ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಕೆವಿನ್ ಪಿಟರ್ಸನ್

    

Last Updated : Mar 17, 2018, 08:33 PM IST
ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಕೆವಿನ್ ಪಿಟರ್ಸನ್  title=

ನವದೆಹಲಿ: ಇಂಗ್ಲೆಂಡ್ ತಂಡ ಬ್ಯಾಟ್ಸ್ ಮನ್ ಕೆವಿನ್ ಪೀಟರ್ಸನ್ ಶನಿವಾರದಂದು ಅಧಿಕೃತವಾಗಿ ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣವಾದ Instagramನಲ್ಲಿ ತಮ್ಮ ಕ್ರಿಕೆಟ್ ವಿಧಾಯದ ಕುರಿತಾದ ಪೋಸ್ಟ್ ನಲ್ಲಿ ಈ ಸಂಗತಿಯನ್ನು ಧೃಡಪಡಿಸಿದ್ದಾರೆ. 

 

Someone just tweeted me to tell me that I scored 30000+ runs including 152 fifty’s & 68 hundreds in my pro career. 4 Ashes wins. Home & away! T20 WC win. Beaten India in India. Home & away 100’s in all major Test nations apart from Bangladesh. All dedicated to my family who have just been the most unreal supporters through thick & thin! I’m super proud of everything! Thank you for all the quite lovely msgs! I loved entertaining you all! Ciao, cricket! I love this game!

A post shared by Kevin Pietersen (@kp24) on

"ನನಗೆ ಯಾರೋ ಒಬ್ಬರು ಟ್ವೀಟ್ ಮಾಡಿ ಕ್ರಿಕೆಟ್ ಕರಿಯರ್ ನಲ್ಲಿ ನಾನು 30 ಸಾವಿರಕ್ಕೂ ಅಧಿಕ ರನ್ ಗಳನ್ನು ಗಳಿಸಿದ್ದೇನೆ ಎಂದು ಹೇಳಲಾಗಿದೆ, ಅದರಲ್ಲಿ 152 ಅರ್ಧಶತಕಗಳು 68 ಶತಕಗಳು ಸೇರಿವೆ. ನಾಲ್ಕು ಆಶಿಸ್ ಟ್ರೋಪಿ,  ಟಿ 20 ವಿಶ್ವಕಪ್ ಗೆಲುವು, ಭಾರತವನ್ನು ಅದರ ನೆಲದಲ್ಲಿಯೇ ಸೋಲಿಸಿದ್ದು, ಬಾಂಗ್ಲಾದೇಶದಿಂದ ಹೊರತುಪಡಿಸಿ ಟೆಸ್ಟ್ ಆಡುವ ಎಲ್ಲ ದೇಶಗಳ ವಿರುದ್ದ ಶತಕಗಳಿಸಿದ್ದು. ಈ ಎಲ್ಲವು ಕೂಡಾ ನನಗೆ ಸದಾ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ ಸಮರ್ಪಿತ! ನಾನು ಇದರ ಬಗ್ಗೆ ಹೆಮ್ಮೆಪಡುತ್ತೇನೆ!  ನಿಮ್ಮ ಎಲ್ಲ ಸುಂದರವಾದ ಸಂದೇಶಗಳಿಗೆ  ಧನ್ಯವಾದಗಳು! ನಾನು ನಿಮ್ಮನ್ನು ರಂಜಸಿದ್ದಕ್ಕೆಗಾಗಿ ಸಂತಸಗೊಂಡಿದ್ದೇನೆ ! ನಾನು ಈ ಆಟವನ್ನು ಪ್ರೀತಿಸುತ್ತೇನೆ !" ಎಂದು ತಮ್ಮ Instagram ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಪಿಟೆರ್ಸನ್ ರವರ ನಿರ್ಧಾರಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಸಹ ಆಟಗಾರ ಮೈಕಲ್ ವಾನ್ "ಧನ್ಯವಾದಗಳು ನಿಮ್ಮ ಅದ್ಬುತ ಕರಿಯರ್ ಗೆ"  ಎಂದು ಪಿಟೆರ್ಸನ್ ರವರ ಕ್ರಿಕೆಟ್ ಕರಿಯರ್ ನ್ನು ಕೊಂಡಾಡಿದ್ದಾರೆ.

 

Trending News