ವಿರಾಟ್ ಕೊಹ್ಲಿಯಿಂದ ನೂತನ ದಾಖಲೆ !

 ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ಸತತ ಮೂರು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾದರು . ಅಲ್ಲದೆ ಎದುರಾಳಿ ತಂಡದ ವಿರುದ್ಧ ಸತತ ನಾಲ್ಕು ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನ್ನುವ ಶ್ರೆಯವನ್ನು ತಮ್ಮದಾಗಿಸಿಕೊಂಡರು.

Last Updated : Oct 28, 2018, 10:56 AM IST
ವಿರಾಟ್ ಕೊಹ್ಲಿಯಿಂದ ನೂತನ ದಾಖಲೆ ! title=
Photo:twitter

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್ನಲ್ಲಿ ಸತತ ಮೂರು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾದರು . ಅಲ್ಲದೆ ಎದುರಾಳಿ ತಂಡದ ವಿರುದ್ಧ ಸತತ ನಾಲ್ಕು ಏಕದಿನ ಪಂದ್ಯಗಳಲ್ಲಿ ಶತಕಗಳನ್ನು ಗಳಿಸಿದ ಮೊದಲ ಆಟಗಾರ ಎನ್ನುವ ಶ್ರೆಯವನ್ನು ತಮ್ಮದಾಗಿಸಿಕೊಂಡರು.

ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ 107 ಎಸೆತಗಳಲ್ಲಿ 140 ರನ್ ಗಳಿಸಿದರು. ಆ ಪಂದ್ಯದಲ್ಲಿ ಭಾರತವು 8 ವಿಕೆಟ್ಗಳಿಂದ ಗೆದ್ದುಕೊಂಡಿತು.ಇದಾದ ನಂತರ ಎರಡನೇ ಪಂದ್ಯದಲ್ಲಿ ಅವರು 157 ರನ್ ಗಳಿಸಿದರು.ಆದರೆ ಎರಡನೇ ಪಂದ್ಯವು ಟೈ ಪಂದ್ಯದಲ್ಲಿ ಕೊನೆಗೊಂಡಿತು.ಮೂರನೆಯ ಪಂದ್ಯದಲ್ಲಿ ಕೊಹ್ಲಿ 119 ಎಸೆತಗಳಲ್ಲಿ 107 ರನ್ ಗಳಿಸುವ ಮೂಲಕ ಸತತ ಮೂರು ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ ಎನ್ನುವ ದಾಖಲೆಯನ್ನು ಬರೆದರು. 

ಇತ್ತೀಚೆಗಷ್ಟೇ ಕೊಹ್ಲಿ ಕೇವಲ 205 ಇನ್ನಿಂಗ್ಸ್ ಗಳಲ್ಲಿ 10,000 ರನ್ ಗಳನ್ನು ಗಳಿಸುವ ಮೂಲಕ ಸಚಿನ್ ದಾಖಲೆಯನ್ನು ಮುರಿದಿದ್ದರು.ಸಚಿನ್ ಈ ದಾಖಲೆಯನ್ನು 259 ಇನ್ನಿಂಗ್ಸ್ ನಲ್ಲಿ  ಮಾಡಿದ್ದರು. ಸೌರವ್ ಗಂಗೂಲಿ ಮತ್ತು ರಿಕಿ ಪಾಂಟಿಂಗ್ ಕ್ರಮವಾಗಿ 263 ಮತ್ತು 266 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

Trending News