iPhone 14: ಈ ದಿನದಂದು ಬಿಡುಗಡೆಯಾಗಲಿದೆ Apple iPhone 14

ಆಪಲ್ 4 ಮಾದರಿಗಳನ್ನು ಹೊಂದಬಹುದಾದ ಹೊಸ ಐಫೋನ್ 14 ಶ್ರೇಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ನಂತರ 3 ಹೊಸ ಐಪ್ಯಾಡ್ ಮಾದರಿಗಳನ್ನು ಸಹ ತೋರಿಸುತ್ತದೆ.

Written by - Puttaraj K Alur | Last Updated : Aug 25, 2022, 08:22 AM IST
  • ಸೆಪ್ಟೆಂಬರ್‌ 7ರಂದು ನಡೆಯಲಿದೆ ಆಪಲ್ ಐಫೋನ್ 14 ಲಾಂಚ್ ಈವೆಂಟ್
  • ಒಟ್ಟು 4 ವಿವಿಧ ಮಾದರಿಗಳಲ್ಲಿ ಬಿಡುಗಡೆಯಾಗಲಿದೆ Apple iPhone 14
  • iPhone 14, iPhone 14 Max, iPhone Pro ಮತ್ತು iPhone 14 Pro Max ಬಿಡುಗಡೆಗೆ ಸಿದ್ಧ
iPhone 14: ಈ ದಿನದಂದು ಬಿಡುಗಡೆಯಾಗಲಿದೆ Apple iPhone 14 title=
Apple iPhone 14

ನವದೆಹಲಿ: Apple ಅಂತಿಮವಾಗಿ ಮುಂದಿನ ತಿಂಗಳು ಐಫೋನ್ 14 ಸರಣಿಯ ಬಿಡುಗಡೆ ದಿನಾಂಕ ಪ್ರಕಟಿಸಿದೆ. ಹಲವಾರು ವದಂತಿಗಳ ನಡುವೆಯೇ Apple ತನ್ನ ಮುಂದಿನ ಕಾರ್ಯಕ್ರಮವನ್ನು ಈ ವರ್ಷ ಸೆಪ್ಟೆಂಬರ್ 7ರಂದು ನಡೆಸಲಿದೆ. ಈ ಕುರಿತ ಅಧಿಕೃತ ಆಹ್ವಾನವು ಪತ್ರಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವರ್ಷ ಈವೆಂಟ್ ಅನ್ನು ಮತ್ತೊಮ್ಮೆ ವಾಸ್ತವಿಕವಾಗಿ ನಡೆಸಲಾಗುತ್ತಿದ್ದು, ಲೈವ್ ರೆಕಾರ್ಡಿಂಗ್ ಅನ್ನು ಪ್ರಸಿದ್ಧ ಆಪಲ್ ಪಾರ್ಕ್‌ನಲ್ಲಿ ಮಾಡಲಾಗುತ್ತದೆ. ಪ್ರತಿಯೊಬ್ಬರೂ Appleನ ಈವೆಂಟ್‌ಗಳ ಪುಟದಿಂದ ವಿಡಿಯೋವನ್ನು ಸ್ಟ್ರೀಮ್ ಮಾಡಲು ಅಥವಾ Appleನ YouTube ಪುಟಕ್ಕೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಮಾಧ್ಯಮ ಆಹ್ವಾನ  

‘ಫಾರ್ ಔಟ್’(For Out) ಎಂಬ ಸಂದೇಶದೊಂದಿಗೆ ಮಾಧ್ಯಮದ ಆಹ್ವಾನ ಹೊರಬಿದ್ದಿದೆ. ಇದು ಏನನ್ನೂ ಅರ್ಥೈಸುತ್ತದೆ..? ಅನ್ನೋದು ಯಾರಿಗೂ ತಿಳಿದಿಲ್ಲ. ಆದರೆ ಆಪಲ್ ಲೋಗೋದ ಸುತ್ತಲಿನ ಹೊಳಪು ಈವೆಂಟ್‌ನಲ್ಲಿ ಘೋಷಿಸಲಾಗುವ ಹೊಸ ಉತ್ಪನ್ನಗಳ ಸುಳಿವು ನೀಡುತ್ತದೆ. Apple iPhone 14 ಸರಣಿಯ ಬಿಡುಗಡೆ ಕಾರ್ಯಕ್ರಮವು ಭಾರತೀಯ ಕಾಲಮಾನ 10:30 PMಕ್ಕೆ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: 15,000 ರೂ. ಗೆ ಖರೀದಿಸಿ ಐಫೋನ್.! ಅವಕಾಶ ಕೈ ಬಿಟ್ಟರೆ ಮತ್ತೆ ಸಿಗದು.!

ಸೆಪ್ಟೆಂಬರ್‌ನಲ್ಲಿ ಆಪಲ್ ಐಫೋನ್ 14 ಲಾಂಚ್ ಈವೆಂಟ್

ಆಪಲ್ 4 ಮಾದರಿಗಳನ್ನು ಹೊಂದಬಹುದಾದ ಹೊಸ ಐಫೋನ್ 14 ಶ್ರೇಣಿಯನ್ನು ಅನಾವರಣಗೊಳಿಸುವ ನಿರೀಕ್ಷೆಯಿದೆ. ನಂತರ 3 ಹೊಸ ಐಪ್ಯಾಡ್ ಮಾದರಿಗಳನ್ನು ಸಹ ತೋರಿಸುತ್ತದೆ. ಇದೇ ವೇಳೆ ನೀವು ಹೊಸ ಆಪಲ್ ವಾಚ್ ಸರಣಿ 8 ನಿರೀಕ್ಷಿಸಬಹುದು. ಇದು ಈ ವರ್ಷ ಹೊಸ ಪ್ರೊ ರೂಪಾಂತರ ಹೊಂದಿರಲಿರುವ ಸಾಧ್ಯತೆಯಿದೆ.

ಐಫೋನ್ 14 ಸರಣಿಯಲ್ಲಿ 4 ಮಾದರಿಗಳು  

ಐಫೋನ್ 14 ಸರಣಿಯ ಜೊತೆಗೆ Apple 4 ಮಾದರಿಗಳನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. iPhone 14, iPhone 14 Max, iPhone Pro ಮತ್ತು iPhone 14 Pro Max. ವದಂತಿಗಳ ಪ್ರಕಾರ ಈ ವರ್ಷ iPhone 14 Pro ಮತ್ತು iPhone 14 Pro Max ಮಾತ್ರ ಹೊಸ Apple A16 ಬಯೋನಿಕ್ ಚಿಪ್ ಹೊಂದಿರಲಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಅತ್ಯಂತ ಕಡಿಮೆ ಬೆಲೆಗೆ 5G Smartphone ಹೊರ ತರುತ್ತಿದೆ ಜಿಯೋ .. ! ಬೆಲೆ ಕೇಳಿದರೆ ಖರೀದಿಸುವುದು ಗ್ಯಾರಂಟಿ

iPhone 14 A15 ಬಯೋನಿಕ್ ಚಿಪ್ ಹೊಂದಿರುತ್ತದೆ

ಮತ್ತೊಂದೆಡೆ Apple iPhone 14 ಮತ್ತು iPhone 14 Max ಕಳೆದ ವರ್ಷದಿಂದ Apple A15 ಬಯೋನಿಕ್ ಚಿಪ್‌ನ ಮಾರ್ಪಡಿಸಿದ ಆವೃತ್ತಿಯನ್ನು ಪಡೆಯುತ್ತವೆ ಎಂದು ಹೇಳಲಾಗುತ್ತಿದೆ. ಐಪ್ಯಾಡ್ ತಂಡವು ಹೊಸ M2-ಚಾಲಿತ ಐಪ್ಯಾಡ್ ಪ್ರೊ ಆವೃತ್ತಿಯನ್ನು ಮತ್ತು ಹೊಸ 10ನೇ ಐಪ್ಯಾಡ್ ಅನ್ನು ಒಳಗೊಂಡಿರುತ್ತದೆ, ಇದು ಈ ಸರಣಿಯಲ್ಲಿ ಅಗ್ಗವಾಗಿರಲಿದೆ. ವಿಳಂಬವಾಗಿರುವ iOS 16, watchOS 8 ಮತ್ತು iPadOS 16 ಆವೃತ್ತಿಗಳ ಕುರಿತು ಈವೆಂಟ್ ನಮಗೆ ಇನ್ನಷ್ಟು ಮಾಹಿತಿ ತಿಳಿಸಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News