ಕೇವಲ 100 ರೂಪಾಯಿ ಖರ್ಚು ಮಾಡಿದರೆ ಹಳೆ smartphoneಗೆ ಸಿಗುತ್ತದೆ Brand new look

 Smartphone Tips and Tricks: ಫೋನ್ ಹಳತಾಯಿತು ಎಂದ ಕೂಡಲೇ ಬದಲಾಯಿಸಿಕೊಳ್ಳುವುದು ಕೂಡಾ ಸುಲಭವಲ್ಲ. ಸ್ಮಾರ್ಟ್‌ಫೋನ್ ಸ್ವಲ್ಪ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತಿದ್ದರೆ ಕೇವಲ  100 ರೂಪಾಯಿ ಖರ್ಚು ಮಾಡಿ ಹಳೇ ಫೋನ್ ಅನ್ನು ಹೊಸತರಂತೆ ಮಾಡಿಕೊಳ್ಳಬಹುದು.    

Written by - Ranjitha R K | Last Updated : Apr 1, 2022, 04:18 PM IST
  • ಸ್ಮಾರ್ಟ್ ಫೋನ್ ಹಳೆಯದಾಗಿದೆಯೇ ?
  • 100 ರೂ. ವೆಚ್ಚ ಮಾಡಿದರೆ ಹೊಸತರಂತಾಗುತ್ತದೆ ಸ್ಮಾರ್ಟ್ ಫೋನ್
  • ತುಂಬಾ ಸುಲಭವಾದ ತಂತ್ರವನ್ನು ಇಲ್ಲಿ ಕಲಿಯಿರಿ
ಕೇವಲ 100 ರೂಪಾಯಿ ಖರ್ಚು ಮಾಡಿದರೆ ಹಳೆ smartphoneಗೆ ಸಿಗುತ್ತದೆ Brand new look  title=
Smartphone Tricks (file photo)

ನವದೆಹಲಿ : ಸ್ಮಾರ್ಟ್ ಫೋನ್ ಖರೀದಿಸುವುದು ಸುಲಭದ ಮಾತಲ್ಲ. ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಗೆ ದುಬಾರಿ ಹಣ ನೀಡಬೇಕಾಗುತ್ತದೆ (Smartphone tricks). ಹಾಗಾಗಿ ಫೋನ್ ಹಳತಾಯಿತು ಎಂದ ಕೂಡಲೇ ಬದಲಾಯಿಸಿಕೊಳ್ಳುವುದು ಕೂಡಾ ಸುಲಭವಲ್ಲ. ಸ್ಮಾರ್ಟ್‌ಫೋನ್ ಸ್ವಲ್ಪ ಹಳೆಯದಾಗಿ ಕಾಣಲು ಪ್ರಾರಂಭಿಸುತ್ತಿದ್ದರೆ ಕೇವಲ  100 ರೂಪಾಯಿ ಖರ್ಚು ಮಾಡಿ ಹಳೇ ಫೋನ್ ಅನ್ನು ಹೊಸತರಂತೆ ಮಾಡಿಕೊಳ್ಳಬಹುದು. 

 100 ರೂಪಾಯಿ ವೆಚ್ಚ ಮಾಡಿದರೆ ಹೊಸತರಂತಾಗುತ್ತದೆ ಸ್ಮಾರ್ಟ್ ಫೋನ್ :
100 ರೂಪಾಯಿಗಳಲ್ಲಿ ನಿಮ್ಮ ಸ್ಮಾರ್ಟ್‌ಫೋನ್ (Smartphone) ಅನ್ನು ಹೇಗೆ ಹೊಸದರಂತೆ ಮಾಡಬಹುದು ಎಂದು ಆಶ್ಚರ್ಯವಾಗಬಹುದು.  ವಾಸ್ತವವಾಗಿ, ಸ್ಮಾರ್ಟ್‌ಫೋನ್ ಸ್ಕಿನ್' (Smartphone Skin) ಅನ್ನು ಬಳಸುವುದರಿಂದ ಫೋನ್ ಗೆ ಹೊಚ್ಚ ಹೊಸ ಲುಕ್ ನೀಡಬಹುದು. 

ಇದನ್ನೂ ಓದಿ : Flipkart Sale: ನೋಕಿಯಾದ ₹18,000 ಟ್ಯಾಬ್ಲೆಟ್ ಅನ್ನು ₹799 ಕ್ಕೆ ಖರೀದಿಸಲು ಇಂದೇ ಕೊನೆ ದಿನ

ಏನಿದು 'ಸ್ಮಾರ್ಟ್‌ಫೋನ್ ಸ್ಕಿನ್' ?
ಈ 'ಸ್ಮಾರ್ಟ್‌ಫೋನ್ ಸ್ಕಿನ್' ಎಂದರೆ, ವಿಶೇಷ ರೀತಿಯ ಚರ್ಮ. ಅದನ್ನು  ಫೋನ್‌ನಲ್ಲಿ ಸುಲಭವಾಗಿ ಅಂಟಿಸಬಹುದು. ಇದರ ಬೆಲೆ 100 ರೂ ಯಿಂದ 200 ರ ನಡುವೆ ಇರುತ್ತದೆ.  ಹತ್ತಿರದ ಮೊಬೈಲ್ ರಿಪೇರಿ ಅಂಗಡಿಯಲ್ಲಿ ಇದನ್ನೂ ನಿಮ್ಮ ಫೋನ್ ಗೆ ಸುಲಭವಾಗಿ ಹಾಕಬಹುದು. 

ಅದರ ಪ್ರಯೋಜನಗಳೇನು ?
ಇದು ನಿಮ್ಮ ಸ್ಮಾರ್ಟ್‌ಫೋನ್‌ನ ನೋಟ ಮತ್ತು ವಿನ್ಯಾಸವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ಅದೇ ಸಮಯದಲ್ಲಿ, ಇದು ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಧೂಳು, ಕೊಳಕು ಮತ್ತು ನೀರಿನ ಹನಿಗಳಿಂದ ರಕ್ಷಿಸುತ್ತದೆ. ಇದರ ಪ್ರಮುಖ ವಿಶೇಷತೆಯೆಂದರೆ, ಈ ಸ್ಮಾರ್ಟ್‌ಫೋನ್ ಸ್ಕಿನ್ ತಾನಾಗಿಯೇ ಹೊರಬರುವುದಿಲ್ಲ (Use of smartphone skin). ಅದನ್ನು ನೀವೇ ತೆಗೆದುಹಾಕುವವರೆಗೆ ಅದು ಫೋನ್‌ನಲ್ಲಿ ಅಂಟಿಕೊಂಡಿರುತ್ತದೆ. 

ಈ ರೀತಿಯಾಗಿ, ನಿಮ್ಮ ಸ್ಮಾರ್ಟ್‌ಫೋನ್ ಅನ್ನು  ಅತ್ಯಂತ ಕಡಿಮೆ ವೆಚ್ಚದಲ್ಲಿ ಸಂಪೂರ್ಣವಾಗಿ ಹೊಸತಾಗಿ ಮಾಡಬಹುದು.

ಇದನ್ನೂ ಓದಿ : Snow Volcano: ಐಸ್‌ ಉಗುಳುವ ಜ್ವಾಲಾಮುಖಿ..! ಇದು ಸೌರಮಂಡಲದ ಅಚ್ಚರಿ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News