ಏರ್‌ಪ್ಲೇನ್ ಮೂಡ್‌ನಲ್ಲಿ ಇಂಟರ್ನೇಟ್‌ ಬಳಸಲು ಈ ಟ್ರೀಕ್‌ ಫಾಲೋ ಮಾಡಿ..

Internet in Airplane Mode: ಏರ್‌ಪ್ಲೇನ್ ಮೋಡ್‌ನಲ್ಲಿ ಇಂಟರ್ನೆಟ್ ಬಳಸುವುದಕ್ಕೆ ಇಷ್ಟ ಪಟ್ಟರೆ ತಪ್ಪದೆ ಈ ಲೇಖನವನ್ನು ಕೊನೆಯ ತನಕ ಓದಲು ಮರೆಯಬೇಡಿ.

Written by - Zee Kannada News Desk | Last Updated : Jan 5, 2024, 11:50 AM IST
  • ಏರ್‌ಪ್ಲೇನ್ ಮೋಡ್‌ನಲ್ಲಿಯೂ ಇಂಟರ್ನೆಟ್‌ಗಳನ್ನು ಬಳಸಬಹುದು.
  • ಸ್ಮಾರ್ಟ್‌ಫೋನ್‌ನಲ್ಲಿ Google Play Store ಗೆ ಹೋಗಿ Force LTE Only (4G/5G) ಎಂದು ಟೈಪ್ ಮಾಡಿಕೊಳ್ಳಬೇಕು.
  • ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಸಕ್ರಿಯಗೊಳಿಸಿ .
ಏರ್‌ಪ್ಲೇನ್ ಮೂಡ್‌ನಲ್ಲಿ ಇಂಟರ್ನೇಟ್‌ ಬಳಸಲು ಈ ಟ್ರೀಕ್‌ ಫಾಲೋ ಮಾಡಿ.. title=

Internet in Airplane Mode: ಫ್ಲೈಟ್ ಮೋಡ್‌ನಲ್ಲಿರುವಾಗ  ಫೋನ್‌ನ ಇಂಟರ್ನೆಟ್ ಹೇಗೆ ಬಳಸುವುದು ಎಂದು ಯೋಚಿಸುತ್ತಿದ್ದಿರಾ..? ಚಿಂತೆ ಬೇಡ, ನಿಮಗಾಗಿ ಇಲ್ಲಿವೆ ಮಾಹಿತಿ. ಏರ್‌ಪ್ಲೇನ್ ಮೋಡ್‌ನಲ್ಲಿ  ಇದರುವಾಗ ಫೋನ್‌ನ ಇಂಟರ್ನೆಟ್ ಅನ್ನು ಹೇಗೆ ಬಳಸುವುದು ಎಂದು ಇಲ್ಲಿ ತಿಳಿಯಿರಿ. ಇಷ್ಟೇ ಅಲ್ಲ, ಯೂಟ್ಯೂಬ್-ಇನ್‌ಸ್ಟಾಗ್ರಾಮ್ ಎಲ್ಲವನ್ನೂ ಡೇಟಾ ಬಳಸಿ ವೀಕ್ಷಿಸಬಹುದು.

ಏರ್‌ಪ್ಲೇನ್ ಮೋಡ್‌ನಲ್ಲಿ ಇಂಟರ್ನೆಟ್ ಬಳಸುವುದಕ್ಕೆ ಇಷ್ಟ ಪಟ್ಟರೆ ತಪ್ಪದೆ ಈ ಲೇಖನವನ್ನು ಕೊನೆಯ ತನಕ ಓದಲು ಮರೆಯಬೇಡಿ. ಹಲವು ಬಾರಿ ಸ್ಮಾರ್ಟ್‌ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇಡುವುದು ಕಡ್ಡಾಯವಾಗಿರುತ್ತದೆ ಅಥವಾ ಅನಿರ್ವಾವೇ ಆಗಿರುತ್ತದೆ. ಆದರೆ ಫೋನ್ ಅನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿದ ನಂತರ, ಬಹುತೇಕ ಎಲ್ಲಾ ಕೆಲಸಗಳು ನಿಂತು ಹೋಗುತ್ತದೆ. ಸಾಮನ್ಯವಾಗಿ,  YouTube ನಲ್ಲಿ ಹಾಡುಗಳನ್ನು ಕೇಳಲು ಸಾಧ್ಯವಿಲ್ಲ, Instagram ಮೂಲಕ ಸ್ಕ್ರಾಲ್ ಮಾಡಲು ಅಥವಾ ಆನ್‌ಲೈನ್ ಶಾಪಿಂಗ್ ಮಾಡಲು ಸಹ ಸಾಧ್ಯವಿಲ್ಲ. ಆದ್ದರಿಂದ ನೀವು ಈಗ ಇಂತಹ ಸಮಸ್ಯೆಯನ್ನು ಇನ್ನೂ ಎದುರಿಸಬೇಕಾಗಿಲ್ಲ, ನಾವು ನಿಮಗೆ ಒಂದು ಉಪಯುಕ್ತ ಅಪ್ಲಿಕೇಶನ್ ಬಗ್ಗೆ ಹೇಳುತ್ತೇವೆ, ಅದರ ಮೂಲಕ ನೀವು ಏರ್‌ಪ್ಲೇನ್ ಮೋಡ್‌ನಲ್ಲಿಯೂ ಫೋನ್‌ನಲ್ಲಿ ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: ಸ್ಮಾರ್ಟ್ ಫೋನ್ ನಲ್ಲಿ ಇಂಟರ್ನೆಟ್ ವೇಗ ಕಡಿಮೆಯಾಗಿದೆಯೇ? ಈ ಟ್ರಿಕ್ಸ್ ಟ್ರೈ ಮಾಡಿ ನೋಡಿ!

ಫೋರ್ಸ್ LTE ಮಾತ್ರ (4G/5G)

* ಇದಕ್ಕಾಗಿ ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ Google Play Store ಗೆ ಹೋಗಿ  Force LTE Only (4G/5G) ಎಂದು ಟೈಪ್ ಮಾಡಿಕೊಳ್ಳಬೇಕು.
* ಇದಾದ ನಂತರ, ಅಪ್ಲಿಕೇಶನ್ ಅನ್ನು ನಿಮಗೆ ಇಲ್ಲಿ ತೋರಿಸಲಾಗುತ್ತದೆ, ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಿ.
* ನಂತರ ಆ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿದ ನಂತರ ನಿಮಗೆ 4 ಆಯ್ಕೆಗಳನ್ನು ತೋರಿಸಲಾಗುತ್ತದೆ, ಅದರಲ್ಲಿ ಎರಡನೇ ಆಯ್ಕೆಯನ್ನು ಕ್ಲಿಕ್ ಮಾಡಿ - METHOD2:(ANDROID 11+).
* ಇದರ ನಂತರ ಫೋನ್ ಮಾಹಿತಿಗೆ ಹೋಗಿ, ಇಲ್ಲಿ ಮೊಬೈಲ್ ರೇಡಿಯೊ ಪವರ್ ಆಯ್ಕೆಯನ್ನು ತೋರಿಸಲಾಗುತ್ತದೆ.
* ಮೊಬೈಲ್ ರೇಡಿಯೋ ಪವರ್ ಆಯ್ಕೆಯನ್ನು ಸಕ್ರಿಯಗೊಳಿಸಿ ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್ ಅನ್ನು ಆನ್ ಮಾಡಿ.

ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅಪ್ಪಿ‌ ತಪ್ಪಿಯೂ ಈ ಕೆಲಸ ಮಾಡಬೇಡಿ, ಜೈಲು ಸೇರಬೇಕಾದೀತು!

ಈ ಪ್ರಕ್ರಿಯೆಯನ್ನು ಅನುಸರಿಸಿದ ನಂತರ, ಡೇಟಾವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಏರ್‌ಪ್ಲೇನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಅಂದರೆ ಈಗ ನೀವು ನಿಮ್ಮ ಫೋನ್‌ನಲ್ಲಿರುವ ಎಲ್ಲಾ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ. ಇವಿಷ್ಟು ಅಪ್ಲಿಕೇಶನ್‌ನ ಪ್ರಯೋಜನಗಳಾಗಿವೆ.

ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 4.4 ರೇಟಿಂಗ್ ಅನ್ನು ಪಡೆದುಕೊಂಡಿದ್ದು  ಇಲ್ಲಿಯವರೆಗೆ 10 ಮಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಇದನ್ನು ಡೌನ್‌ಲೋಡ್ ಮಾಡಿದ್ದಾರೆ. ನೆಟ್‌ವರ್ಕ್ ಅನ್ನು 4G/3G/2G ಗೆ ಬದಲಾಯಿಸಲು ಮತ್ತು ಆಯ್ಕೆಮಾಡಿದ ನೆಟ್‌ವರ್ಕ್‌ನಲ್ಲಿ ಉಳಿಯಲು ಈ ಅಪ್ಲಿಕೇಶನ್ ನಿಮಗೆ ಸಹಾಯ ಮಾಡುತ್ತದೆ.

ಇದನ್ನೂ ಓದಿ:  Mobile Data Speed Trick: ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೊಡ ಇಂಟರ್ನೆಟ್ ವೇಗ ಕಡಿಮೆ ಇದೆಯೇ, ಈ ರೀತಿ ಹೆಚ್ಚಿಸಿ

Force LTE ಅಪ್ಲಿಕೇಶನ್ ಪ್ರತಿ ಸ್ಮಾರ್ಟ್‌ಫೋನ್ ಅನ್ನು ಬೆಂಬಲಿಸುವುದಿಲ್ಲ ಎಂಬುದನ್ನು ಗಮನಿಸಿ. ಇದು ನಿಮ್ಮ ಸ್ಮಾರ್ಟ್ಫೋನ್ ಯಾವ ಬ್ರಾಂಡ್ ಅನ್ನು ಅವಲಂಬಿಸಿರುತ್ತದೆ. ವಾಸ್ತವವಾಗಿ, ಕೆಲವು ಸ್ಮಾರ್ಟ್‌ಫೋನ್ ಬ್ರಾಂಡ್‌ಗಳು ತಮ್ಮ ಸಾಧನಗಳಲ್ಲಿ ನೆಟ್‌ವರ್ಕ್‌ಗಳನ್ನು ಬದಲಾಯಿಸುವ ಆಯ್ಕೆಯನ್ನು ಮುಚ್ಚಿರುತ್ತವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News