ಸ್ಮೃತಿ ಬಿಟ್ಟು ಸಾನಿಯಾರನ್ನು ಹಿಡ್ಕೊಂಡು ಟ್ರೋಲ್: ‘RCB ಮೆಂಟರ್ ಎಲ್ಲಿದ್ದೀಯಮ್ಮಾ?’ ಅಂತಿದ್ದಾರೆ ಫ್ಯಾನ್ಸ್!

Sania Mirza Troll: 15 ವರ್ಷಗಳಿಂದ ಆರ್‌’ಸಿಬಿಯಲ್ಲಿದ್ದು ನಾಯಕನಾಗಿ ಸಿಹಿ ಕಹಿ ದಿನಗಳನ್ನು ಕಂಡಿರುವ ಕೊಹ್ಲಿ, ಸ್ಪೂರ್ತಿದಾಯಕ ಮಾತುಗಳನ್ನಾಡಿ ಆರ್ ಸಿ ಬಿ ಗೆಲುವಿನ ರುವಾರಿಯಾಗಿದ್ದಾರೆ. ಆದರೆ ಮೆಂಟರ್ ಆಗಿ ನೇಮಕಗೊಂಡ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ ಎಂದು ಹೇಳಿ ಟ್ರೋಲ್ ಮಾಡಿದ್ದಾರೆ.

Written by - Bhavishya Shetty | Last Updated : Mar 16, 2023, 03:28 PM IST
    • ಸತತ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ತಂಡ ಅಂತಿಮವಾಗಿ ಗೆಲುವು ಕಂಡಿದೆ.
    • ಕಳೆದ ದಿನ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಜಯ ಗಳಿಸಿದೆ.
    • ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಸ್ಪೂರ್ತಿದಾಯಕ ಪೆಪ್ ಟಾಕ್ ಮಾಡಿದ್ದರು ಎನ್ನಲಾಗಿದೆ
ಸ್ಮೃತಿ ಬಿಟ್ಟು ಸಾನಿಯಾರನ್ನು ಹಿಡ್ಕೊಂಡು ಟ್ರೋಲ್: ‘RCB ಮೆಂಟರ್ ಎಲ್ಲಿದ್ದೀಯಮ್ಮಾ?’ ಅಂತಿದ್ದಾರೆ ಫ್ಯಾನ್ಸ್!  title=
Virat Kohli-Sania Mirza

Sania Mirza Troll: ಸತತ ಸೋಲು ಕಂಡಿದ್ದ ರಾಯಲ್ ಚಾಲೆಂಜರ್ಸ್ ತಂಡ ಅಂತಿಮವಾಗಿ ಗೆಲುವು ಕಂಡಿದೆ. ಕಳೆದ ದಿನ ನಡೆದ ಯುಪಿ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ತಂಡ ಜಯ ಗಳಿಸಿದೆ. ಈ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಸ್ಪೂರ್ತಿದಾಯಕ ಪೆಪ್ ಟಾಕ್ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಫೋಟೋ, ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರ ಜೊತೆಗೆ ಸಾನಿಯಾ ಮಿರ್ಜಾ ಅವರನ್ನು ಸಖತ್ ಟ್ರೋಲ್ ಕೂಡ ಮಾಡಲಾಗುತ್ತಿದೆ.

ಇದನ್ನೂ ಓದಿ: ಏಕದಿನ ಸರಣಿ ಆರಂಭಕ್ಕೂ ಮುನ್ನ ಟೀಂ ಇಂಡಿಯಾಗೆ ಭಾರೀ ಆಘಾತ: ಅಭಿಮಾನಿಗಳಲ್ಲಿ ಮನೆ ಮಾಡಿದ ಆತಂಕ!

15 ವರ್ಷಗಳಿಂದ ಆರ್‌’ಸಿಬಿಯಲ್ಲಿದ್ದು ನಾಯಕನಾಗಿ ಸಿಹಿ ಕಹಿ ದಿನಗಳನ್ನು ಕಂಡಿರುವ ಕೊಹ್ಲಿ, ಸ್ಪೂರ್ತಿದಾಯಕ ಮಾತುಗಳನ್ನಾಡಿ ಆರ್ ಸಿ ಬಿ ಗೆಲುವಿನ ರುವಾರಿಯಾಗಿದ್ದಾರೆ. ಆದರೆ ಮೆಂಟರ್ ಆಗಿ ನೇಮಕಗೊಂಡ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲ ಎಂದು ಹೇಳಿ ಟ್ರೋಲ್ ಮಾಡಿದ್ದಾರೆ.

“ಇನ್ನೂ ಭರವಸೆ ಇದೆ. ಶೇ.1ರಷ್ಟು ಅವಕಾಶವಿದೆ. ಕೆಲವೊಮ್ಮೆ ಅದು ಸಾಕಷ್ಟು ಒಳ್ಳೆಯದು. ಈ ಮೂರು ಪಂದ್ಯಗಳಲ್ಲಿ ಏನೂ ಆಗದಿದ್ದರೂ, ಮುಂಬರುವ ಪಂದ್ಯಾವಳಿಯಲ್ಲಿ ಗೆದ್ದು ನಾಕೌಟ್ ಹಂತವನ್ನು ತಲೆಎತ್ತಿ ನಡೆಯುವಂತೆ ಮಾಡುವುದು ಮುಖ್ಯ” ಎಂದು ಕೊಹ್ಲಿ ಹೇಳಿದ್ದಾರೆ.

ಈ ಮಾತಿನ ಬಳಿಕ ಕಣಕ್ಕೆ ಇಳಿದ ಆರ್ ಸಿ ಬಿ ತಂಡ, ಗೆಲುವು ಸಾಧಿಸಿ ಆ ಒಂದು ಶೇಕಡಾ ಅವಕಾಶವನ್ನು ಪಡೆದುಕೊಂಡಿದೆ. ಮಂಧಾನ ಮತ್ತು ತಂಡ ಇನ್ನೂ ಎರಡು ಪಂದ್ಯಗಳನ್ನು ಆಡಲು ಉಳಿದಿದೆ. ಅವುಗಳಲ್ಲಿ ಸತತ ಗೆಲುವು ಸಾಧಿಸಿದರೆ ಪ್ಲೇಆಫ್ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಇತರ ತಂಡಗಳ ಫಲಿತಾಂಶಗಳೂ ಸಹ ಅವರ ದಾರಿಯಲ್ಲಿ ಹೋಗಬೇಕಾಗಿದೆ.

ಇದನ್ನೂ ಓದಿ: IND vs AUS: ಏಕದಿನದಲ್ಲಿ ಭಾರತ ನಂ.1 ನಿಜ… ಆದ್ರೆ ಆಸೀಸ್’ನ ದಾಖಲೆಗಳನ್ನು ನೋಡಿದ್ರೆ ಬೆಚ್ಚಿ ಬೀಳುವುದು ಖಂಡಿತ

ಇನ್ನು ಸಾನಿಯಾ ಮಿರ್ಜಾ ಮೆಂಟರ್‌ಶಿಪ್ ಡ್ಯೂಟಿ ಸರಿಯಾಗಿ ಮಾಡದ ಬಗ್ಗೆ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು ಹೀಗೆ.

 

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News