ಏಕದಿನ ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ! ಧೋನಿ ಗರಡಿಯಲ್ಲಿ ಪಳಗಿದ 5 ಆಟಗಾರರಿಗೆ ಅವಕಾಶ ಕೊಟ್ಟ ಸಮಿತಿ

World Cup 2023, Mahendra Singh Dhoni: ಮಹೇಂದ್ರ ಸಿಂಗ್ ಧೋನಿ 2007 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಧೋನಿ ತಂಡದ ನಾಯಕತ್ವ ವಹಿಸಿಕೊಂಡಾಗ ಅವರಿಗೆ ಹಲವು ಸವಾಲುಗಳಿದ್ದವು.

Written by - Bhavishya Shetty | Last Updated : Aug 8, 2023, 02:12 PM IST
    • ಮಹೇಂದ್ರ ಸಿಂಗ್ ಧೋನಿ 2007 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡರು.
    • ಧೋನಿ ತಂಡದ ನಾಯಕತ್ವ ವಹಿಸಿಕೊಂಡಾಗ ಅವರಿಗೆ ಹಲವು ಸವಾಲುಗಳಿದ್ದವು.
    • ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸುವುದು ಬಹುದೊಡ್ಡ ಸವಾಲುಗಳಲ್ಲಿ ಒಂದು.
ಏಕದಿನ ವಿಶ್ವಕಪ್’ಗೆ ಟೀಂ ಇಂಡಿಯಾ ಪ್ರಕಟ! ಧೋನಿ ಗರಡಿಯಲ್ಲಿ ಪಳಗಿದ 5 ಆಟಗಾರರಿಗೆ ಅವಕಾಶ ಕೊಟ್ಟ ಸಮಿತಿ title=
ODI World Cup 2023

World Cup 2023: ಟೀಮ್ ಇಂಡಿಯಾ ಪ್ರಸ್ತುತ 5 ಪಂದ್ಯ ವಿಜೇತ ಆಟಗಾರರನ್ನು ಹೊಂದಿದೆ. ಈ ಐವರು ಸಹ ಈ ಬಾರಿಯ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಎಂಟ್ರಿ ಪಡೆಯುವುದರಲ್ಲಿ ಸಂದೇಹವೇ ಇಲ್ಲ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಈ ಐವರು ಪಂದ್ಯಶ್ರೇಷ್ಠ ಆಟಗಾರರನ್ನು ಪಡೆದುಕೊಂಡಿದೆ ಎಂದರೆ ತಪ್ಪಾಗಲ್ಲ.

ಇದನ್ನೂ ಓದಿ: ODIನಲ್ಲಿ ದ್ವಿಶತಕ ಸಿಡಿಸಿದ ಈ ಕ್ರಿಕೆಟಿಗ ಪ್ಲೇಯಿಂಗ್ 11ನಿಂದ ಔಟ್!

ಮಹೇಂದ್ರ ಸಿಂಗ್ ಧೋನಿ 2007 ರಲ್ಲಿ ಭಾರತ ತಂಡದ ನಾಯಕತ್ವವನ್ನು ವಹಿಸಿಕೊಂಡರು. ಧೋನಿ ತಂಡದ ನಾಯಕತ್ವ ವಹಿಸಿಕೊಂಡಾಗ ಅವರಿಗೆ ಹಲವು ಸವಾಲುಗಳಿದ್ದವು. ಯುವಕರಿಗೆ ಅವಕಾಶಗಳನ್ನು ನೀಡಿ ಭವಿಷ್ಯಕ್ಕಾಗಿ ಒಂದು ತಂಡವನ್ನು ನಿರ್ಮಿಸುವುದು ಅವರ ಮುಂದಿದ್ದ ಬಹುದೊಡ್ಡ ಸವಾಲುಗಳಲ್ಲಿ ಒಂದು.

 ಆ ಎಲ್ಲಾ ಸವಾಲುಗಳನ್ನು ಎದುರಿಸಿದ ಧೋನಿ ಭಾರತ ತಂಡಕ್ಕೆ ಹಲವು ಐತಿಹಾಸಿಕ ಕ್ಷಣಗಳನ್ನು ಅನುಭವಿಸುವ ಅವಕಾಶ ನೀಡಿದರು. ಧೋನಿ ನಾಯಕತ್ವದಲ್ಲಿ ಭಾರತವು ಐಸಿಸಿ ವಿಶ್ವ ಟಿ20 (2007), ಕ್ರಿಕೆಟ್ ವಿಶ್ವಕಪ್ (2011) ಮತ್ತು ಐಸಿಸಿ ಚಾಂಪಿಯನ್ಸ್ ಟ್ರೋಫಿ (2013) ಗೆದ್ದಿದೆ. ಇದಲ್ಲದೇ 2009ರಲ್ಲಿ ಭಾರತ ಮೊದಲ ಬಾರಿಗೆ ಟೆಸ್ಟ್‌’ನಲ್ಲಿ ನಂಬರ್ ಒನ್ ಆಗಿ ಹೊರಹೊಮ್ಮಿದ್ದು ಧೋನಿ ನಾಯಕತ್ವದಲ್ಲೇ. ಧೋನಿ ತಮ್ಮ ನಾಯಕತ್ವದಲ್ಲಿ 5 ಅದ್ಭುತ ಆಟಗಾರರಿಗೆ ಅವಕಾಶ ನೀಡಿದ್ದು, ಈಗ ಅದೇ ಆಟಗಾರರು ಮತ್ತೆ ವಿಶ್ವಕಪ್ ಆಡಲಿದ್ದಾರೆ. ಈ ಐವರು ಭಾರತಕ್ಕೆ 12 ವರ್ಷಗಳ ಬಳಿಕ ವಿಶ್ವಕಪ್ ತಂದುಕೊಡುವ ಭರವಸೆ ನೀಡಿದ್ದಾರೆ.  

1. ವಿರಾಟ್ ಕೊಹ್ಲಿ:

ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನವನ್ನು ಧೋನಿ ನಾಯಕತ್ವದಲ್ಲಿ ಪ್ರಾರಂಭಿಸಿದರು. ಏಕದಿನದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಲು ಅವಕಾಶ ನೀಡಿದ್ದು ಸಹ ಧೋನಿ. ಕೊಹ್ಲಿಯ ಉತ್ತಮ ಪ್ರದರ್ಶನ ಕಂಡ ಧೋನಿ ಅವರಿಗೆ ಟೆಸ್ಟ್‌ನಲ್ಲೂ ಅವಕಾಶ ನೀಡಿದ್ದರು. 2011-12ರಲ್ಲಿ ಆಸ್ಟ್ರೇಲಿಯಾ ಪ್ರವಾಸದಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಲಿಲ್ಲ, ಆದರೆ ಧೋನಿ ಅವರಿಗೆ ಆಗಾಗ್ಗೆ ಅವಕಾಶಗಳನ್ನು ನೀಡುತ್ತಲೇ ಇದ್ದರು. ಕಡೆಗೆ ಕೊಹ್ಲಿ ಕೂಡ ಅರ್ಧಶತಕ ಗಳಿಸಿಯೇ ಬಿಟ್ಟರು. ಅಡಿಲೇಡ್‌ ನಲ್ಲಿ ಶತಕ ಸಿಡಿಸುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು ಕೊಹ್ಲಿ. 2012 ರಲ್ಲಿ ಪರ್ತ್‌’ನಲ್ಲಿ ಕೊಹ್ಲಿ ಬದಲಿಗೆ ರೋಹಿತ್‌’ಗೆ ಅವಕಾಶ ನೀಡಲು ಆಯ್ಕೆಗಾರರು ಬಯಸಿದ್ದರು, ಆದರೆ ಧೋನಿ ವಿರಾಟ್ ಕೊಹ್ಲಿಯನ್ನು ತಮ್ಮ ಪ್ಲೇಯಿಂಗ್ XI ಗೆ ಸೇರಿಸಿಕೊಂಡರು. ಈ ವಿಷಯವನ್ನು ಸ್ವತಃ ಭಾರತದ ಮಾಜಿ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಅವರೇ ಹೇಳಿದ್ದು, ಆ ಸಮಯದಲ್ಲಿ ನಾನು ಉಪನಾಯಕನಾಗಿದ್ದೆ ಮತ್ತು ಧೋನಿ ಅವರ ಸೂಚನೆಯ ಮೇರೆಗೆ ನಾವು ರೋಹಿತ್ ಬದಲಿಗೆ ಕೊಹ್ಲಿಯನ್ನು ಆಯ್ಕೆ ಮಾಡಿದ್ದೆವು ಎಂದರು.

2. ರೋಹಿತ್ ಶರ್ಮಾ:

ನಿರಂತರ ಕಳಪೆ ಫಾರ್ಮ್ ನಡುವೆಯೂ ಧೋನಿ ರೋಹಿತ್ ಶರ್ಮಾಗೆ ಅವಕಾಶ ನೀಡಿದರು. ಇದು ಅವರ ಸಂಪೂರ್ಣ ವೃತ್ತಿಜೀವನವನ್ನು ಬದಲಾಯಿಸಿತು. ರೋಹಿತ್‌’ರನ್ನು ಏಕದಿನದಲ್ಲಿ ಆರಂಭಿಕ ಆಟಗಾರನನ್ನಾಗಿ ಮಾಡುವಲ್ಲಿ ಧೋನಿಯ ದೊಡ್ಡ ಕೊಡುಗೆಯಿದೆ. 2013 ರಲ್ಲಿ ಧೋನಿ ರೋಹಿತ್ ಶರ್ಮಾಗೆ ಆರಂಭಿಕ ಸ್ಥಾನ ನೀಡಿದ ಬಳಿಕ ಅದೃಷ್ಟವೇ ಬದಲಾಯಿತು ಎನ್ನಬಹುದು. ಇನ್ನು ರೋಹಿತ್ ಶರ್ಮಾ ಅವರನ್ನು ಹಿಟ್‌ಮ್ಯಾನ್ ಮಾಡುವಲ್ಲಿ ಮಾಹಿಯ ಕೈವಾಡವಿದೆ.

3. ರವಿಚಂದ್ರನ್ ಅಶ್ವಿನ್:

ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಇಂದು ವಿಶ್ವದ ಅತ್ಯುತ್ತಮ ಸ್ಪಿನ್ ಬೌಲರ್‌’ಗಳಲ್ಲಿ ಒಬ್ಬರು. ಐಪಿಎಲ್ 2010ರಲ್ಲಿ ಮೊದಲ ಬಾರಿಗೆ ಅಶ್ವಿನ್‌’ಗೆ ಆಡುವ ಅವಕಾಶವನ್ನು ಧೋನಿ ನೀಡಿದರು. ಐಪಿಎಲ್‌’ನಲ್ಲಿ ಅಶ್ವಿನ್ ಉತ್ತಮ ಪ್ರದರ್ಶನ ನೀಡಿದ್ದರು. ಧೋನಿ ನಾಯಕತ್ವದಲ್ಲಿ ಅಶ್ವಿನ್ ಐಪಿಎಲ್‌’ನಲ್ಲಿ ಸಿಎಸ್‌ಕೆ ಪರ ಆಡುತ್ತಿದ್ದರು. ಅವರ ಪ್ರತಿಭೆಯನ್ನು ನೋಡಿ ನಂತರ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಂಡರು. ಇದರಿಂದಾಗಿ ಅಶ್ವಿನ್ ಭಾರತ ತಂಡದಲ್ಲಿ ಸ್ಥಾನ ಪಡೆಯುವಂತಾಯಿತು. ಅಶ್ವಿನ್ 2010 ರಲ್ಲಿ ತಂಡಕ್ಕೆ ಆಗಮಿಸಿ, ಒಂದು ವರ್ಷದ ನಂತರ ಅಂದರೆ 2011 ರ ವಿಶ್ವಕಪ್‌’ಗೆ ಮೊದಲ ಬಾರಿಗೆ ಆಯ್ಕೆಯಾದರು.

4. ರವೀಂದ್ರ ಜಡೇಜಾ:

ರವೀಂದ್ರ ಜಡೇಜಾ ಇಂದು ಟೀಂ ಇಂಡಿಯಾದ ದೊಡ್ಡ ಮ್ಯಾಚ್ ವಿನ್ನರ್‌ಗಳಲ್ಲಿ ಒಬ್ಬರಾಗಿದ್ದಾರೆ. ಬೌಲಿಂಗ್, ಬ್ಯಾಟಿಂಗ್ ಮತ್ತು ಫೀಲ್ಡಿಂಗ್ ಮೂರೂ ವಿಷಯಗಳಲ್ಲಿ ಜಡೇಜಾ ಸೂಪರ್ ಆಟ ಪ್ರದರ್ಶನ ಮಾಡುತ್ತಾರೆ. ಜಡೇಜಾ ಅವರನ್ನು ಟೀಂ ಇಂಡಿಯಾಕ್ಕೆ ಕರೆತರುವುದರ ಹಿಂದೆ ಧೋನಿ ಕೈವಾಡವಿತ್ತು. ರವೀಂದ್ರ ಜಡೇಜಾ ಅವರು ಧೋನಿ ನಾಯಕತ್ವದಲ್ಲಿ ಸಿಎಸ್‌ಕೆಗಾಗಿ ಆಡುತ್ತಿದ್ದರು, ಜೊತೆ ಅವರ ನೆಚ್ಚಿನವರಾಗಿದ್ದರು. ಇದೇ ಕಾರಣದಿಂದ ಧೋನಿ ಜಡೇಜಾಗೆ ತಂಡದಲ್ಲಿ ಅವಕಾಶ ನೀಡಿದರು.

5. ಮೊಹಮ್ಮದ್ ಶಮಿ:

ಮಹೇಂದ್ರ ಸಿಂಗ್ ಧೋನಿ ಮತ್ತು ಮೊಹಮ್ಮದ್ ಶಮಿ ಅವರ ಸ್ನೇಹ ವಿಶೇಷವಾದದ್ದು. ಧೋನಿ ಅವರ ನಾಯಕತ್ವದಲ್ಲಿ ಮೊಹಮ್ಮದ್ ಶಮಿಗೆ ಸಾಕಷ್ಟು ಅವಕಾಶಗಳನ್ನು ನೀಡಿದರು. ಈ ಕಾರಣದಿಂದಾಗಿ ಅವರು ಇಂದು ಅಪಾಯಕಾರಿ ಬೌಲರ್‌ಗಳ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ: ಭಾರತದ ವಿರುದ್ಧ ವಿಂಡೀಸ್’ಗೆ ಗೆಲುವು ತಂದುಕೊಟ್ಟಿದ್ದ ನಿಕೋಲಸ್ ಪೂರನ್’ಗೆ ಬಿತ್ತು ಭಾರೀ ದಂಡ!

ಈ ಎಲ್ಲಾ ಆಟಗಾರರು ಈ ಬಾರಿಯ ವಿಶ್ವಕಪ್’ನಲ್ಲಿ ಭಾರತದ ಪರ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ. ಇದರ ಸ್ಪಷ್ಟತೆ ಮಾತ್ರ ಬಿಸಿಸಿಐ ತಂಡ ಪ್ರಕಟಿಸಿದ ಬಳಿಕವೇ ತಿಳಿದುಬರಬೇಕಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News