DCGI Nod For Vaccine Mix And Match: ಕರೋನಾ ವೈರಸ್ನ (Coronavirus) ಎರಡು ಲಸಿಕೆಗಳನ್ನು ಬೆರೆಸುವಲ್ಲಿ ಭಾರತ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಇದೀಗ ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ (DCGI) ಸಹ ಕೊವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಯ ಮಿಶ್ರಣವನ್ನು ಅಧ್ಯಯನ (Vaccine Mix And Match) ಮಾಡಲು ತನ್ನ ಅನುಮೋದನೆಯನ್ನು ನೀಡಿದೆ.
Vaccine Mixing And Matching - ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಸಂಶೋಧನೆಯು ಅಡೆನೊವೈರಸ್ ವೆಕ್ಟರ್ ಪ್ಲಾಟ್ಫಾರ್ಮ್ (Adenovirus Vector Platform) ಆಧರಿಸಿದ Covishield ಹಾಗೂ Covaxin ಲಸಿಕೆಗಳ ಮಿಶ್ರಣ ಮಾಡಿ ಪರಿಣಾಮಗಳನ್ನು ಗಮನಿಸಿದಾಗ ಅದು ಉತ್ತಮ ಫಲಿತಾಂಶಗಳನ್ನೂ ನೀಡಿದೆ.
ಮಾಡರ್ನಾ ಇಂಕ್ನ ಕೊರೊನಾ ಲಸಿಕೆಯನ್ನು ದೇಶದಲ್ಲಿ ವಿತರಿಸಲು ಭಾರತೀಯ ಔಷಧಿ ತಯಾರಕ ಸಿಪ್ಲಾ ಲಿಮಿಟೆಡ್ ನಿಯಂತ್ರಣ ಅನುಮೋದನೆ ಪಡೆದಿದೆ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುರೋಪಿಯನ್ ಯೂನಿಯನ್ ತನ್ನ 'ಗ್ರೀನ್ ಪಾಸ್ಪೋರ್ಟ್' ಯೋಜನೆಯಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ, ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡ ಭಾರತೀಯರಿಗೆ ಯುರೋಪಿಗೆ ಪ್ರಯಾಣಿಸಲು ಅವಕಾಶ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ ಭಾರತ 27 ರಾಷ್ಟ್ರಗಳ ಗುಂಪಿನ ಸದಸ್ಯರನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
Covishield Vaccine Updates - ಆಕ್ಸ್ಫರ್ಡ್-ಅಸ್ಟ್ರಾಜೆನೆಕಾ (Oxford-Astrazeneca Vaccine) ಲಸಿಕೆ Covishield ಎರಡು ಪ್ರಮಾಣಗಳ ನಡುವಿನ ಸಮಯದ ಅಂತರ 10 ತಿಂಗಳು ಇಟ್ಟುಕೊಂಡರೆ, ಕರೋನದ ವಿರುದ್ಧದ ಅದರ ಪ್ರತಿರಕ್ಷೆಯು ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. ಮೂರನೆಯ ಬೂಸ್ಟರ್ ಶಾಟ್ ಅನ್ನು ಕೂಡ ನೀಡಿದರೆ, ಅದು ಪ್ರತಿಕಾಯಗಳನ್ನು ಹೆಚ್ಚಿಸುವಲ್ಲಿ ಬಹಳ ಪರಿಣಾಮಕಾರಿ ಸಾಬೀತಾಗಲಿದೆ ಎಂದು ಅಧ್ಯಯನ ಹೇಳಿದೆ.
ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್ ಗಳ ನಡುವಿನ ಅಂತರವನ್ನು ಹೆಚ್ಚಿಸುವ ನಿರ್ಧಾರವು ವೈಜ್ಞಾನಿಕ ಮಾಹಿತಿಯ ಆಧಾರದ ಮೇಲೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಬುಧವಾರ ಟ್ವೀಟ್ ಮಾಡಿದ್ದಾರೆ.
Corona Booster Dose ಲಸಿಕೆಯ ಸೀಮಿತ ಸಮಯದ ಪರಿಣಾಮವನ್ನು ಗಮನದಲ್ಲಿಟ್ಟುಕೊಂಡು, ಪ್ರತಿ 6 ತಿಂಗಳಿಗೊಮ್ಮೆ ಕರೋನಾ ಲಸಿಕೆ ಪ್ರಮಾಣವನ್ನು ತೆಗೆದುಕೊಳ್ಳಬೇಕೇ ಎಂಬ ಚರ್ಚೆ ಇದೀಗ ವಿಶ್ವಾದ್ಯಂತ ವೇಗ ಪಡೆದುಕೊಂಡಿದೆ? ಈ ಬಗ್ಗೆ WHO ದೊಡ್ಡ ಹೇಳಿಕೆಯೊಂದನ್ನು ನೀಡಿದೆ.
ಸಂಶೋಧನೆಯ ಪ್ರಕಾರ, ಕೋವ್ಶೀಲ್ಡ್ (Covishield) ಮತ್ತು ಕೊವಾಕ್ಸಿನ್ ಎರಡೂ ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು (Good Immune Response) ಉತ್ತೇಜಿಸಿದವು, ಆದರೆ ಸೇರೋಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯಗಳು ಕೋವಿಶೀಲ್ಡ್ನಲ್ಲಿ ಹೆಚ್ಚಾಗಿದ್ದವು. ಅಂದರೆ, ಕೋವಿಶೀಲ್ಡ್ ಕೋವಾಕ್ಸಿನ್ (Covaxin) ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.
ಕೋವಿಶೀಲ್ಡ್ ಅನ್ನು ಒಂದೇ-ಶಾಟ್ಗೆ ಬದಲಾಯಿಸಲಾಗುವುದಿಲ್ಲ ಮತ್ತು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಲಸಿಕೆಗಳನ್ನು ಬೆರೆಸುವ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಸರ್ಕಾರ ಮಂಗಳವಾರ ಹೇಳಿದೆ.
ಕರೋನಾ ಲಸಿಕೆ ಕೊರತೆಯ ವರದಿಗಳ ಮಧ್ಯೆ 'ಸಿಂಗಲ್ ಶಾಟ್ ವ್ಯಾಕ್ಸಿನೇಷನ್' ಬಗ್ಗೆ ಇದೀಗ ಚರ್ಚೆ ನಡೆಯುತ್ತಿದೆ. ಕೋವಿಡ್ -19 ಲಸಿಕೆ ತಯಾರಿಸುವ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಲಸಿಕೆಯನ್ನು ಭವಿಷ್ಯದಲ್ಲಿ ಸಿಂಗಲ್ ಶಾಟ್ ಲಸಿಕೆಯಾಗಿ ತಯಾರಿಸಬಹುದು.
Covishield+Covaxin Cocktail - ಇದು ಖಂಡಿತವಾಗಿಯೂ ಒಂದು ತಪ್ಪು ಎಂದು ಸಿದ್ಧಾರ್ಥನಗರದ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಹೇಳಿದ್ದಾರೆ. ಲಸಿಕೆಗಳ ಕಾಕ್ಟೈಲ್ಗಳನ್ನು ನೀಡಲು ಸರ್ಕಾರದಿಂದ ಯಾವುದೇ ಸೂಚನೆಗಳಿಲ್ಲ. ನಾವು ತನಿಖೆಗೆ ಆದೇಶಿಸಿದ್ದೇವೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ. ತಪ್ಪಿತಸ್ಥರಿಂದ ನಾನು ಸ್ಪಷ್ಟನೆ ಕೋರಿದ್ದೇನೆ ಎಂದಿದ್ದಾರೆ.
Health Ministry Advisory - ಕೇಂದ್ರ ಆರೋಗ್ಯ ಸಚಿವಾಲಯ ಕೋವಿಶೀಲ್ಡ್ ಲಸಿಕೆ ಹಾಕಿಸಿಕೊಂಡ ಜನರಿಗೆ ಸಲಹೆಗಳನ್ನು ಜಾರಿಗೊಳಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಆರೋಗ್ಯ ಸಚಿವಾಲಯ ಒಂದು ವೇಳೆ ಲಸಿಕೆ ಹಾಕಿಸಿಕೊಂಡ 20 ದಿನಗಳವರೆಗೆ AEFI (Adverse Events Following Immunization)ದೂರು ಬಂದರೆ, ಲಸಿಕೆ ಹಾಕಿಸಿಕೊಂಡ ಕೇಂದ್ರಕ್ಕೆ ಸಂಪರ್ಕಿಸಲು ಸಲಹೆ ನೀಡಿದೆ.
ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ತನ್ನ ವ್ಯಾಕ್ಸಿನೇಷನ್ ಅಭಿಯಾನವನ್ನು ತೀವ್ರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ವಿದೇಶಗಳಿಂದಲೂ ಲಸಿಕೆಗಳನ್ನು ತರಿಸಿಕೊಳ್ಳಲಾಗುತ್ತಿದೆ.
Covishield Online Appointment: ಸರ್ಕಾರಿ ಸಮಿತಿಯ ಸಲಹೆಯ ಮೇರೆಗೆ ಕೋವಿಶೀಲ್ಡ್ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ.
Vaccination in India: ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಸಲಾಗುತ್ತಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಜ್ವರ, ನೋವುಗಳಂತಹ ಅಡ್ಡಪರಿಣಾಮಗಳು ಸಾಮಾನ್ಯವಾಗಿದ್ದರೂ ಕೂಡ ಹೊಸ ಲಸಿಕೆಯ ಪರಿಚಯದ ನಂತರ ಲಸಿಕೆಯ ಕುರಿತಾದ ಪ್ರಶ್ನೆಗಳು ಮತ್ತಷ್ಟು ಮಹತ್ವಪಡೆದುಕೊಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.