟು 7 ಫೋರ್ ಹಾಗೂ 6 ಸಿಕ್ಸ್ ಬಾರಿಸಿದ ಕೊಹ್ಲಿ ಭರ್ಜರಿ ಆಟವನ್ನು ಆಡಿದ್ದಾರೆ. 

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮ್ಯಾನ್ ಗಳಾಗಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು.  ವಿರಾಟ್ ಕೊಹ್ಲಿ 92 ( 47 ) , ಫಾಫ್ ಡು ಪ್ಲೆಸಿಸ್ (ಸಿ) 9(7), ವಿಲ್ ಜಾಕ್ಸ್ 12(7), ರಜತ್ ಪಾಟಿದಾರ್ 55(23), ದಿನೇಶ್ ಕಾರ್ತಿಕ್ (ಡಬ್ಲ್ಯೂ), 18(7 )  ಮಹಿಪಾಲ್ ಲೊಮ್ರೋರ್  0(2)  ,ಕ್ಯಾಮೆರಾನ್ ಗ್ರೀನ್ 46 (27), ಸ್ವಪ್ನಿಲ್ ಸಿಂಗ್ 1(1) ರನ್ ಗಳಿಸಿದರು. 

ಇದನ್ನು ಓದಿ : ಹೇಳಿಕೊಟ್ಟಂತೆ ಹೇಳದಿದ್ದರೆ ವೇಶ್ಯಾವಾಟಿಕೆ ಪ್ರಕರಣದಲ್ಲಿ ಲಾಕ್‌, ಮಹಿಳೆಯರಿಗೆ SIT ಬೆದರಿಕೆ : HDK

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಹರ್ಷಲ್ ಪಟೇಲ್  3 , ವಿಧ್ವತ್ ಕಾವೇರಪ್ಪ 2, ಅರ್ಷ್‌ದೀಪ್ ಸಿಂಗ್,  ಸ್ಯಾಮ್ ಕುರಾನ್ (ಸಿ) ತಲಾ 1 ವಿಕೆಟ್ ಪಡೆದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬ್ಯಾಟಿಂಗ್ ಮಾಡಿ, ಪಂಜಾಬ್ ಕಿಂಗ್ಸ್ ತಂಡಕ್ಕೆ 242 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News