'ನೀವು ಇಲ್ಲಾಂದ್ರೆ ನಾವು ಏನೂ ಅಲ್ಲ', ಆರ್​ಸಿಬಿ ಫ್ಯಾನ್ಸ್​ಗೆ ಕನ್ನಡದಲ್ಲಿ ಕೊಹ್ಲಿ ಟ್ವೀಟ್​!

ನೀವು ಇಲ್ಲಾಂದ್ರೆ ನಾವು ಏನು ಅಲ್ಲ ಎಂದು ವಿರಾಟ್ ಕೊಹ್ಲಿ ಆರ್​​ಸಿಬಿ ಅಭಿಮಾನಿಗಳಿಗೆ ಕನ್ನಡದಲ್ಲಿ ಟ್ವೀಟ್ ಮಾಡಿದ್ದಾರೆ.

Last Updated : May 6, 2019, 03:05 PM IST
'ನೀವು ಇಲ್ಲಾಂದ್ರೆ ನಾವು ಏನೂ ಅಲ್ಲ', ಆರ್​ಸಿಬಿ ಫ್ಯಾನ್ಸ್​ಗೆ ಕನ್ನಡದಲ್ಲಿ ಕೊಹ್ಲಿ ಟ್ವೀಟ್​! title=

ಬೆಂಗಳೂರು: ಐಪಿಎಲ್ 12ನೇ ಆವೃತ್ತಿಯ ಕ್ರಿಕೆಟ್ ತುರ್ನಿಯಲ್ಲಿ ತನ್ನ ಆಟ ಮುಗಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್​​ಸಿಬಿ) ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಕನ್ನಡದಲ್ಲಿ ಸಂದೇಶ ನೀಡಿದ್ದಾರೆ.

ಕಳೆದ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದರೂ ಪ್ಲೇ ಆಫ್​ ತಲುಪಲಾಗದೆ ಆರ್​ಸಿಬಿ ಟೂರ್ನಿಗೆ ವಿದಾಯ ಹೇಳಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾತ್ರ ಅಭಿಮಾನಿಗಳು ಕಿಕ್ಕಿರಿದು ತುಂಬಿದ್ದರು. ಹೀಗಾಗಿ ಈಗ ಕೊಹ್ಲಿ ಅವರಿಗೆ ಧನ್ಯವಾದ ಹೇಳಿದ್ದಾರೆ. 

ಈ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ "ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ನನ್ನ ಧನ್ಯವಾದಗಳು. ಮುಂದಿನ ವರ್ಷ ಮತ್ತಷ್ಟು ಬಲಿಷ್ಠವಾಗಿ ಮತ್ತೆ ಬರುತ್ತೇವೆ ಎಂದು ಸಂಪೂರ್ಣ ತಂಡ ಹಾಗೂ ಅಭಿಮಾನಿಗಳೂ ಸೇರಿದಂತೆ, ಮೈದಾನದ ಸಿಬ್ಬಂದಿ ಮತ್ತು ತರಬೇತುದಾರರಿಗೆ ಮಾತು ಕೊಡುತ್ತೇವೆ. ನೀವು ಇಲ್ಲಾಂದ್ರೆ ನಾವು ಏನು ಅಲ್ಲ" ಎಂದಿದ್ದಾರೆ.

Trending News