ವಿರಾಟ್ ಕೊಹ್ಲಿ ಶತಕಕ್ಕೆ ಪತ್ನಿ ಅನುಷ್ಕಾ ಫುಲ್ ಖುಷ್!

    

Updated: Aug 3, 2018 , 01:05 PM IST
 ವಿರಾಟ್ ಕೊಹ್ಲಿ ಶತಕಕ್ಕೆ ಪತ್ನಿ ಅನುಷ್ಕಾ ಫುಲ್ ಖುಷ್!
Photo courtesy: twitter

ಬರ್ಮಿಂಗ್ ಹ್ಯಾಮ್ : ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ 22ನೆ ಶತಕ ಗಳಿಸುವುದರ ಮೂಲಕ ಗಮನ ಸೆಳೆದರು.ಆ ಮೂಲಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ನಲ್ಲಿ ಟೆಸ್ಟ್ ಶತಕವನ್ನು ಗಳಿಸಿದ್ದಾರೆ.2014 ರ ಇಂಗ್ಲೆಂಡ್ ಪ್ರವಾಸದಲ್ಲಿ 39 ರನ್ ಗಳಿಸಿರುವುದು ಇದುವರೆಗಿನ ಗರಿಷ್ಟ ಮೊತ್ತವಾಗಿತ್ತು. ಈಗ ಕೊಹ್ಲಿ 113 ಇನ್ನಿಂಗ್ಸ್ ಗಳಲ್ಲಿ 22 ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ.

ವಿಶೇಷವೆಂದರೆ ಕೊಹ್ಲಿ ಶತಕ ಗಳಿಸಿದ ನಂತರ ತಮ್ಮ ಮದುವೆ ಉಂಗುರವನ್ನು ಚುಂಬಿಸುತ್ತಾ ಹೆಂಡತಿ ಅನುಷ್ಕಾ ಶರ್ಮಾ ಕಡೆಗೆ ಸಂತಸ ವ್ಯಕ್ತಪಡಿಸಿದರು.ಬೌಂಡರಿ ಮೂಲಕ ಶತಕವನ್ನು ಗಳಿಸಿದ ಕೊಹ್ಲಿ ತನ್ನ ಹೆಲ್ಮೆಟ್, ಕೈಗವಸು ತೆಗೆದು ಕುತ್ತಿಗೆಯಲ್ಲಿದ್ದ ಚೈನ್ ಮತ್ತು ವಿವಾಹದ ಉಂಗುರಕ್ಕೆ ಮುತ್ತಿಕ್ಕಿದರು.  

ಮೊದಲ ಟೆಸ್ಟ್ ನಲ್ಲಿ ಭಾರತದ ತಂಡದ ವಿಕೆಟ್ ಗಳು ತಲೆಗರಲೇಯಂತೆ ಉರುಳುತ್ತಿದ್ದರೆ ಇನ್ನೊಂದೆಡೆಗೆ ಕೊಹ್ಲಿ ಅವರು 225 ಎಸೆತಗಳಲ್ಲಿ 149 ರನ್ ಗಳ ಭರ್ಜರಿ ಶತಕ ಗಳಿಸಿದರು.ಈ ಹಿಂದೆ ಕೊಹ್ಲಿ ಇಂಗ್ಲೆಂಡ್ನಲ್ಲಿ ನಡೆದ 2014 ರ ಟೆಸ್ಟ್ ಸರಣಿಯಲ್ಲಿ  10 ಇನ್ನಿಂಗ್ಸ್ನಲ್ಲಿ 134 ರನ್ ಗಳನ್ನ  13.4 ಸರಾಸರಿಯಲ್ಲಿ ಗಳಿಸಿದ್ದರು. 

By continuing to use the site, you agree to the use of cookies. You can find out more by clicking this link

Close