ಕೆಪಿಎಲ್ ಕ್ರಿಕೆಟ್ ಟೂರ್ನಿ ಮಾರ್ಚ್ 7ರಿಂದ ಹುಬ್ಬಳ್ಳಿಯಲ್ಲಿ

KPL : ಹುಬ್ಬಳ್ಳಿಯಲ್ಲಿ 'ಕರುನಾಡು ಪ್ರೀಮಿಯರ್ ಲೀಗ್' ಮಾರ್ಚ್ 7ರಿಂದ ನಡೆಯಲಿದೆ ಎಂದು ಉಣಕಲ್ ನ ಆರ್. ಕೆ.ಕ್ರಿಯೇಷನ್ ಆಂಡ್ ಸ್ಪೋರ್ಟ್ಸ್ ಅಸೋಸಿಯೆಷನ್ ನಿರ್ದೇಶಕ ಲಿಂಗರಾಜ ಬಿಳೆಕಲ್ ಹೇಳಿದರು. 

Written by - Zee Kannada News Desk | Last Updated : Feb 12, 2024, 09:00 PM IST
  • ಹುಬ್ಬಳ್ಳಿಯಲ್ಲಿ 'ಕರುನಾಡು ಪ್ರೀಮಿಯರ್ ಲೀಗ್' ಮಾರ್ಚ್ 7ರಿಂದ ನಡೆಯಲಿದೆ
  • ಉಣಕಲ್ ನ ಆರ್.ಕೆ.ಕ್ರಿಯೇಷನ್ ಆಂಡ್ ಸ್ಪೋರ್ಟ್ಸ್ ಅಸೋಸಿಯೆಷನ್ ನಿರ್ದೇಶಕ ಲಿಂಗರಾಜ ಬಿಳೆಕಲ್ ಹೇಳಿದರು.
  • ಎಲ್ಲ ಆಟಗಾರಿಗೂ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಅಸೋಸಿಯೇಷನ್ ನಿಂದ ಮಾಡಲಾಗುತ್ತದೆ.
ಕೆಪಿಎಲ್ ಕ್ರಿಕೆಟ್ ಟೂರ್ನಿ ಮಾರ್ಚ್ 7ರಿಂದ ಹುಬ್ಬಳ್ಳಿಯಲ್ಲಿ title=

KPL In Hubli : ಹುಬ್ಬಳ್ಳಿಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಮಾದರಿಯಲ್ಲಿಯೇ 'ಕರುನಾಡು ಪ್ರೀಮಿಯರ್ ಲೀಗ್' ಉಣಕಲ್ ನ ಆರ್. ಕೆ.ಕ್ರಿಯೇಷನ್ ಆಂಡ್ ಸ್ಪೋರ್ಟ್ಸ್ ಅಸೋಸಿಯೆಷನ್ ವತಿಯಿಂದ ಹೊನಲು ಬೆಳಕಿನ ಟೆನಿಸ್ ಬಾಲ್, ಕ್ರಿಕೆಟ್ ಪಂದ್ಯಾವಳಿ ಮಾರ್ಚ್ ೭ ರಿಂದ ೧೦ ರವರೆಗೆ ಆಯೋಜಿಸಲಾಗುತ್ತದೆ ಎಂದು ಅಸೋಸಿಯೇಷನ್ ನಿರ್ದೇಶಕ ಲಿಂಗರಾಜ ಬಿಳೆಕಲ್ ಹೇಳಿದರು. 

ಹುಬ್ಬಳ್ಳಿಯಲ್ಲಿ ನಡೆಯಲಿರುವ 'ಕರುನಾಡು ಪ್ರೀಮಿಯರ್ ಲೀಗ್' ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು ಎಂಟು ಪ್ರಾಂಚೈಸಿ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಆಟಗಾರರು ಆನ್ ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವುದಕ್ಕೆ ಫೆ. ೧೫ ರವರೆಗೆ ಸಮಯಾವಕಾಶ ಇದೆ ಎಂದು ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಇದನ್ನು ಓದಿ : ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಬಲ ಪಡಿಸುವ ಗುರಿ : ಫೆ.14ರಂದು ಕತಾರ್ ಗೆ ಮೋದಿ ಭೇಟಿ

ಎಲ್ಲ ಆಟಗಾರಿಗೂ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಅಸೋಸಿಯೇಷನ್ ನಿಂದ ಮಾಡಲಾಗುತ್ತದೆ. ಲೀಗ್ ಸುತ್ತಿದಲ್ಲಿ ಪ್ರತಿ ತಂಡವು ಏಳು ಪಂದ್ಯಗಳನ್ನು ಆಡಲಿದೆ. ಪಂದ್ಯವು ೧೦ ಓವರ್ ಗಳಿಂದ ಕೂಡಿದೆ. 

ಇದನ್ನು ಓದಿ : ದೆಹಲಿ ಚಲೋ ಮೆರವಣಿಗೆ : 1 ತಿಂಗಳ ಕಾಲ ಸೆಕ್ಷನ್ 144 ಜಾರಿ ಮಾಡಿದ ರಾಷ್ಟ್ರ ರಾಜಧಾನಿ ಪೊಲೀಸರು

ವಿಜೇತ ತಂಡಕ್ಕೆ ಪ್ರಥಮ ಬಹುಮಾನ ೪ ಲಕ್ಷ ನಗದು ಮತ್ತು ಟ್ರೋಫಿ ದ್ವಿತೀಯ ಬಹುಮಾನ ೩.೩೦ ಲಕ್ಷ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯದ ಪ್ರತಿಭಾವಂತ ಕ್ರಿಕೆಟ್ ಆಟಗಾರರನ್ನು ಬೆಳಕಿಗೆ ತರುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News