IND vs AUS: ಹೊಸ ದಾಖಲೆಯ ಹೊಸ್ತಿಲಲ್ಲಿ ಆರ್ ಅಶ್ವಿನ್ ! ಸರಿಗಟ್ಟಲಿದ್ದಾರೆ ಅನಿಲ್ ಕುಂಬ್ಳೆ ದಾಖಲೆ

IND vs AUS, 4th Test: ರವಿಚಂದ್ರನ್ ಅಶ್ವಿನ್ ಅವರು ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಇನ್ನು 4 ವಿಕೆಟ್ ಪಡೆದರೆ, ಭಾರತದಲ್ಲಿ ಆಡುವಾಗ ಹೆಚ್ಚು ಬಾರಿ 5 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿಯಲಿದ್ದಾರೆ. 

Written by - Ranjitha R K | Last Updated : Mar 9, 2023, 03:26 PM IST
  • ಹೊಸ ದಾಖಲೆ ಸನಿಹದಲ್ಲಿದ್ದಾರೆ ರವಿಚಂದ್ರನ್ ಅಶ್ವಿನ್.
  • ಬದಿಗಟ್ಟುತ್ತಾರಾ ಅನಿಲ್ ಕುಂಬ್ಳೆ ದಾಖಲೆ ?
  • ಬೇಕಾಗಿರುವುದು ಕೆಲವಳ ನಾಲ್ಕು ವಿಕೆಟ್
IND vs AUS: ಹೊಸ ದಾಖಲೆಯ ಹೊಸ್ತಿಲಲ್ಲಿ ಆರ್ ಅಶ್ವಿನ್ ! ಸರಿಗಟ್ಟಲಿದ್ದಾರೆ ಅನಿಲ್ ಕುಂಬ್ಳೆ ದಾಖಲೆ  title=

IND vs AUS, 4th Test : ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಸನಿಹದಲ್ಲಿದ್ದಾರೆ. ಈ  ಸಾಧನೆ ಮಾಡಿದ ಕೂಡಲೇ ಭಾರತ ಕ್ರಿಕೆಟ್ ಇತಿಹಾಸದಲ್ಲಿ ರವಿಚಂದ್ರನ್ ಅಶ್ವಿನ್ ಹೊಸ ದಾಖಲೆ ಬರೆಯಲಿದ್ದಾರೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ರವಿಚಂದ್ರನ್ ಅಶ್ವಿನ್ ಈ ದಾಖಲೆಯ  ಸನಿಹಕ್ಕೆ ಬಂದಿದ್ದಾರೆ. ರವಿಚಂದ್ರನ್ ಅಶ್ವಿನ್ ಅವರು ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ಇನ್ನು 4 ವಿಕೆಟ್ ಪಡೆದರೆ, ಭಾರತದಲ್ಲಿ ಆಡುವಾಗ ಹೆಚ್ಚು ಬಾರಿ 5 ವಿಕೆಟ್ ಪಡೆದ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಮುರಿಯಲಿದ್ದಾರೆ. 

ದಾಖಲೆಯ ಸನಿಹದಲ್ಲಿ ಆರ್ ಅಶ್ವಿನ್ :
ರವಿಚಂದ್ರನ್ ಅಶ್ವಿನ್ ಭಾರತದಲ್ಲಿ ಆಡಿದ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 25 ಬಾರಿ 5 ವಿಕೆಟ್ ಪಡೆದಿದ್ದಾರೆ. ಈ ವಿಚಾರದಲ್ಲಿ ಅಶ್ವಿನ್ ಈಗಲೂ ಅನಿಲ್ ಕುಂಬ್ಳೆಗೆ ಸರಿಸಾಟಿಯಾಗಿದ್ದಾರೆ. ಅನಿಲ್ ಕುಂಬ್ಳೆ, ಭಾರತದಲ್ಲಿ ಆಡಿದ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 25 ಬಾರಿ 5 ವಿಕೆಟ್ ಪಡೆದಿದ್ದಾರೆ. ಅಹಮದಾಬಾದ್ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಇನ್ನು 4 ವಿಕೆಟ್ ಪಡೆದರೆ ಇತಿಹಾಸ ಸೃಷ್ಟಿಸಲಿದ್ದಾರೆ. ಈ ಮೂಲಕ ಅಶ್ವಿನ್ ಭಾರತದ ನೆಲದಲ್ಲಿ ಗರಿಷ್ಠ ಅಂದರೆ 26 ಬಾರಿ ಐದು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಆಗಲಿದ್ದಾರೆ. ರವಿಚಂದ್ರನ್ ಅಶ್ವಿನ್ ಇದುವರೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ 468 ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ 113 ಏಕದಿನ ಪಂದ್ಯಗಳಲ್ಲಿ 151 ವಿಕೆಟ್ ಪಡೆದರೆ, 65 ಟಿ20ಗಳಲ್ಲಿ 72 ವಿಕೆಟ್ ಮತ್ತು ಐಪಿಎಲ್‌ನ 184 ಪಂದ್ಯಗಳಲ್ಲಿ 157 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ : Umesh Yadav: ಮಹಿಳಾ ದಿನದಂದೇ ಹೆಣ್ಣು ಮಗುವಿಗೆ ತಂದೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್!

ತನ್ನ ದೇಶದಲ್ಲಿ ಅತಿ ಹೆಚ್ಚು 5 ವಿಕೆಟ್ ಪಡೆದ ಬೌಲರ್ (ಟೆಸ್ಟ್) :
1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 45 ಬಾರಿ 5 ವಿಕೆಟ್ ಪಡೆದಿದ್ದಾರೆ 
2. ರಂಗನಾ ಹೆರಾತ್ (ಶ್ರೀಲಂಕಾ) - 26 ಬಾರಿ 5 ವಿಕೆಟ್ ಪಡೆದಿದ್ದಾರೆ 
3. ಅನಿಲ್ ಕುಂಬ್ಳೆ (ಭಾರತ) - 25 ಬಾರಿ 5 ವಿಕೆಟ್ 
4. ರವಿಚಂದ್ರನ್ ಅಶ್ವಿನ್ (ಭಾರತ) - 25 ಬಾರಿ 5 ವಿಕೆಟ್ 
5. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 24 ಬಾರಿ 5 ವಿಕೆಟ್  

ಇದಲ್ಲದೆ ರವಿಚಂದ್ರನ್ ಅಶ್ವಿನ್ 4 ವಿಕೆಟ್ ಪಡೆದ ತಕ್ಷಣ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ 112 ವಿಕೆಟ್ ಪಡೆದ ಭಾರತದ ಮೊದಲ ಬೌಲರ್  ಎಂದೆನಿಸಿಕೊಳ್ಳಲಿದ್ದಾರೆ. ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ ಭಾರತದ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಆಸ್ಟ್ರೇಲಿಯಾ ವಿರುದ್ಧ 111 ಟೆಸ್ಟ್ ವಿಕೆಟ್ ಪಡೆದಿದ್ದಾರೆ. ರವಿಚಂದ್ರನ್ ಅಶ್ವಿನ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 4 ವಿಕೆಟ್ ಪಡೆದ ತಕ್ಷಣ ಅನಿಲ್ ಕುಂಬ್ಳೆ ಅವರ ಈ ಶ್ರೇಷ್ಠ ದಾಖಲೆಯನ್ನು ಮುರಿಯಲಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಭಾರತೀಯ ಬೌಲರ್
1. ಅನಿಲ್ ಕುಂಬ್ಳೆ - 111 ವಿಕೆಟ್
2. ರವಿಚಂದ್ರನ್ ಅಶ್ವಿನ್ - 108 ವಿಕೆಟ್
3. ಹರ್ಭಜನ್ ಸಿಂಗ್ - 95 ವಿಕೆಟ್

ಇದನ್ನೂ ಓದಿ : GG vs RCB: 4,6,4,4,4… ಜಸ್ಟ್ 18 ಎಸೆತಕ್ಕೆ ವೇಗವಾಗಿ ಅರ್ಧಶತಕ ಸಿಡಿಸಿದ ಸೋಫಿಯಾ: ಗುಜರಾತ್ ಮುಂದೆ ಮಣಿದ RCB!

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ
1. ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) - 800 ವಿಕೆಟ್‌ಗಳು
2. ಶೇನ್ ವಾರ್ನ್ (ಆಸ್ಟ್ರೇಲಿಯಾ) - 708  ವಿಕೆಟ್
3. ಜೇಮ್ಸ್ ಆಂಡರ್ಸನ್ (ಇಂಗ್ಲೆಂಡ್) - 685  ವಿಕೆಟ್
4. ಅನಿಲ್ ಕುಂಬ್ಳೆ (ಭಾರತ) - 619  ವಿಕೆಟ್‌ಗಳು
5. ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್) - 576  ವಿಕೆಟ್
6. ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) - 563 ವಿಕೆಟ್‌ಗಳು
7. ಕರ್ಟ್ನಿ ವಾಲ್ಷ್ (ವೆಸ್ಟ್ ಇಂಡೀಸ್) - 519  ವಿಕೆಟ್
8. ನಾಥನ್ ಲಿಯಾನ್ (ಆಸ್ಟ್ರೇಲಿಯಾ) - 479ವಿಕೆಟ್
9. ರವಿಚಂದ್ರನ್ ಅಶ್ವಿನ್ (ಭಾರತ) - 468 ವಿಕೆಟ್ 

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್
1. ಅನಿಲ್ ಕುಂಬ್ಳೆ - 619  ವಿಕೆಟ್
2. ರವಿಚಂದ್ರನ್ ಅಶ್ವಿನ್ - 468 ವಿಕೆಟ್
3. ಕಪಿಲ್ ದೇವ್ - 434 ವಿಕೆಟ್
4. ಹರ್ಭಜನ್ ಸಿಂಗ್ - 417 ವಿಕೆಟ್
5. ಇಶಾಂತ್ ಶರ್ಮಾ/ಜಹೀರ್ ಖಾನ್ - 311 ವಿಕೆಟ್ 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News