Samsung Galaxy A32 ಅಗ್ಗದ 5G Smartphone..! ಇಷ್ಟೇ ಇದರ ಬೆಲೆ..!

ಸ್ಯಾಮ್‌ಸಂಗ್ ತನ್ನ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೊಂದು ಅಗ್ಗದ 5G ಸ್ಮಾರ್ಟ್ಫೋನ್ ಎಂದು ಕಂಪನಿ ಹೇಳಿಕೊಂಡಿದೆ. 

Written by - Ranjitha R K | Last Updated : Feb 10, 2021, 04:02 PM IST
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಸ್ಮಾರ್ಟ್‌ಫೋನ್ ಬಿಡುಗಡೆ
  • ಇದೊಂದು ಅಗ್ಗದ 5 ಜಿ ಸ್ಮಾರ್ಟ್ ಫೋನ್ ಎಂದು ಹೇಳಿರುವ ಕಂಪನಿ
  • ಸದ್ಯಕ್ಕೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿರುವ ಸ್ಯಾಮ್ ಸಂಗ್
Samsung Galaxy A32 ಅಗ್ಗದ 5G Smartphone..! ಇಷ್ಟೇ ಇದರ ಬೆಲೆ..! title=
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಸ್ಮಾರ್ಟ್‌ಫೋನ್ ಬಿಡುಗಡೆ (file photo)

ನವದೆಹಲಿ : ಈ ವರ್ಷದ ಆರಂಭದಿಂದಲೂ, ಅನೇಕ ಮೊಬೈಲ್ ಕಂಪನಿಗಳು 5 ಜಿ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಈ ಮಧ್ಯೆ, ಸ್ಯಾಮ್‌ಸಂಗ್ ತನ್ನ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದೊಂದು ಅಗ್ಗದ 5 ಜಿ ಸ್ಮಾರ್ಟ್ಫೋನ್ ಎಂದು ಕಂಪನಿ ಹೇಳಿಕೊಂಡಿದೆ. 

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 32 ಬೆಲೆ : 
ಈ ಹೊಸ ಸ್ಮಾರ್ಟ್‌ಫೋನ್ ಅನ್ನು ಯುರೋಪಿಯನ್ ಮಾರುಕಟ್ಟೆಯಲ್ಲಿ (market) ಬಿಡುಗಡೆ ಮಾಡಲಾಗಿದೆ. ಸ್ಮಾರ್ಟ್‌ಫೋನ್‌ನ (Smartphone) 64 ಜಿಬಿ ವೆರಿಯಂಟ್ ನ ಬೆಲೆ 279 ಯುರೋಗಳು , ಅಂದರೆ ಸುಮಾರು 24,600 ರೂಪಾಯಿಗಳು. ಆದರೆ, ಸ್ಮಾರ್ಟ್‌ಫೋನ್‌ನ 128 ಜಿಬಿ ಸ್ಟೋರೇಜ್ ವೆರಿಯಂಟ್ ನ ಬೆಲೆ ಎಷ್ಟು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ.  ಸ್ಮಾರ್ಟ್ ಫೋನ್ ಕಪ್ಪು, ಬಿಳಿ, ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ : ಟ್ವಿಟರ್‌ಗೆ ಟಕ್ಕರ್ ನೀಡುತ್ತಿರುವ ಸ್ವದೇಶೀ Koo App

ಈ ಸ್ಮಾರ್ಟ್‌ಫೋನ್ MediaTek Dimensity 720 ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್ (Smartphone) ಅನ್ನು ಭಾರತ ಮತ್ತು ಇತರ ದೇಶಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಸ್ಯಾಮ್‌ಸಂಗ್ ಇನ್ನೂ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸ್ಮಾರ್ಟ್ಫೋನ್ 5000mAh ಬ್ಯಾಟರಿ, 48 MP ಕ್ವಾಡ್ ರಿಯರ್ ಕ್ಯಾಮೆರಾ (Camera) ಸೆಟಪ್ ಮತ್ತು ಆಂಡ್ರಾಯ್ಡ್ 11 ಅನ್ನು ಒಳಗೊಂಡಿದೆ.

ಈ ಸ್ಯಾಮ್‌ಸಂಗ್ (Samsung) ಸ್ಮಾರ್ಟ್‌ಫೋನ್ 6.5-ಇಂಚಿನ HD+ TFT ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು Infinity-V ವಿನ್ಯಾಸವನ್ನು ಹೊಂದಿದ್ದು, MediaTek Dimensity 720 SoC ಯೊಂದಿಗೆ ಬರುತ್ತದ. ಇದು octa-core CPU ಹೊಂದಿದೆ. ಫೋನ್ 4GB RAM + 64GB ಮತ್ತು 4GB RAM + 128GB ಎಂಬ ವೆರಿಯೆಂಟ್ ನಲ್ಲಿ ಲಭ್ಯವಿರಲಿದೆ.  ಇದರ ಸ್ಟೋರೇಜನ್ನು ಮೈಕ್ರೊ ಎಸ್ಡಿ ಕಾರ್ಡ್ ಸಹಾಯದಿಂದ 1 ಟಿಬಿಗೆ ಹೆಚ್ಚಿಸಬಹುದು.

ಇದನ್ನೂ ಓದಿ : Good news..! ಭಾರತದಲ್ಲಿ ಶೀಘ್ರವೇ ಬರಲಿದೆ 5G ಸೇವೆ..!

ಸ್ಮಾರ್ಟ್ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ, ಇದರ ಮುಖ್ಯ ಕ್ಯಾಮೆರಾ 48 MP. ಇದಲ್ಲದೆ, ಇದು 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್, 5 ಮೆಗಾಪಿಕ್ಸೆಲ್ ಮ್ಯಾಕ್ರೋ ಶೂಟರ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಕಂಪನಿಯು ಮುಂಭಾಗದಲ್ಲಿ 13 ಎಂಪಿ ಲೆನ್ಸ್ ಪಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News