ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಬಲ್ಲರೇ ವಿರಾಟ್ ಕೊಹ್ಲಿ?

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ 30ನೇ ವಯಸ್ಸಿನಲ್ಲಿ 66 ನೇ ಶತಕವನ್ನು ಸಿಡಿಸಿದ್ದಾರೆ.

Last Updated : Mar 21, 2019, 03:22 PM IST
ಸಚಿನ್ ತೆಂಡೂಲ್ಕರ್ ದಾಖಲೆ ಮುರಿಯಬಲ್ಲರೇ ವಿರಾಟ್ ಕೊಹ್ಲಿ? title=
File Image

ಕೋಲ್ಕತಾ: ಸಚಿನ್ ತೆಂಡುಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಮುರಿಯಬಲ್ಲರೇ ಅಥವಾ ಇಲ್ಲವೇ ಎಂಬುದಕ್ಕೆ ವಿರಾಟ್ ಕೊಹ್ಲಿ ಅವರೇ ಉತ್ತರಿಸಬೇಕು. ಆದರೆ ವಿಷಯಗಳನ್ನು ಸರಳವಾಗಿರಿಸಿಕೊಳ್ಳುವ ಸಾಮರ್ಥ್ಯವನ್ನು ಭಾರತದ ಶ್ರೇಷ್ಠ ನಾಯಕರು ಹೊಂದಿದ್ದಾರೆ ಎಂದು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜಾಕ್ ಕಾಲಿಸ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು 30 ನೇ ವಯಸ್ಸಿನಲ್ಲಿ 66 ಅಂತರರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದಾರೆ. ಸಚಿನ್ ಅವರ ಬ್ಯಾಟಿಂಗ್ ದಾಖಲೆಯನ್ನು ಮುರಿಯಲು ಕೊಹ್ಲಿ ಪ್ರಬಲ ಸ್ಪರ್ಧಿ ಎಂದು ಹಲವರು ನಂಬಿರುವುದಾಗಿ ಕಾಲಿಸ್ ಹೇಳಿದರು.

ವಿರಾಟ್ ಕೊಹ್ಲಿ ಬಗೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ  ಕಾಲಿಸ್, "ಕೊಹ್ಲಿ ತಮ್ಮ ಇಚ್ಚೆಯ ಗುರಿ ತಲುಪುವರು ಎಂದು ನಾನು ನಂಬುತ್ತೇನೆ. ಅವರು ವಿಶ್ವ ದರ್ಜೆಯ ಆಟಗಾರ. ಅವರೊಳಗೆ ಏನನ್ನಾದರೂ ಸಾಧಿಸುವ ಹಸಿವಿದೆ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಎಂಬುದು ಇಷ್ಟು ವರ್ಷಗಳ ಅವರ ಸಾಧನೆಯಲ್ಲಿ ತಿಳಿಯುತ್ತದೆ. ಅವರ ಬಗೆಗಿನ ಬಹಳ ಮುಖ್ಯವಾದ ಅಂಶವೆಂದರೆ, ಅವರು ವಿಷಯಗಳನ್ನು ಬಹಳ ಸರಳವಾಗಿ ನೋಡುತ್ತಾರೆ. ಜನರು ಕೊಹ್ಲಿ ಬ್ಯಾಟಿಂಗ್ ಅನ್ನು ಆನಂದಿಸುತ್ತಾರೆ" ಎಂದಿದ್ದಾರೆ.

ಹಾಗಾಗಿ ವಿರಾಟ್ ಕೊಹ್ಲಿ ಸಚಿನ್ ತೆಂಡುಲ್ಕರ್ ಅವರ ದಾಖಲೆಯನ್ನು ಮುರಿಯಬಲ್ಲರೇ ಎಂಬುದಕ್ಕೆ ಕೊಹ್ಲಿ ಮಾತ್ರವೇ ಉತ್ತರಿಸಬಹುದು. ಒಂದು ವೇಳೆ ಅವರು ಫಿಟ್ ಇದ್ದರೆ, ಮುಂದುವರೆಯಲು ಉತ್ಸುಕರಾಗಿದ್ದರೆ, ಅವರಿಂದ ಅಸಾಧ್ಯವಾದದ್ದು ಯಾವುದೂ ಇಲ್ಲ ಎಂದು ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಜಾಕ್ ಕಾಲಿಸ್ ತಿಳಿಸಿದ್ದಾರೆ.
 

Trending News