ನನಗೂ ಹೇಳಲು ಬಹಳಷ್ಟಿದೆ ಆದರೆ.. ತಂದೆಯ ಆರೋಪಗಳನ್ನು ಅಸಂಬದ್ಧ ಎಂದ ರವೀಂದ್ರ ಜಡೇಜಾ!

Ravindra Jadeja on his Father Statement: ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಮನೆಯಲ್ಲಿ ಪರಿಸ್ಥಿತಿ ಸರಿಯಾಗಿಲ್ಲ. ಇತ್ತೀಚೆಗೆ ಜಡೇಜಾ ತಂದೆ ಅನಿರುದ್ಧ್ ಸಿಂಗ್ ತಮ್ಮ ಹೇಳಿಕೆಯಿಂದ ಸಂಚಲನ ಮೂಡಿಸಿದ್ದರು. ಆದರೆ, ಜಡೇಜಾ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ.

Written by - Savita M B | Last Updated : Feb 10, 2024, 09:31 AM IST
  • ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸದ್ಯ ಮುಖ್ಯಾಂಶಗಳಲ್ಲಿದ್ದಾರೆ..
  • ಆದರೆ, ಜಡೇಜಾ ಸುದ್ದಿಯಲ್ಲಿರುವುದು ಕ್ರಿಕೆಟ್ ಮೈದಾನದಲ್ಲಿನ ಅವರ ಪ್ರದರ್ಶನದಿಂದಲ್ಲ ವೈಯಕ್ತಿಕ ಕಲಹದಿಂದ.
  • ಸಂದರ್ಶನದಲ್ಲಿ ಜಡೇಜಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.
ನನಗೂ ಹೇಳಲು ಬಹಳಷ್ಟಿದೆ ಆದರೆ.. ತಂದೆಯ ಆರೋಪಗಳನ್ನು ಅಸಂಬದ್ಧ ಎಂದ ರವೀಂದ್ರ ಜಡೇಜಾ! title=

Ravindra Jadeja: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಸದ್ಯ ಮುಖ್ಯಾಂಶಗಳಲ್ಲಿದ್ದಾರೆ.. ಆದರೆ, ಜಡೇಜಾ ಸುದ್ದಿಯಲ್ಲಿರುವುದು ಕ್ರಿಕೆಟ್ ಮೈದಾನದಲ್ಲಿನ ಅವರ ಪ್ರದರ್ಶನದಿಂದಲ್ಲ ವೈಯಕ್ತಿಕ ಕಲಹದಿಂದ. ವಾಸ್ತವವಾಗಿ, ಶುಕ್ರವಾರ, ಜಡೇಜಾ ಅವರ ತಂದೆ ಸಂದರ್ಶನವೊಂದರಲ್ಲಿ ತಮ್ಮ ಮಗ ರವೀಂದ್ರ ಜಡೇಜಾ ಮತ್ತು ಅವರ ಸೊಸೆ ರಿವಾಬಾ ಅವರೊಂದಿಗೆ ಇನ್ನು ಮುಂದೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ಹೇಳಿದ್ದಾರೆ. ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಜಡೇಜಾ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.. ಆದರೆ, ಜಡೇಜಾ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. 

ರವೀಂದ್ರ ಜಡೇಜಾ ಅವರ ತಂದೆ ಅನಿರುದ್ಧ್ ಸಿಂಗ್ ಅವರಿಗೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ಅಚ್ಚರಿ ಮೂಡಿಸಿದೆ.. ರವೀಂದ್ರ ಜಡೇಜಾ ತಮ್ಮ ತಂದೆಯ ಹೇಳಿಕೆಯನ್ನು ಅಸಂಬದ್ಧ ಎಂದು ಬಣ್ಣಿಸಿ.. ಪತ್ನಿಗೆ ಬೆಂಬಲವಾಗಿ ದೊಡ್ಡ ಹೇಳಿಕೆಯನ್ನೂ ನೀಡಿದ್ದಾರೆ...

ಇದನ್ನೂ ಓದಿ-18 ಬೌಂಡರಿ, 3 ಸಿಕ್ಸರ್, ಒಂದೇ ಇನ್ನಿಂಗ್ಸ್’ನಲ್ಲಿ 159 ರನ್… 24ರ ಹರೆಯದ ಭಾರತದ ಕ್ರಿಕೆಟಿಗನಿಂದ ಅಮೋಘ ಶತಕದಾಟ!

ಈ ಬಗ್ಗೆ ವೀಂದ್ರ ಜಡೇಜಾ  "ಸಂದರ್ಶನದಲ್ಲಿ ತಂದೆ ಹೇಳಿದ್ದೆಲ್ಲವೂ ತಪ್ಪು ಮತ್ತು ಅರ್ಥಹೀನ "ಅವರು ಕಥೆಯ ಒಂದು ಭಾಗವನ್ನು ಮಾತ್ರ ಹೇಳಿದ್ದಾರೆ.. ಅದನ್ನು ನಾನು ಒಪ್ಪಿಕೊಳ್ಳುವುದಿಲ್ಲ... ನನ್ನ ಪತ್ನಿಯ ಹೆಸರು ಕೆಡಿಸುವ ಯತ್ನ ನಡೆಯುತ್ತಿದೆ. ನನಗೂ ಹೇಳಲು ಬಹಳಷ್ಟಿದೆ ಆದರೆ ಸಾರ್ವಜನಿಕವಾಗಿ ಏನನ್ನೂ ಹೇಳದೇ ಇದ್ದರೆ ಒಳ್ಳೆಯದು." ಎಂದಿದ್ದಾರೆ..

ಅಷ್ಟೇ ಅಲ್ಲ ಅನಿರುದ್ಧ್ ಸಿಂಗ್ ಇನ್ನೂ ಹಲವು ದೊಡ್ಡ ವಿಷಯಗಳನ್ನು ಈ ಸಂದರ್ಶನದಲ್ಲಿ ಹೇಳಿದ್ದು "ಜಡೇಜಾ ಪತ್ನಿ ರಿವಾಬಾ ವಾಮಾಚಾರ ಮಾಡುತ್ತಿದ್ದಾರೆ.. ಜಡೇಜಾರನ್ನು ಕ್ರಿಕೆಟಿಗನನ್ನಾಗಿ ಮಾಡದಿದ್ದರೆ ಚೆನ್ನಾಗಿರುತ್ತಿತ್ತು" ಎಂದು ಆರೋಪಿಸಿದ್ದಾರೆ. 

ಇದನ್ನೂ ಓದಿ-Irfan Pathan wife: ಇರ್ಫಾನ್ ಪಠಾಣ್ ಪತ್ನಿ ಸಫಾ ಬೇಗ್ ಯಾರು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ!

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News