2 ವರ್ಷಗಳ ಬಳಿಕ ತಂಡಕ್ಕೆ ಮರಳಿದ 25 ಹರೆಯದ ಈ ಆಟಗಾರ ಇನ್ಮುಂದೆ ನಾಯಕ! ವಿಶ್ವಕಪ್’ಗೂ ಮುನ್ನ ಘೋಷಣೆ

Zak Crawley is New captain for England: ಈ ಸರಣಿಯ ಮೂಲಕ ಕ್ರಾಲಿ ತಂಡಕ್ಕೆ ಎರಡು ವರ್ಷಗಳ ಬಳಿಕ ಮರಳುತ್ತಿದ್ದಾರೆ. 25ರ ಹರೆಯದ ಕ್ರಾಲಿ 2021 ರಲ್ಲಿ ಏಕದಿನ ಸ್ವರೂಪದಲ್ಲಿ ತಮ್ಮ ಕೊನೆ ಪಂದ್ಯವನ್ನಾಡಿದ್ದರು

Written by - Bhavishya Shetty | Last Updated : Sep 9, 2023, 07:27 AM IST
    • ಏಕದಿನ ಸರಣಿಯಲ್ಲಿ ಝಾಕ್ ಕ್ರಾಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ
    • 25ರ ಹರೆಯದ ಕ್ರಾಲಿ 2021 ರಲ್ಲಿ ಏಕದಿನ ಸ್ವರೂಪದಲ್ಲಿ ತಮ್ಮ ಕೊನೆ ಪಂದ್ಯವನ್ನಾಡಿದ್ದರು.
    • ಈ ಸರಣಿಯ ಮೂಲಕ ಕ್ರಾಲಿ ತಂಡಕ್ಕೆ ಎರಡು ವರ್ಷಗಳ ಬಳಿಕ ಮರಳುತ್ತಿದ್ದಾರೆ
2 ವರ್ಷಗಳ ಬಳಿಕ ತಂಡಕ್ಕೆ ಮರಳಿದ 25 ಹರೆಯದ ಈ ಆಟಗಾರ ಇನ್ಮುಂದೆ ನಾಯಕ! ವಿಶ್ವಕಪ್’ಗೂ ಮುನ್ನ ಘೋಷಣೆ title=
Zak Crawley

Zak Crawley is New captain for England: ಐರ್ಲೆಂಡ್ ವಿರುದ್ಧ ತವರಿನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಝಾಕ್ ಕ್ರಾಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗುವ ಈ ಸರಣಿಯ ಮೂಲಕ ಕ್ರಾಲಿ ಹೊಸ ಪರ್ವ ಆರಂಭಿಸಲಿದ್ದಾರೆ. ಇನ್ನೊಂದೆಡೆ ಟೆಸ್ಟ್ ಆರಂಭಿಕ ಆಟಗಾರ ಬೆನ್ ಡಕೆಟ್ ಕೂಡ ಈ ತಂಡದ ಭಾಗವಾಗಿದ್ದಾರೆ, ಜೊತೆಗೆ ಉಪನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.

ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಧನಲಕ್ಷ್ಮೀ ಜೊತೆಗೂಡಿ ಶನಿದೇವ ಕರುಣಿಸುವ ಊಹೆಗೂ ಮೀರಿದ ಧನಸಂಪತ್ತು

ಈ ಸರಣಿಯ ಮೂಲಕ ಕ್ರಾಲಿ ತಂಡಕ್ಕೆ ಎರಡು ವರ್ಷಗಳ ಬಳಿಕ ಮರಳುತ್ತಿದ್ದಾರೆ. 25ರ ಹರೆಯದ ಕ್ರಾಲಿ 2021 ರಲ್ಲಿ ಏಕದಿನ ಸ್ವರೂಪದಲ್ಲಿ ತಮ್ಮ ಕೊನೆ ಪಂದ್ಯವನ್ನಾಡಿದ್ದರು. ಇನ್ನು ವಿಶೇಷವಾಗಿ ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಕ್ರಾಲಿ ಉತ್ತಮ ಪ್ರದರ್ಶನ ನೀಡಿರುವುದು ಗಮನಾರ್ಹ ಸಂಗತಿ.

ಇನ್ನು ಈ ತಂಡದಲ್ಲಿ ಸ್ಯಾಮ್ ಹೈನ್, ಜೇಮೀ ಸ್ಮಿತ್ ಮತ್ತು ಜಾರ್ಜ್ ಸ್ಕ್ರಿಮ್‌ ಶಾಗೆ ಅವಕಾಶ ನೀಡಲಾಗಿದ್ದು, ಇವರೆಲ್ಲರು ಅನ್ ಕ್ಯಾಪ್ಡ್ ಆಟಗಾರರು.

ಇಂಗ್ಲೆಂಡ್ ತಂಡ: ಝಾಕ್ ಕ್ರಾಲಿ (ನಾಯಕ), ರೆಹಾನ್ ಅಹ್ಮದ್, ಹ್ಯಾರಿ ಬ್ರೂಕ್, ಬ್ರೈಡನ್ ಕಾರ್ಸೆ, ಬೆನ್ ಡಕೆಟ್, ಸ್ಯಾಮ್ ಹೈನ್, ವಿಲ್ ಜ್ಯಾಕ್, ಕ್ರೇಗ್ ಓವರ್‌ಟನ್, ಮ್ಯಾಥ್ಯೂ ಪಾಟ್ಸ್, ಫಿಲ್ ಸಾಲ್ಟ್, ಜಾರ್ಜ್ ಸ್ಕ್ರಿಮ್‌ಶಾ, ಜೇಮೀ ಸ್ಮಿತ್, ಲ್ಯೂಕ್ ವುಡ್.

ಇದನ್ನೂ ಓದಿ: ಮುಂದಿನ 2 ವರ್ಷ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ: ಇನ್ಮುಂದೆ ತ್ವರಿತ ಯಶಸ್ಸು-ಅಗಾಧ ಸಂಪತ್ತು, ಕೈಹಿಡಿಯುವಳು ತಾಯಿ ಲಕ್ಷ್ಮೀ

ವೇಳಾಪಟ್ಟಿ:

1 ನೇ ODI: 20 ಸೆಪ್ಟೆಂಬರ್, ಹೆಡಿಂಗ್ಲಿ

2ನೇ ODI: 23 ಸೆಪ್ಟೆಂಬರ್, ಟ್ರೆಂಟ್ ಬ್ರಿಡ್ಜ್

3ನೇ ODI: 26 ಸೆಪ್ಟೆಂಬರ್, ಬ್ರಿಸ್ಟಲ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News