World Record: ODIನಲ್ಲಿ ವಿಶ್ವ ದಾಖಲೆ ಬರೆದ ಭಾರತೀಯ ಆಟಗಾರ: ರೋಹಿತ್ ಶರ್ಮಾ ರೆಕಾರ್ಡ್ ಉಡೀಸ್

N Jagadeesan Vijay Hazare Trophy: ವಿಜಯ್ ಹಜಾರೆ ಟ್ರೋಫಿ 2022 ಪ್ರಸ್ತುತ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದೆ. ಈ ಪಂದ್ಯಾವಳಿಯಲ್ಲಿ, ತಮಿಳುನಾಡು ಪರ ಆಡುತ್ತಿರುವ ಬ್ಯಾಟ್ಸ್‌ಮನ್ ಎನ್ ಜಗದೀಶನ್ ಅವರು ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮಾಡಿದ್ದಾರೆ. ಎನ್ ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ.

Written by - Bhavishya Shetty | Last Updated : Nov 21, 2022, 02:17 PM IST
    • ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಹೊಸ ದಾಖಲೆ ನಿರ್ಮಾಣ
    • ರೋಹಿತ್ ಶರ್ಮಾ ದಾಖಲೆ ಮುರಿದ ಮತ್ತೊಬ್ಬ ಭಾರತೀಯ ಆಟಗಾರ
    • ಲಿಸ್ಟ್-ಎ ಕ್ರಿಕೆಟ್‌ನ ದೊಡ್ಡ ವಿಶ್ವ ದಾಖಲೆಯನ್ನು ಮಾಡಿದ್ದಾರೆ
World Record: ODIನಲ್ಲಿ ವಿಶ್ವ ದಾಖಲೆ ಬರೆದ ಭಾರತೀಯ ಆಟಗಾರ: ರೋಹಿತ್ ಶರ್ಮಾ ರೆಕಾರ್ಡ್ ಉಡೀಸ್ title=
N Jagadeesan

N Jagadeesan Vijay Hazare Trophy: ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹೆಸರಿನಲ್ಲಿತ್ತು. ಆದರೆ ಇಂಗ್ಲೆಂಡ್‌ನ ಅಲಿ ಬ್ರೌನ್ ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದಾರೆ. ಇದೀಗ ಭಾರತದ ಯುವ ಬ್ಯಾಟ್ಸ್‌ಮನ್ ಈ ಇಬ್ಬರೂ ಆಟಗಾರರನ್ನು ಸೋಲಿಸಿ ಲಿಸ್ಟ್-ಎ ಕ್ರಿಕೆಟ್‌ನ ದೊಡ್ಡ ವಿಶ್ವ ದಾಖಲೆಯನ್ನು ಮಾಡಿದ್ದಾರೆ.

ಇದನ್ನೂ ಓದಿ: World Record in Cricket: 15 ಎಸೆತಗಳಲ್ಲಿ ಟಿ20 ಪಂದ್ಯ ಗೆದ್ದು ವಿಶ್ವ ದಾಖಲೆ ನಿರ್ಮಿಸಿತು ಈ ಅಪರಿಚಿತ ತಂಡ!

ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ಗಳು:

ವಿಜಯ್ ಹಜಾರೆ ಟ್ರೋಫಿ 2022 ಪ್ರಸ್ತುತ ಭಾರತದ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದೆ. ಈ ಪಂದ್ಯಾವಳಿಯಲ್ಲಿ, ತಮಿಳುನಾಡು ಪರ ಆಡುತ್ತಿರುವ ಬ್ಯಾಟ್ಸ್‌ಮನ್ ಎನ್ ಜಗದೀಶನ್ ಅವರು ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮಾಡಿದ್ದಾರೆ. ಎನ್ ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ ಈ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ.

ಎನ್ ಜಗದೀಶನ್ ಅವರ ಐತಿಹಾಸಿಕ ಇನ್ನಿಂಗ್ಸ್:

ಎನ್ ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ 141 ಎಸೆತಗಳಲ್ಲಿ 277 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಎನ್ ಜಗದೀಶನ್ ಅವರ ಬ್ಯಾಟ್‌ನಿಂದ 25 ಬೌಂಡರಿ ಮತ್ತು 15 ಸಿಕ್ಸರ್‌ಗಳು ಹೊರಬಂದವು. ಇವರಿಗಿಂತ ಮೊದಲು ಲಿಸ್ಟ್-ಎ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಲಿ ಬ್ರೌನ್ ಮೊದಲಿಗಿತ್ತು. ಅವರು 2002 ರಲ್ಲಿ 268 ರನ್ ಗಳಿಸಿದ್ದರು. ಆದರೆ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ 264 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: IND vs NZ: 'Suryakumar ಇನ್ನೂ ನಂಬರ್ 1 ಆಗಿಲ್ಲ': ಸೋಲಿನ ನಂತರ Tim Southee ಹೀಗಂದಿದ್ದೇಕೆ?

ವಿಜಯ್ ಹಜಾರೆ ಟ್ರೋಫಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ:

ವಿಜಯ್ ಹಜಾರೆ ಟ್ರೋಫಿಯಲ್ಲಿ ಎನ್ ಜಗದೀಶನ್ ಸತತ 5 ನೇ ಪಂದ್ಯದಲ್ಲಿ 100 ರನ್ ಗಡಿ ದಾಟಿದ್ದಾರೆ. ಈ ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ, ಪೃಥ್ವಿ ಶಾ, ರಿತುರಾಜ್ ಗಾಯಕ್ವಾಡ್ ಮತ್ತು ದೇವದತ್ ಪಡಿಕ್ಕಲ್ ತಲಾ 4 ಶತಕ ಸಿಡಿಸಿದ್ದರು. ಈ ಪಂದ್ಯಕ್ಕೂ ಮುನ್ನ ಅವರು ಹರಿಯಾಣ ವಿರುದ್ಧ 128, ಆಂಧ್ರ ವಿರುದ್ಧ 114, ಛತ್ತೀಸ್‌ಗಢ ವಿರುದ್ಧ 107, ಗೋವಾ ವಿರುದ್ಧ 168 ರನ್ ಗಳಿಸಿದ್ದರು.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News