ಭರ್ಜರಿ 60 ರನ್ ಗಳಿಂದ ಗೆದ್ದು ಬೀಗಿದ RCB, 181ಕ್ಕೆ ಆಲೌಟ್ ಆದ ಪಂಜಾಬ್ ಕಿಂಗ್ಸ್

IPL : ಇಂದಿನ ಐಪಿಎಲ್ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿದ್ದು, ಭರ್ಜರಿ 60 ರನ್ ಗಳಿಂದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವನ್ನು ಸಾಧಿಸಿದೆ. 

Written by - Zee Kannada News Desk | Last Updated : May 10, 2024, 12:12 AM IST
  • ರಾಯಲ್ ಚಾಲೆಂಜರ್ಸ್ ಬೆಂಗಳೂರು 60 ರನ್ ಗಳಿಂದ ಗೆದ್ದು ಭರ್ಜರಿ ಗೆಲುವನ್ನು ಸಾಧಿಸಿದರು.
  • ಪಂಜಾಬ್ ಕಿಂಗ್ಸ್ ತಂಡಕ್ಕೆ 242 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು.
  • ಪಂಜಾಬ್ ಕಿಂಗ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಭರ್ಜರಿ 60 ರನ್ ಗಳಿಂದ ಗೆದ್ದು ಬೀಗಿದ RCB, 181ಕ್ಕೆ ಆಲೌಟ್ ಆದ ಪಂಜಾಬ್ ಕಿಂಗ್ಸ್ title=

RCB Won the Match : ಐಪಿಎಲ್ 2024ರ 58ನೇ ಪಂದ್ಯ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ನಡುವೆ ಟಾಸ್ ಆಗಿ, ಪಂಜಾಬ್ ಕಿಂಗ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಈ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡ ಒಟ್ಟು 11 ಪಂದ್ಯಗಳನ್ನು ಆಡಿ ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಏಳು ಪಂದ್ಯಗಳಲ್ಲಿ ಸೋತು ಎಂಟನೇ ಸ್ಥಾನದಲ್ಲಿದೆ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಒಟ್ಟು 11 ಪಂದ್ಯಗಳನ್ನು ಆಡಿ ಅದರಲ್ಲಿ ನಾಲ್ಕು ಪಂದ್ಯಗಳಲ್ಲಿ ಗೆದ್ದು ಏಳು ಪಂದ್ಯಗಳಲ್ಲಿ ಸೋಲನ್ನ ಅನುಭವಿಸಿ 7ನೇ ಸ್ಥಾನದಲ್ಲಿದೆ. 

ಇದನ್ನು ಓದಿ : Ranbir Kapoor : ಅಭಿಮಾನಿಗಳಲ್ಲಿ ನಾಸ್ಟಾಲ್ಜಿಯಾ  ಹುಟ್ಟುಹಾಕಿದ ನಟ, ಕ್ಲಾಸಿಕ್ ಕೇಶವಿನ್ಯಾಸಕ್ಕೆ ಹಿಂತಿರುಗಿದ ರಾಮ

ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಭರ್ಜರಿ   47 ಎಸೆತಕ್ಕೆ 92 ರನ್ ಗಳಿಸಿದ್ದು, ಸ್ವಲ್ಪದರಲ್ಲೇ ಶತಕ ಬಾರಿಸುವಲ್ಲಿ ಮಿಸ್ ಆಗಿದ್ದಾರೆ. ಒಟ್ಟು 7 ಫೋರ್ ಹಾಗೂ 6 ಸಿಕ್ಸ್ ಬಾರಿಸಿದ ಕೊಹ್ಲಿ ಭರ್ಜರಿ ಆಟವನ್ನು ಆಡಿದ್ದಾರೆ. 

ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಕಣಕ್ಕಿಳಿದರು.  ವಿರಾಟ್ ಕೊಹ್ಲಿ 92 ( 47 ) , ಫಾಫ್ ಡು ಪ್ಲೆಸಿಸ್ (ಸಿ) 9(7), ವಿಲ್ ಜಾಕ್ಸ್ 12(7), ರಜತ್ ಪಾಟಿದಾರ್ 55(23), ದಿನೇಶ್ ಕಾರ್ತಿಕ್ (ಡಬ್ಲ್ಯೂ), 18(7 )  ಮಹಿಪಾಲ್ ಲೊಮ್ರೋರ್  0(2)  ,ಕ್ಯಾಮೆರಾನ್ ಗ್ರೀನ್ 46 (27), ಸ್ವಪ್ನಿಲ್ ಸಿಂಗ್ 1(1) ರನ್ ಗಳಿಸಿದರು. 

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡದ ಹರ್ಷಲ್ ಪಟೇಲ್  3 , ವಿಧ್ವತ್ ಕಾವೇರಪ್ಪ 2, ಅರ್ಷ್‌ದೀಪ್ ಸಿಂಗ್,  ಸ್ಯಾಮ್ ಕುರಾನ್ (ಸಿ) ತಲಾ 1 ವಿಕೆಟ್ ಪಡೆದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬ್ಯಾಟಿಂಗ್ ಮಾಡಿ, ಪಂಜಾಬ್ ಕಿಂಗ್ಸ್ ತಂಡಕ್ಕೆ 242 ರನ್ ಗಳ ಗೆಲುವಿನ ಗುರಿಯನ್ನು ನೀಡಿತ್ತು. 

ಇದನ್ನು ಓದಿ : Rashmika Mandanna: ಸಲ್ಮಾನ್‌ ಖಾನ್‌ ಜೊತೆ ರಶ್ಮಿಕಾ ಮಂದಣ್ಣ ಹೊಸ ಸಿನಿಮಾ! 

ಎರಡನೇ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡ ಆರಂಭಿಕ ಆರಂಭಿಕ ಬ್ಯಾಟ್ಸ್ ಮ್ಯಾನ್ ಗಳಾಗಿ ಪ್ರಭಾಸಿಮ್ರಾನ್ ಹಾಗೂ ಜಾನಿ ಬೈರ್‌ಸ್ಟೋವ್ ಕಣಕ್ಕಿಳಿದರು. ಪ್ರಭಾಸಿಮ್ರಾನ್ 6(4), ಜಾನಿ ಬೈರ್‌ಸ್ಟೋವ್ 27(16),  ರಿಲೀ ರೊಸೊವ್ 61(27) , ಶಶಾಂಕ್ ಸಿಂಗ್ 37(19), ಜಿತೇಶ್ ಶರ್ಮ 5(4)  , ಲಿಯಾಮ್ ಲಿವಿಂಗ್‌ಸ್ಟೋನ್ 0(2),  ಸ್ಯಾಮ್ ಕುರಾನ್ (ಸಿ) 22(16), ಅಶುತೋಷ್ ಶರ್ಮಾ 8(5), ಹರ್ಷಲ್ ಪಟೇಲ್ 0(1), ರಾಹುಲ್ ಚಾಹರ್ 5(5), ಅರ್ಷ್‌ದೀಪ್ ಸಿಂಗ್ 4(3)

ಇದಕ್ಕೆ ವಿರುದ್ಧವಾಗಿ ಬೌಲಿಂಗ್ ಮಾಡಿದ  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ವಪ್ನಿಲ್ ಸಿಂಗ್ 2, ಮೊಹಮ್ಮದ್ ಸಿರಾಜ್ 3 , ಕರ್ಣ್ ಶರ್ಮಾ 2 , ಲಾಕಿ ಫರ್ಗುಸನ್ 2 ವಿಕೆಟ್ ಪಡೆದುಕೊಂಡರು. 181ರನ್  ಗಳಿಸಿ ಆಲೌಟ್ ಆದರು. 

ರಾಯಲ್ ಚಾಲೆಂಜರ್ಸ್ ಬೆಂಗಳೂರು 60 ರನ್ ಗಳಿಂದ ಗೆದ್ದು ಭರ್ಜರಿ ಗೆಲುವನ್ನು ಸಾಧಿಸಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News