ಸತತ 9 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ತಂಡ

ಜುಲೈ 6 ರಂದು ಸಬಿನಾ ಪಾರ್ಕ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್ಗಳಿಂದ ಸೋಲಿಸುವ ಮೂಲಕ ಕೊಹ್ಲಿ ನಾಯಕತ್ವದ ಸರಣಿ ಆರಂಭವಾಯಿತು.

Last Updated : Sep 25, 2017, 10:24 AM IST
ಸತತ 9 ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ವಿರಾಟ್ ಕೊಹ್ಲಿ ತಂಡ title=

ಇಂದೋರ್: ಹೋಲ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಸತತ ಒಂಬತ್ತು ಏಕದಿನ ಪಂದ್ಯಗಳನ್ನು ಗೆಲ್ಲುವ ಮೂಲಕ ಕೊಹ್ಲಿ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ನಿನ್ನೆ ನಡೆದ ಪಂದ್ಯದಲ್ಲಿ ಭಾರತವು ಐದು ವಿಕೆಟ್ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿತು ಮತ್ತು ಅಜೇಯ 3-0 ಮುನ್ನಡೆಯನ್ನು ಸಾಧಿಸಿತು. ಫೆಬ್ರವರಿ 2008 ರಿಂದ ಜನವರಿ 2009 ರವರೆಗೆ ಭಾರತ ತಂಡದ ನಾಯಕರಾಗಿದ್ದ ಧೋನಿ ಏಕದಿನ ಪಂದ್ಯಗಳಲ್ಲಿ ಸತತ ಒಂಬತ್ತು ಪಂದ್ಯಗಳನ್ನು ಜಯಿಸಿದ್ದರು. 

ಜುಲೈ 6 ರಂದು ಸಬಿನಾ ಪಾರ್ಕ್ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್ಗಳಿಂದ ಮಣಿಸುವ ಮೂಲಕ ಕೊಹ್ಲಿ ನಾಯಕತ್ವದ ಸರಣಿ ಆರಂಭವಾಯಿತು. ನಂತರ ಶ್ರೀಲಂಕಾವನ್ನು 5 ಏಕದಿನ ಸರಣಿಯಲ್ಲಿ 5-0 ಮುನ್ನಡೆ ಸಾಧಿಸಿದರು. ಇದೀಗ ಆಸ್ಟ್ರೇಲಿಯಾ ತಂಡದ 5 ಸರಣಿಗಳಲ್ಲಿ 3-0 ಅಂತರದಲ್ಲಿ ಮುನ್ನಡೆ ಸಾದಿಸಿದೆ. ಕೊಹ್ಲಿ ಬ್ಯಾಟ್ಸಮನ್ ಆಗಿ ತುಂಬಾ ಪರಿಣಾಮಕಾರಿಯಾಗಿದ್ದು, ತಮ್ಮ ತಂಡಕ್ಕೆ ನಿರಂತರವಾಗಿ ಸ್ಕೋರ್ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಎಲ್ಲರ ಚಿತ್ತ ಬೆಂಗಳೂರಿನತ್ತ ಸೆಳೆದಿದೆ. ಸೆ. 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ನಾಲ್ಕನೇ ಪಂದ್ಯದಲ್ಲಿ ಕೊಹ್ಲಿ ತಂಡ ವಿಜಯ ಪತಾಕೆ ಹಾರಿಸಲೆಂದು ಎಲ್ಲರ ಹಂಬಲವಾಗಿದೆ. 

ಇಂದೋರ್ ನಲ್ಲಿ ಭಾರತದ ವಿಜಯ ರಥವನ್ನು ಮುನ್ನಡೆಸಿದ ಭಾರತ

ಆಸ್ಟ್ರೇಲಿಯಾ ವಿರುದ್ಧದ ಐದು ವಿಕೆಟ್ಗಳ ಅದ್ಭುತ ಗೆಲುವನ್ನು ಸಾಧಿಸಲು ಈ ಕ್ರೀಡಾಂಗಣ ಸಾಕ್ಷಿಯಾಯಿತು. ಈ ಕ್ರೀಡಾಂಗಣದಲ್ಲಿ ತಂಡವು ಸತತ ಐದನೇ ಜಯ ಸಾಧಿಸಿದೆ. ಸುಮಾರು 28,500 ಜನರನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಕ್ರೀಡಾಂಗಣವು ಭಾರತೀಯ ಕ್ರಿಕೆಟ್ ತಂಡಕ್ಕೆ ಬಹಳ ಅದ್ರುಷ್ಟಶಾಲಿಯಾದ ಕ್ರೀಡಾಂಗಣವಾಗಿದೆ. ಇದೇ ಕ್ರೀಡಾಂಗಣದಲ್ಲಿ ಭಾರತ ತಂಡವು ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಏಕದಿನ ಪಂದ್ಯಗಳು ಆಡಿದೆ. ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲೂ ಸಹ ಭಾರತ ವಿಜಯ ಸಾಧಿಸಿದೆ. 

ಎಲ್ಲಾ ನಾಲ್ಕು ಪಂದ್ಯಗಳಲ್ಲಿಯೂ ಸಹ ಭಾರತ ತಂಡ ಗೆದ್ದಿದೆ ಎಂಬುದು ಒಂದು ಕಾಕತಾಳಿಯ ಸಂಗತಿಯಾಗಿದೆ. ಆಸ್ಟ್ರೇಲಿಯಾ ವಿರುದ್ದ ಆಡಿದ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ಟಾಸ್ ಕಳೆದು ಕೊಂಡರಾದರೂ, ಅಂತಿಮವಾಗಿ ಪಂದ್ಯವನ್ನು ಗೆದ್ದರು. 3-0 ಮುನ್ನಡೆಯ ಮೂಲಕ ತಮ್ಮ ಸ್ಥಾನವನ್ನು ಕಾಯ್ದುಕೊಂಡರು. ಹೋಲ್ಕರ್ ಕ್ರೀಡಾಂಗಣದ ಇತಿಹಾಸದಲ್ಲಿ ಮೊದಲ ಏಕದಿನ ಅಂತರಾಷ್ಟ್ರೀಯ ಪಂದ್ಯವು ಭಾರತ ಮತ್ತು ಇಂಗ್ಲೆಂಡ್ ನಡುವೆ ಏಪ್ರಿಲ್ 15, 2006 ರಂದು ನಡೆಯಿತು. ಈ ಪಂದ್ಯದಲ್ಲಿ, ಭಾರತವು ಏಳು ವಿಕೆಟ್ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿತು. 

ಹೊಲ್ಕರ್ ಕ್ರೀಡಾಂಗಣದಲ್ಲಿ ಆಡಿದ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತವು 2016 ರ ಅಕ್ಟೋಬರ್ 11 ರಂದು 321 ರನ್ಗಳಿಂದ ನ್ಯೂಜಿಲೆಂಡ್ನ್ನು ಸೋಲಿಸಿತು. ಇದರೊಂದಿಗೆ, 3-0 ಸರಣಿಯಲ್ಲಿ 'ಕ್ಲೀನ್ ಸ್ವೀಪ್' ಹೊಂದಿತ್ತು. ಈ ಪಂದ್ಯವು ಇಂದೋರ್ ಮಾತ್ರವಲ್ಲದೆ ಮಧ್ಯಪ್ರದೇಶದ ಇತಿಹಾಸದ ಮೊದಲ ಟೆಸ್ಟ್ ಪಂದ್ಯವಾಗಿತ್ತು, ಇದು ಭಾರತದ ವಿಜಯದ ಕಾರಣದಿಂದ ಸ್ಥಳೀಯ ಪ್ರೇಕ್ಷಕರಿಗೆ ವಿಶೇಷವಾಗಿ ಸ್ಮರಣೀಯವಾಯಿತು.

Trending News