Video: ಕೂಲ್ ಧೋನಿಯ ಸ್ಟಂಪಿಂಗ್ ಕಮಾಲ್; 0.08 ಸೆಕೆಂಡಲ್ಲಿ ಬ್ಯಾಟ್ಸಮನ್ ಕಂಗಾಲು

ಧೋನಿ ಅಂದ್ರೆನೆ ಹಾಗೆ, ಕ್ರಿಸ್ ನಲ್ಲಿರುವ ಬ್ಯಾಟ್ಸ್ಮನ್ ಸ್ವಲ್ಪ ಆಯ ತಪ್ಪಿದರೆ ಸಾಕು ವಿಕೆಟ್ ಹಾಗೆ ಎಗರಿಹೋಗಿರುತ್ತದೆ. ಇಂತಹ ಹಲವು ಅದ್ಬುತ ಸ್ಟಂಪಿಂಗ್ ಮಾಡುವುದನ್ನು ಕರತಲಾಮಲಕ ಮಾಡಿಕೊಂಡಿರುವ ಮಾಜಿ ಕ್ಯಾಪ್ಟನ್ ಕೂಲ್ ಈಗ ಮೊನ್ನೆ ನಡೆದ ವಿಂಡಿಸ್ ವಿರುದ್ದ ನಾಲ್ಕನೆ ಪಂದ್ಯದಲ್ಲಿ ಮತ್ತೊಮ್ಮೆ ಇಂತಹ ಕೈಚಳಕದ ಮೂಲಕ ಗಮನ ಸೆಳೆದಿದ್ದಾರೆ.

Last Updated : Nov 6, 2018, 08:21 PM IST
Video: ಕೂಲ್ ಧೋನಿಯ ಸ್ಟಂಪಿಂಗ್ ಕಮಾಲ್; 0.08 ಸೆಕೆಂಡಲ್ಲಿ ಬ್ಯಾಟ್ಸಮನ್ ಕಂಗಾಲು title=
Photo:twitter(bcci)

ನವದೆಹಲಿ: ಧೋನಿ ಅಂದ್ರೆನೆ ಹಾಗೆ, ಕ್ರಿಸ್ ನಲ್ಲಿರುವ ಬ್ಯಾಟ್ಸ್ಮನ್ ಸ್ವಲ್ಪ ಆಯ ತಪ್ಪಿದರೆ ಸಾಕು ವಿಕೆಟ್ ಹಾಗೆ ಎಗರಿಹೋಗಿರುತ್ತದೆ. ಇಂತಹ ಹಲವು ಅದ್ಬುತ ಸ್ಟಂಪಿಂಗ್ ಮಾಡುವುದನ್ನು ಕರತಲಾಮಲಕ ಮಾಡಿಕೊಂಡಿರುವ ಮಾಜಿ ಕ್ಯಾಪ್ಟನ್ ಕೂಲ್ ಈಗ ಮೊನ್ನೆ ನಡೆದ ವಿಂಡಿಸ್ ವಿರುದ್ದ ನಾಲ್ಕನೆ ಪಂದ್ಯದಲ್ಲಿ ಮತ್ತೊಮ್ಮೆ ಇಂತಹ ಕೈಚಳಕದ ಮೂಲಕ ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ಹೇಗಿತ್ತು ಅಂತಿರಾ,ಈ ಕ್ರಿಸ್ ಹಿಂದಿರುವ ಮ್ಯಾಜಿಕ್!, ಕ್ರಿಸ್ ನಲ್ಲಿ  ಕೀಮೋ ಪಾಲ್ ಅವರು ಬ್ಯಾಟಿಂಗ್ ಮಾಡುತ್ತಿದ್ದರು, ಆಗ ರವಿಂದ್ರಾ ಜಡೇಜಾ ಅವರ ಎಸೆತದಲ್ಲಿ ಮುಂದೆ ಬಂದು ರಕ್ಷಣಾತ್ಮಕ ಆಟವಾಡಲು ಹೋಗುವಷ್ಟರಲ್ಲಿ ಧೋನಿ ಹಿಂದಿನ ಬೆಲ್ಸ್ ಗಳನ್ನು ತಮ್ಮ ಕೈಚಳಕದಿಂದ ಎಗರಿಸಿಬಿಟ್ಟಿದ್ದರು. ಅಷ್ಟಕ್ಕೂ ಅವರು ಸ್ಟಂಪಿಂಗ್ ಮಾಡುವುದಕ್ಕೆ ತೆಗೆದಿಕೊಂಡಿರುವ ಸಮಯ ಕೇವಲ 0.08 ಸೆಕೆಂಡಗಳು. ಒಂದು ಹಂತದಲ್ಲಿ ಬೌಲರ್ ರವಿಂದ್ರ ಜಡೆಜಾಗೂ ಕೂಡ ಬ್ಯಾಟ್ಸ್ಮನ್ ಔಟಾಗಿದ್ದಾನೋ ಇಲ್ಲವೋ ಎನ್ನುವುದು ತಿಳಿದಿರಲಿಲ್ಲ .ಆಗ ಜಡೇಜಾಗೆ ಧೋನಿ ನೀಡಿದ ಮುಗುಳ್ನಗೆಯೇ ಥರ್ಡ್ ಅಂಪೈರ್ ತೀರ್ಪಿಗೂ ಮೊದಲೇ ಎಲ್ಲವನ್ನು ಹೇಳುವಂತಿತ್ತು.  

ಇತ್ತೀಚಿಗೆ ಟ್ವೆಂಟಿ ಕ್ರಿಕೆಟ್ ತಂಡದಿಂದ ಧೋನಿಯನ್ನು ಕೈ ಬಿಟ್ಟಿದ್ದಕ್ಕೆ ಸೋಶಿಯಲ್ ಮಿಡಿಯಾದಲ್ಲಿ  ಬಿಸಿಸಿಐ ನಿಲುವಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಧೋನಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಅದ್ಬುತ ವಿಕೆಟ್ ಕೀಪಿಂಗ್ ಮೂಲಕ  ಮಿಂಚುತ್ತಲೇ ಇದ್ದಾರೆ. 

 

Trending News