ಕುಟುಂಬ ಪೋಷಣೆಗೆ ಕಸ ಹೆಕ್ಕುತ್ತಿದ್ದ ಆತ ಇಂದು ‘ವಿಶ್ವ ಕ್ರಿಕೆಟ್’ನ ಬಾಸ್’! 14 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಈತ

Chris Gayle Birthday: ಕ್ರಿಸ್ ಗೇಲ್ 483 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇನ್ನು ಇವರು ನಿರ್ಮಿಸಿರುವ ಅದೆಷ್ಟೋ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ.

Written by - Bhavishya Shetty | Last Updated : Sep 21, 2023, 12:51 PM IST
    • ಶಕ್ತಿಶಾಲಿ ಟಿ20 ಆಟಗಾರ ಕ್ರಿಸ್ ಗೇಲ್’ಗೆ 43ನೇ ಹುಟ್ಟುಹಬ್ಬದ ಸಂಭ್ರಮ
    • 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ
    • ಇಂದು ಇಡೀ ಜಗತ್ತೇ ಗೇಲ್ ಅವರನ್ನು 'ಯೂನಿವರ್ಸ್ ಬಾಸ್' ಎಂದು ಕರೆಯುತ್ತದೆ.
ಕುಟುಂಬ ಪೋಷಣೆಗೆ ಕಸ ಹೆಕ್ಕುತ್ತಿದ್ದ ಆತ ಇಂದು ‘ವಿಶ್ವ ಕ್ರಿಕೆಟ್’ನ ಬಾಸ್’! 14 ಸಾವಿರ ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಈತ title=
Chris Gayle Birthday

Chris Gayle Birthday: ವಿಶ್ವದ ಅತ್ಯಂತ ಜನಪ್ರಿಯ ಮತ್ತು ಶಕ್ತಿಶಾಲಿ ಟಿ20 ಆಟಗಾರ ಕ್ರಿಸ್ ಗೇಲ್ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 21 ಸೆಪ್ಟೆಂಬರ್ 1979 ರಂದು ಜಮೈಕಾದ ಕಿಂಗ್‌’ಸ್ಟನ್‌’ನಲ್ಲಿ ಜನಿಸಿದ ಕ್ರಿಸ್ ಗೇಲ್ ತಮ್ಮ 23 ವರ್ಷಗಳ ಕ್ರಿಕೆಟ್ ಜೀವನದಲ್ಲಿ ಹಲವು ದೊಡ್ಡ ದಾಖಲೆಗಳನ್ನು ಮಾಡಿದ್ದಾರೆ. ಇಂದು ಇಡೀ ಜಗತ್ತೇ ಗೇಲ್ ಅವರನ್ನು 'ಯೂನಿವರ್ಸ್ ಬಾಸ್' ಎಂದು ಕರೆಯುತ್ತದೆ.

ಇದನ್ನೂ ಓದಿ: ಈ ಬೀಜದ ಪೇಸ್ಟನ್ನು ಹಚ್ಚಿದರೆ ಸಾಕು ಬಿಳಿಕೂದಲು ಪರ್ಮನೆಂಟ್ ಆಗಿ ಕಪ್ಪಾಗುವುದಲ್ಲದೆ, ಮೊಣಕಾಲುದ್ದ ಬೆಳೆಯುತ್ತೆ!

ಕ್ರಿಸ್ ಗೇಲ್ ಅವರ ಪೂರ್ಣ ಹೆಸರು ಏನು?

ಕ್ರಿಸ್ ಗೇಲ್ 483 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಇನ್ನು ಇವರು ನಿರ್ಮಿಸಿರುವ ಅದೆಷ್ಟೋ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಮುಟ್ಟಲು ಸಾಧ್ಯವಾಗಿಲ್ಲ. ಟಿ20 ಕ್ರಿಕೆಟ್‌’ನಲ್ಲಿ 14,000 ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಗೇಲ್. ಇನ್ನು ಕ್ರೀಡೆಯ ಜೊತೆಗೆ ಗೇಲ್ ತಮ್ಮ ಜೀವನಶೈಲಿಯಿಂದ ಕೂಡ ಭಾರೀ ಸುದ್ದಿಯಲ್ಲಿರುತ್ತಾರೆ. ಆದರೆ ಗೇಲ್ ಅವರ ಪೂರ್ಣ ಹೆಸರು ಎಂಬುದು ಅನೇಕ ಜನರಿಗೆ ಗೊತ್ತೇ ಇಲ್ಲ. ಕ್ರಿಸ್ಟೋಫರ್ ಹೆನ್ರಿ ಗೇಲ್ ಎಂಬುದು ಕ್ರಿಸ್ ಗೇಲ್ ಅವರ ಪೂರ್ಣ ನಾಮ.

1999ರಲ್ಲಿ ಟೀಂ ಇಂಡಿಯಾ ವಿರುದ್ಧ ಏಕದಿನ ಕ್ರಿಕೆಟ್‌’ಗೆ ಪದಾರ್ಪಣೆ ಮಾಡಿದ್ದ ಕ್ರಿಸ್ ಗೇಲ್ ತಮ್ಮ ವೃತ್ತಿಜೀವನದ ಆರಂಭದಲ್ಲಿ ನಿಧಾನಗತಿಯ ಬ್ಯಾಟಿಂಗ್ ಪ್ರದರ್ಶಿಸಿದ್ದರು. ನಂತರ ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಹೊರಹೊಮ್ಮಿದರು. ಆದರೆ  ತನ್ನ ಕುಟುಂಬವನ್ನು ಪೋಷಿಸಲು ಒಂದೊಮ್ಮೆ ಕಸ ಕೂಡ ಆಯುತ್ತಿದ್ದರು ಗೇಲ್. ಈ ಬಗ್ಗೆ ಸ್ವತಃ ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಈಗ ಗೇಲ್ ವಾಸಿಸುವ ಮನೆ 20 ಕೋಟಿ ರೂ. ಮೌಲ್ಯದ್ದು.

ಇದನ್ನೂ ಓದಿ: OPS ಮತ್ತು NPSನಲ್ಲಿ ಉದ್ಯೋಗಿಗಳಿಗೆ ಯಾವುದು ಸೂಕ್ತ ? ನಿಜವಾಗಿಯೂ ಲಾಭ ಯಾವುದರಿಂದ ? 

ಗೇಲ್ ಅವರ 'ಪವರ್ ಹಿಟ್ಟಿಂಗ್' ಆಟದಿಂದಾಗಿ 'ಯೂನಿವರ್ಸ್ ಬಾಸ್' ಎಂದು ಅವರನ್ನು ಕರೆಯುತ್ತಾರೆ. ಅಷ್ಟೇ ಅಲ್ಲದೆ ಕಳೆದ ಕೆಲವು ವರ್ಷಗಳಲ್ಲಿ 'ದಿ ಬಾಸ್' ಎಂಬ ಸ್ಟಿಕ್ಕರ್ ಹೊಂದಿರುವ ಬ್ಯಾಟ್‌’ನೊಂದಿಗೆ ಆಟವಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News