WPL 2023 LIVE: ಈ ಚಾನೆಲ್’ಗಳಲ್ಲಿ ಲೈವ್ ಆಗಿ ವೀಕ್ಷಿಸಿ ಮಹಿಳಾ ಪ್ರೀಮಿಯರ್ ಲೀಗ್ 2023: ಉಚಿತವಾಗಿಯೂ ನೋಡಬಹುದು!

WPL 2023 LIVE Broadcast: ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಐದು ತಂಡಗಳು 23 ದಿನಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಬಿಸಿಸಿಐ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತಿದೆ ಎಂದು ವರದಿಯಾಗಿದೆ.

Written by - Bhavishya Shetty | Last Updated : Mar 2, 2023, 02:54 PM IST
    • ಮಹಿಳಾ ಪ್ರೀಮಿಯರ್ ಲೀಗ್‌ 2023 ಉದ್ಘಾಟನಾ ಸೀಸನ್
    • ಉದ್ಘಾಟನಾ ಆವೃತ್ತಿಯ WPL 2023 ರ ನೇರ ಪ್ರಸಾರವು ಈ ಚಾನೆಲ್’ಗಳಲ್ಲಿ ಪ್ರಸಾರವಾಗಲಿದೆ
    • ಐದು ತಂಡಗಳು 23 ದಿನಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ
WPL 2023 LIVE: ಈ ಚಾನೆಲ್’ಗಳಲ್ಲಿ ಲೈವ್ ಆಗಿ ವೀಕ್ಷಿಸಿ ಮಹಿಳಾ ಪ್ರೀಮಿಯರ್ ಲೀಗ್ 2023: ಉಚಿತವಾಗಿಯೂ ನೋಡಬಹುದು! title=
Women's Premier League 2023

WPL 2023 LIVE Broadcast: ಮಹಿಳಾ ಪ್ರೀಮಿಯರ್ ಲೀಗ್‌’ನ ಉದ್ಘಾಟನಾ ಸೀಸನ್ ಮಾರ್ಚ್ 04 ರಂದು ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ ಬ್ಲಾಕ್‌ಬಸ್ಟರ್ ಪಂದ್ಯದೊಂದಿಗೆ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉದ್ಘಾಟನಾ ಆವೃತ್ತಿಯ WPL 2023 ರ ನೇರ ಪ್ರಸಾರವು ಈ ಚಾನೆಲ್’ಗಳಲ್ಲಿ ಪ್ರಸಾರವಾಗಲಿದೆ.

ಇದನ್ನೂ ಓದಿ: ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡ್ಬೇಕು, ನಾನು ಕೆಟ್ಟವನು ಸ್ವಾಮಿ : ಡಿ ಬಾಸ್ ಈ ರೀತಿ ಹೇಳಿದ್ಯಾಕೆ ?  

ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಜ್ ಐದು ತಂಡಗಳು 23 ದಿನಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಬಿಸಿಸಿಐ ಅದ್ಧೂರಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸುತ್ತಿದೆ ಎಂದು ವರದಿಯಾಗಿದೆ. ಇದರಲ್ಲಿ ಕೆಲವು ಪ್ರಸಿದ್ಧ ಭಾರತೀಯ ಸೆಲೆಬ್ರಿಟಿಗಳು ಕೂಡ ಭಾಗವಹಿಸಲಿದ್ದಾರೆ. ಉದ್ಘಾಟನಾ ಆವೃತ್ತಿಯು ಮಾರ್ಚ್ 4 ರಂದು ಪ್ರಾರಂಭವಾಗಲಿದ್ದು, ಗುಜರಾತ್ ಜೈಂಟ್ಸ್ ಮುಂಬೈ ಇಂಡಿಯನ್ಸ್ ಅನ್ನು ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಎದುರಿಸಲಿದೆ.

2023 ರ ಮಹಿಳಾ ಪ್ರೀಮಿಯರ್ ಲೀಗ್‌’ನ ಪ್ರಸಾರದ ಹಕ್ಕುಗಳನ್ನು Viacom 18 ಹೊಂದಿರುತ್ತದೆ. ಹೀಗಾಗಿ, ವೀಕ್ಷಕರು ದೂರದರ್ಶನದಲ್ಲಿ WPL 2023 ಹರಾಜನ್ನು ಲೈವ್ ಆಗಿ ವೀಕ್ಷಿಸಲು ಸ್ಪೋರ್ಟ್ಸ್ 18 ನೆಟ್‌ವರ್ಕ್ ಚಾನಲ್‌ಗಳಿಗೆ ಟ್ಯೂನ್ ಮಾಡಬಹುದು. WPL 2023 ಹರಾಜನ್ನು ಸ್ಪೋರ್ಟ್ಸ್ 18 1 SD/ 1 HD ಚಾನಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

  • WPL 2023 ಲೈವ್ ಸ್ಟ್ರೀಮಿಂಗ್ ವಿವರಗಳು:

ಲೈವ್ ಸ್ಟ್ರೀಮಿಂಗ್‌ಗಾಗಿ, JIO CINEMA ಹಕ್ಕುಗಳನ್ನು ಪಡೆದುಕೊಂಡಿದೆ ಮತ್ತು ಎಲ್ಲಾ ಪಂದ್ಯಗಳು ಅದರ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತವೆ.

  • WPL 2023 ಲೈವ್ ಸ್ಟ್ರೀಮಿಂಗ್ ಉಚಿತ: (ಸ್ಥಳ ಮತ್ತು ಬ್ರಾಡ್’ಕಾಸ್ಟರ್ ಪಟ್ಟಿ)

ಭಾರತ- ಸ್ಪೋರ್ಟ್ಸ್ 18, ಜಿಯೋ ಸಿನಿಮಾ

ಇದನ್ನೂ ಓದಿ:  ಅದಾನಿ ಹಿಂಡೆನ್‌ಬರ್ಗ್  ವಿವಾದ : ತನಿಖೆಗೆ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್ 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News