Virat Kohli: ಅಕಾಯ್‌ ಜನನದ ನಂತರ ಸೋಷಿಯಲ್‌ ಮಿಡಿಯಾದಲ್ಲಿ ಕೊಹ್ಲಿ ರೆಕಾರ್ಡ್‌! ಏನದು?

Virat Kohli Record: ಟೀ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಮೈದಾನದಿಂದ ದೂರವಿದ್ದರೂ ಸುದ್ದಿಯಲ್ಲಿದ್ದಾರೆ.. ಇದೀಗ ಕೊಹ್ಲಿ ಮತ್ತೆ ಮುಖ್ಯಾಂಶದಲ್ಲಿದ್ದು.. ಸೋಷಿಯಲ್‌ ಮಿಡಿಯಾದಲ್ಲಿ ಯಾವ ಭಾರತೀಯನೂ ಮಾಡಿರದ ರೆಕಾರ್ಡ ಮಾಡಿದ್ದಾರೆ.. ಏನದು ಅಂತೀರಾ.. ಈ ಸ್ಟೋರಿ ಓದಿ.. 

Written by - Savita M B | Last Updated : Feb 26, 2024, 09:12 AM IST
  • ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ
  • ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದಾರೆ
  • ಆದರೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ..
Virat Kohli: ಅಕಾಯ್‌ ಜನನದ ನಂತರ ಸೋಷಿಯಲ್‌ ಮಿಡಿಯಾದಲ್ಲಿ ಕೊಹ್ಲಿ ರೆಕಾರ್ಡ್‌! ಏನದು?  title=

Virat Kohli: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದಾರೆ.. ಆದರೂ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ.. ಇತ್ತೀಚೆಗಷ್ಟೇ ವಿರಾಟ್ ತಮ್ಮ ಎರಡನೇ ಮಗುವಿನ ಜನನದ ಸುದ್ದಿಯನ್ನು ಅನೌನ್ಸ್‌ ಮಾಡಿದ್ದರು.. ಈ ಕಾರಣಕ್ಕಾಗಿ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದು, ಪತ್ನಿ ಅನುಷ್ಕಾ ಹಾಗೂ ಮಗ ಅಕಾಯ್‌ ಜೊತೆ ಕಾಲ ಕಳೆಯುತ್ತಿದ್ದಾರೆ.

ಪುತ್ರ ಅಕಾಯ್‌ ಜನಿಸಿದ 10 ದಿನಗಳಲ್ಲಿ ಸೋಷಿಯಲ್‌ ಮಿಡಿಯಾ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ವಿರಾಟ್‌ ಅವರ 6 ಪೋಸ್ಟ್‌ಗಳಲ್ಲಿ 10 ಮಿಲಿಯನ್‌ಗಿಂತಲೂ ಹೆಚ್ಚು ಲೈಕ್‌ಗಳನ್ನು ಪಡೆದಿದ್ದು.. ಸದ್ಯ ಕೊಹ್ಲಿ ಈ ರೆಕಾರ್ಡ್‌ ಮಾಡಿದ ಮೊದಲ ಭಾರತೀಯನಾಗಿದ್ದಾರೆ.. 

ಇದನ್ನೂ ಓದಿ-Jahnvi Kapoor: ಬಾಲಿವುಡ್ ಸುಂದರಿ ಜಾನ್ವಿ ಕಪೂರ್’ಗೆ RCBಯ ಆ ಇಬ್ಬರು ಆಟಗಾರರೇ ಫೇವರೇಟ್ ಕ್ರಿಕೆಟರ್ಸ್!
 
ಇಷ್ಟೇ ಅಲ್ಲ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯನಾಗಿದ್ದಾರೆ.. ಅವರು ಇನ್‌ಸ್ಟಾದಲ್ಲಿ 266 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.. ನಮ್ಮ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಖ್ಯಾತಿ ಗಳಿಸಿರುವ ವಿರಾಟ್‌ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ.. ಕೆಲವೊಮ್ಮೆ ಮೈದಾನದಲ್ಲಿ ಅವರನ್ನು ಭೇಟಿಯಾಗಲು ಅನೇಕರು ಭದ್ರತೆಯನ್ನೂ ಮೀರಿ ಕ್ರಿಕೆಟ್‌ ಗ್ರೌಂಡ್‌ಗೆ ಪ್ರವೇಶಿಸಿದ್ದಾರೆ.. 
 
ವಿರಾಟ್‌ ಇತ್ತೀಚೆಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಪುತ್ರ ಅಕಾಯ್‌ ಜನನದ ಕುರಿತು ಪೋಸ್ಟ್ ಅನ್ನು ಹಂಚಿಕೊಂಡಿದ್ದರು.. ಈ ಪೋಸ್ಟ್‌ಗೆ ಅಭಿಮಾನಿಗಳಿಂದ ಕಾಮೆಂಟ್‌ ಹಾಗೂ ಲೈಕ್ಸ್‌ಗಳ ಸುರಿಮಳೆಯೇ ಸುರಿದಿದ್ದು.. 10 ಲಕ್ಷಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ. ಇನ್ನು ವಿರಾಟ್‌ ಕೊಹ್ಲಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಿಂದ ವಿರಾಮ ತೆಗೆದುಕೊಂಡಿದ್ದು.. ಐಪಿಎಲ್ 2024 ನಲ್ಲಿ ಆಡುಲಿದ್ದಾರೆ.. 

ಇದನ್ನೂ ಓದಿ-Haris Rauf: PSLನಿಂದ ಫಾಸ್ಟ್‌ ಬೌಲರ್ ಹ್ಯಾರಿಸ್ ರೌಫ್ ಔಟ್‌!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News