ಪೊಲೀಸರು ನಿಮ್ಮ ವಾಹನ ತಡೆದು ನಿಲ್ಲಿಸಿದರೆ ಈ ನಾಲ್ಕು ಕೆಲಸ ಮಾಡಿ

Traffic rules : ಒಂದು ವೇಳೆ ನಿಮ್ಮ ವಾಹನವನ್ನು ಟ್ರಾಫಿಕ್ ಪೊಲೀಸರು ತಡೆದರೆ ನೀವು ಕಾಳಜಿ ವಹಿಸಬೇಕಾದ  ನಾಲ್ಕು ವಿಷಯಗಳಿವೆ. ಅವು ಯಾವುವು ಎಂದು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ. 

Written by - Ranjitha R K | Last Updated : Apr 18, 2023, 04:13 PM IST
  • ಎಲ್ಲಾ ರೀತಿಯ ವಾಹನಗಳಿಗೆ ಸಂಚಾರ ನಿಯಮಗಳಿವೆ
  • ಈ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು.
  • ನಿಯಮಗಳನ್ನು ಉಲ್ಲಂಘಿಸಿದರೆ ದಂಡವನ್ನು ತೆರಬೇಕಾಗುತ್ತದೆ.
ಪೊಲೀಸರು ನಿಮ್ಮ ವಾಹನ ತಡೆದು ನಿಲ್ಲಿಸಿದರೆ ಈ ನಾಲ್ಕು ಕೆಲಸ ಮಾಡಿ  title=

ಬೆಂಗಳೂರು :  ಕಾರು, ಬೈಕ್, ಸ್ಕೂಟರ್, ಕಾರು ಹೀಗೆ ಎಲ್ಲಾ ರೀತಿಯ ವಾಹನಗಳಿಗೆ  ಸಂಚಾರ ನಿಯಮಗಳನ್ನು ಮಾಡಲಾಗಿದೆ. ಈ ನಿಯಮಗಳನ್ನು ಎಲ್ಲರೂ ಅನುಸರಿಸಬೇಕು. ಸಂಚಾರ ನಿಯಮಗಳನ್ನು ಉಲ್ಲಂಘಿಸಿದರೆ ಸಂಚಾರಿ ಪೊಲೀಸರು ವಿಧಿಸುವ ದಂಡವನ್ನು ತೆರಬೇಕಾಗುತ್ತದೆ. ಅಷ್ಟೇ ಅಲ್ಲ, ಕಾನೂನು ಕ್ರಮ ಕೂಡಾ   ಕೈಗೊಳ್ಳಬಹುದು. ಒಂದು ವೇಳೆ ನಿಮ್ಮ ವಾಹನವನ್ನು ಟ್ರಾಫಿಕ್ ಪೊಲೀಸರು ತಡೆದರೆ ನೀವು ಕಾಳಜಿ ವಹಿಸಬೇಕಾದ  ನಾಲ್ಕು ವಿಷಯಗಳಿವೆ. ಅವು ಯಾವುವು ಎಂದು ತಿಳಿದುಕೊಳ್ಳಬೇಕಾದರೆ ಈ ಸ್ಟೋರಿ ಓದಿ. 
  
1. ಶಾಂತ ರೀತಿಯಲ್ಲಿ ವರ್ತಿಸಿ: 
ಟ್ರಾಫಿಕ್ ಪೋಲೀಸ್ ನಿಮ್ಮ ವಾಹನವನ್ನು ನಿಲ್ಲಿಸಲು ಕೇಳಿದರೆ, ತಕ್ಷಣವೇ ನಿಲ್ಲಿಸಿ. ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ನಿಮ್ಮ ಕಾರು, ಬೈಕ್ ಅಥವಾ ಸ್ಕೂಟರ್‌ನಲ್ಲಿಯೇ ಕುಳಿತುಕೊಳ್ಳುವುದಕ್ಕೆ ಅಡ್ಡಿಯಿಲ್ಲ. ಆದರೆ ವಾಹನದ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡಿ. ನಂತರ ಪೊಲೀಸ್ ಅಧಿಕಾರಿಯೊಂದಿಗೆ ಮಾತನಾಡಿ.

ಇದನ್ನೂ ಓದಿ : ಭಾರೀ ರಿಯಾಯಿತಿ ದರದಲ್ಲಿ iPhone 12! ಇಷ್ಟು ಕಡಿಮೆ ದರದಲ್ಲಿ ಇನ್ನು ಸಿಗುವುದಿಲ್ಲ ಈ ದುಬಾರಿ ಫೋನ್

2. ಸಭ್ಯತೆ  ಕಾಪಾಡಿಕೊಳ್ಳಿ : 
ಪೋಲೀಸರೂ ಮನುಷ್ಯರೇ ಎಂಬುದನ್ನು ಮರೆಯಬೇಡಿ. ಬಿಸಿಲು, ಮಳೆ, ಕೊರೆಯುವ ಚಳಿಯಲ್ಲೂ ರಸ್ತೆಯಲ್ಲಿ ನಿಂತು ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅದನ್ನು ಗೌರವಿಸಿ ಸೌಜನ್ಯದಿಂದ ವ್ಯವಹರಿಸಿ. ನೀವು ಸೌಜನ್ಯದಿಂದ ವರ್ತಿಸಿದರೆ ನೀವು ನಿಯಮ ಉಲ್ಲಂಘಿಸಿದ ನಂತರವೂ  ಕೇವಲ ಎಚ್ಚರಿಕೆ ನೀಡುವ ಮೂಲಕ ನಿಮ್ಮನ್ನು ಹೋಗಲು ಬಿಡುವ ಸಾಧ್ಯತೆಯಿದೆ.

3. ಪ್ಯಾನಿಕ್ ಆಗಬೇಡಿ  :
ಒಮ್ಮೊಮ್ಮೆ ನಿಮಗೆ ಗೊತ್ತಿಲ್ಲದೇ ನಿಯಮ ಮೀರುವ ಸಂದರ್ಭ ಎದುರಾಗುತ್ತದೆ. ಹೀಗಾದಾಗ ಉದ್ದೇಶಪೂರ್ವಕವಾಗಿ  ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿಲ್ಲ, ತಿಳಿಯದೆ  ತಪ್ಪಾಗಿದೆ ಎನ್ನುವುದನ್ನು ಪೊಲೀಸ್ ಅಧಿಕಾರಿಗೆ ವಿವರಿಸಲು ಪ್ರಯತ್ನಿಸಿ. ನಿಜವಾಗಿ ಏನಾಯಿತು ಎನ್ನುವುದನ್ನು ತಿಳಿಸಿ ಹೇಳಿ. ನಿಮ್ಮಿಂದ ಆದ ತಪ್ಪಿಗೆ ಕ್ಷಮೆ ಯಾಚಿಸಿ. 

ಇದನ್ನೂ ಓದಿ : ಏನಿದು TruthGPT? ಇದಕ್ಕೆ ಚಾಲನೆ ನೀಡುವುದಾಗಿ ಎಲೋನ್ ಮಾಸ್ಕ್ ಹೇಳಿದ್ದೇಕೆ?

4. ನಿಯಮಗಳನ್ನು ಗೌರವಿಸಿ : 
ನಿಯಮವನ್ನು ರೂಪಿಸಿದ ಮೇಲೆ ಪ್ರತಿಯೊಬ್ಬರೂ ಆ ನಿಯಮವನ್ನು ಅನುಸರಿಸಬೇಕು. ನಿಯಮಗಳು ಎಲ್ಲರಿಗೂ ಸಮಾನವಾಗಿರುತ್ತದೆ. ಈ ದೃಷ್ಟಿಕೋನದಿಂದ, ಪೊಲೀಸರು ಏನು ಹೇಳುತ್ತಾರೆಂದು ಅರ್ಥಮಾಡಿಕೊಳ್ಳಿ. ಅವರು ಒಂದು ವೇಳೆ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನೀವು ಭಾವಿಸಿದರೆ, ನಿಮ್ಮ ವಿಷಯವನ್ನು ಅವರಿಗೆ ಆರಾಮವಾಗಿ ವಿವರಿಸಿ ಹೇಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News