ಹುಂಡೈ ಕ್ರೆಟಾಗೆ ಭಾರೀ ಪೈಪೋಟಿ ನೀಡಲು ರೋಡಿಗಿಳಿಯುತ್ತಿದೆ ಈ SUV

Kia Seltos Facelift:ಹ್ಯುಂಡೈ ಕ್ರೆಟಾದಲ್ಲಿ ಲಭ್ಯವಿಲ್ಲದ ಅನೇಕ ವೈಶಿಷ್ಟ್ಯಗಳನ್ನು ಸೆಲ್ಟೋಸ್‌ನ ಫೇಸ್‌ಲಿಫ್ಟ್ ಮಾಡೆಲ್  ನಲ್ಲಿ ನೀಡುವುದರಿಂದ  ಅತಿ ಹೆಚ್ಚು ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿದೆ. 

Written by - Ranjitha R K | Last Updated : Jan 19, 2023, 11:45 AM IST
  • ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಎರಡು ವಾಹನಗಳ ನಡುವೆ ಇದೆ ಪೈಪೋಟಿ
  • ಅವುಗಳೆಂದರೆ ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್
  • ಕ್ರೆಟಾ ಮಾರಾಟದ ವಿಷಯದಲ್ಲಿ ಮುಂಚೂಣಿಯಲ್ಲಿದೆ.
ಹುಂಡೈ ಕ್ರೆಟಾಗೆ ಭಾರೀ ಪೈಪೋಟಿ ನೀಡಲು ರೋಡಿಗಿಳಿಯುತ್ತಿದೆ  ಈ SUV title=

Kia Seltos Facelift : ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಎರಡು ವಾಹನಗಳ ನಡುವೆ ಪೈಪೋಟಿ ಇದೆ. ಅವುಗಳೆಂದರೆ ಹುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೋಸ್. ಸಾಮಾನ್ಯವಾಗಿ, ಕ್ರೆಟಾ ಮಾರಾಟದ ವಿಷಯದಲ್ಲಿ ಮುಂಚೂಣಿಯಲ್ಲಿದೆ. ಸೆಲ್ಟೋಸ್ ಕೂಡಾ ಕ್ರೆಟಾಗೆ ಉತ್ತಮ ಸ್ಪರ್ಧೆ ನೀಡುತ್ತಿದೆ. ಅಂದರೆ, ಕಾಂಪ್ಯಾಕ್ಟ್ SUV ವಿಭಾಗದಲ್ಲಿ, ಕ್ರೆಟಾ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾರು.   ಮಾರಾಟದ ವಿಚಾರದಲ್ಲಿ ಎರಡನೇ ಸ್ಥಾನ ಸೆಲ್ಟೋಸ್ ಗೆ ಸಲ್ಲುತ್ತದೆ. ಇದೀಗ  ಎರಡೂ ಕಾರುಗಳ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆಯಾಗಲಿದೆ.  ಆದರೆ ಇಲ್ಲಿ ಸೆಲ್ಟೋಸ್‌ನ ಫೇಸ್‌ಲಿಫ್ಟ್ ಮಾಡೆಲ್ ಅನ್ನು ಮೊದಲು ಬಿಡುಗಡೆ ಮಾಡಬಹುದು ಎನ್ನಲಾಗಿದೆ. ಹ್ಯುಂಡೈ ಕ್ರೆಟಾದಲ್ಲಿ ಲಭ್ಯವಿಲ್ಲದ ಅನೇಕ ವೈಶಿಷ್ಟ್ಯಗಳನ್ನು ಸೆಲ್ಟೋಸ್‌ನ ಫೇಸ್‌ಲಿಫ್ಟ್ ಮಾಡೆಲ್ ನಲ್ಲಿ ನೀಡುವುದರಿಂದ ಅತಿ ಹೆಚ್ಚು ಮಾರಾಟವಾಗಬಹುದು ಎಂದು ನಿರೀಕ್ಷಿಸಲಾಗಿದೆ. 

ವರದಿಗಳ ಪ್ರಕಾರ, ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ ಅನ್ನು ಈ ವರ್ಷದ ಏಪ್ರಿಲ್‌ನಲ್ಲಿ ಬಿಡುಗಡೆ ಮಾಡಬಹುದು. ಆದರೆ, ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಬಿಡುಗಡೆಯನ್ನು ಮುಂದಿನ ವರ್ಷಕ್ಕೆ ಮುಂದೂಡಿದೆ. ಕಿಯಾ ಸೆಲ್ಟೋಸ್‌ನ ಫೇಸ್‌ಲಿಫ್ಟ್ ಮಾದರಿಯು ಯುಎಸ್ ಮತ್ತು ದಕ್ಷಿಣ ಕೊರಿಯಾ ಮಾರುಕಟ್ಟೆಗಳಲ್ಲಿ ಈಗಾಗಲೇ ಲಭ್ಯವಿದೆ. ಭಾರತಕ್ಕೆ ಅನುಗುಣವಾಗಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಇಲ್ಲಿನ ಮಾರುಕಟ್ಟೆಗೆ ಬಿಡುಗಡೆ ಮಾಡಬಹುದು. ಹೊಸ ಕಿಯಾ ಸೆಲ್ಟೋಸ್ ಜಾಗತಿಕ-ಸ್ಪೆಕ್ ಮಾದರಿಯ ವಿನ್ಯಾಸವನ್ನು ನೀಡುತ್ತಿದೆ. ಇದು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳೊಂದಿಗೆ ಟೈಗರ್ ನೋಸ್ ಫ್ರಂಟ್ ಗ್ರಿಲ್, ಸಿಗ್ನೇಚರ್ ಲೈಟಿಂಗ್, ಡಿಆರ್‌ಎಲ್‌ಗಳೊಂದಿಗೆ ಇಂಟಿಗ್ರೆಟೆಡ್ ವರ್ಟಿಕಲ್ ಶೇಪ್ಡ್ ಫಾಗ್ ಲೆನ್ಸ್    ಮತ್ತು ರಿವೈಸ್ದ್ ಫ್ರಂಟ್ ಬಂಪರ್ ಅನ್ನು ಹೊಂದಿದೆ.  ರಿಯರ್ ಪ್ರೊಫೈಲ್ ಗೆ ಹೊಸ ವಿನ್ಯಾಸದ ಬಂಪರ್ ಮತ್ತು  ರಿವೈಸ್ದ್ LED ಟೈಲ್ ಲ್ಯಾಂಪ್‌ಗಳನ್ನು  ನೀಡಲಾಗುವುದು. 

ಇದನ್ನೂ ಓದಿ : ಈ ಐದು 5G ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ Jio 5G!ಫೋನ್ ಖರೀದಿಸುವ ಮುನ್ನ ನೆನಪಿರಲಿ ಈ ಮಾಹಿತಿ

ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್ 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 10.25-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ಆಟೋ ಎಸಿ, ರಿಯರ್ ಎಸಿ ವೆಂಟ್‌ಗಳು, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಮತ್ತು ಎಲೆಕ್ಟ್ರಿಕ್ ಪನೋರಮಿಕ್ ಸನ್‌ರೂಫ್ ಅನ್ನು ಹೊಂದಿರಲಿದೆ. ಕಿಯಾ ಸೆಲ್ಟೋಸ್ ಫೇಸ್‌ಲಿಫ್ಟ್‌ನ  ಸೇಫ್ಟಿ ಸೂಟ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಫಾರ್ವರ್ಡ್ ಕೊಲಿಶನ್ ಅವಾಯ್ಡ್ ಸಿಸ್ಟಮ್, ಬ್ಲೈಂಡ್ ಸ್ಪಾಟ್ ಕೊಲಿಶನ್ ಅವಾಯ್ಡ್  ಅಸಿಸ್ಟ್, ಬ್ಲೈಂಡ್ ಸ್ಪಾಟ್ ಡಿಟೆಕ್ಶನ್ ಮತ್ತು  ಅಟೋಮ್ಯಾಟಿಕ್  ಎಮೆರ್ಜೆನ್ಸಿ ಬ್ರೇಕಿಂಗ್ ನಂಥಹ ಫೀಚರ್ಸ್ ಇರಲಿದೆ.  

1.5-ಲೀಟರ್ ನಾಲ್ಕು ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು ಕಿಯಾ ಸೆಲ್ಟೋಸ್‌ನಲ್ಲಿ ನೀಡಬಹುದು. ಇದು 158 bhp ಗರಿಷ್ಠ ಶಕ್ತಿ ಮತ್ತು 260 Nm ಪೀಕ್ ಟಾರ್ಕ್ ಅನ್ನು ಜನರೇಟ್ ಮಾಡುತ್ತದೆ.  ಎಂಜಿನ್ ಅನ್ನು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡಿಸಿಟಿ ಗೇರ್‌ಬಾಕ್ಸ್ ಆಯ್ಕೆಗಳೊಂದಿಗೆ ನೀಡಲಾಗುವುದು. 

ಇದನ್ನೂ ಓದಿ : Instagram ಮೂಲಕ ಪ್ರತಿ ತಿಂಗಳು ಗಳಿಸಬಹುದು 30 ಸಾವಿರ ರೂಪಾಯಿ.!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News