ಕ್ರಿಕೆಟ್ಗೆ ಹಿಂದಿರುಗುವುದು ತುಂಬಾ ಕಷ್ಟವಲ್ಲ, ಕ್ರಿಕೆಟ್ ನನ್ನ ರಕ್ತದಲ್ಲಿದೆ-ವಿರಾಟ್ ಕೊಹ್ಲಿ

     

Last Updated : Dec 27, 2017, 09:03 PM IST
ಕ್ರಿಕೆಟ್ಗೆ ಹಿಂದಿರುಗುವುದು ತುಂಬಾ ಕಷ್ಟವಲ್ಲ, ಕ್ರಿಕೆಟ್ ನನ್ನ ರಕ್ತದಲ್ಲಿದೆ-ವಿರಾಟ್ ಕೊಹ್ಲಿ  title=

 

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಬುಧವಾರ ಇಲ್ಲಿನ ಸುದ್ದಿಗಾರರೊಂದಿಗೆ ಮಾತನಾಡುತ್ತಾ  ಕ್ರೀಡೆಯಂತೆಯೇ ಹೆಚ್ಚು ಮುಖ್ಯವಾದುದು ತಮ್ಮ ಮದುವೆ, ಆದರಿಂದಾಗಿ ಕೆಲವು ದಿನ ಕ್ರಿಕೆಟ್ ನಿಂದ ದೂರ ಉಳಿದಿದ್ದು ಎಂದು ಕೊಹ್ಲಿ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಭಾರತ ತಂಡ ಹೊರಡುವ ಮೊದಲು ಮುಂಬೈಯಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುತ್ತಾ  ಕ್ರಿಕೆಟ್ಗೆ ಹಿಂದಿರುಗುವುದು ತುಂಬಾ ಕಷ್ಟವಲ್ಲ, ಕ್ರಿಕೆಟ್ ನನ್ನ ರಕ್ತದಲ್ಲಿದೆ ಎಂದು ಕೊಹ್ಲಿ ತಿಳಿಸಿದರು . 

ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಖಾಸಗಿ ಸಮಾರಂಭದಲ್ಲಿ ಇಟಲಿಯಲ್ಲಿ ಮದುವೆಯಾಗಿದ್ದರು ಮತ್ತು ಇತ್ತೀಚೆಗೆ ದೆಹಲಿಯಲ್ಲಿ ಅವರ ಮೊದಲ ಮದುವೆಯ ಆರಕ್ಷತೆಯನ್ನು ಏರ್ಪಡಿಸಿದರು. ಇದರಲ್ಲಿ  ಪ್ರಧಾನಿ ನರೇಂದ್ರ ಮೋದಿ ಕೂಡಾ ಭಾಗಿಯಾಗಿದ್ದರು 

ದೆಹಲಿಯ ಆರಕ್ಷತೆಯ ನಂತರ, ಮುಂಬೈನ  ಆಸ್ಟಾರ್ ಬಾಲ್ರೂಮ್ ಆಫ್ ಸೇಂಟ್ ರೆಗಿಸ್ನಲ್ಲಿ ತಮ್ಮ ಎರಡನೇ  ಮದುವೆಯ ಆರಕ್ಷತೆಯನ್ನು ಆಯೋಜಿಸಿದರು, ಇದರಲ್ಲಿ   ಬಾಲಿವುಡ್ ಹಾಗೂ ಕ್ರಿಕೆಟಿನ  ಖ್ಯಾತನಾಮರು ಹಾಜರಿದ್ದರು 

ಇತ್ತೀಚಿಗೆ ಮದುವೆ ಕಾರಣದಿಂದಾಗಿ ಶ್ರೀಲಂಕಾ ವಿರುದ್ಧದ ಏಕದಿನ ಮತ್ತು ಟಿ 20ಐ ಸರಣಿಗಳನ್ನು ತಪ್ಪಿಸಿಕೊಂಡಿದ್ದ ವಿರಾಟ್, ದಕ್ಷಿಣ ಆಫ್ರಿಕಾದಲ್ಲಿ ಆರು ಪಂದ್ಯಗಳ ಏಕದಿನ ಸರಣಿಗಾಗಿ ಮತ್ತೆ ತಂಡದ ನಾಯಕನಾಗಿ ಮುನ್ನಡೆಸಲಿದ್ದಾರೆ.

Trending News