ಸನ್’ರೂಫ್ ಜೊತೆ ಸೂಪರ್ ಮೈಲೇಜ್… ದೇಶದಲ್ಲಿಯೇ ಅತೀ ಅಗ್ಗದ ಕಾರಿದು! CNG ಆಯ್ಕೆಯೂ ಲಭ್ಯವಿದೆ

Tata Altroz Sunroof: ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಆಲ್ಟ್ರೊಜ್ ಹ್ಯಾಚ್‌ ಬ್ಯಾಕ್ ಮಾದರಿ ಶ್ರೇಣಿಯಲ್ಲಿ ಸನ್‌ ರೂಫ್ ಅನ್ನು ಪರಿಚಯಿಸಿದ್ದಾರೆ. ಇದು ಸನ್‌ ರೂಫ್ ಹೊಂದಿರುವ ಭಾರತದಲ್ಲಿನ ಅತ್ಯಂತ ಅಗ್ಗದ ಕಾರಾಗಿದೆ. ಟಾಟಾ ಆಲ್ಟ್ರೋಜ್‌ನ ಸನ್‌ರೂಫ್ ರೂಪಾಂತರಗಳ ಬೆಲೆಗಳು ರೂ.7.90 ಲಕ್ಷದಿಂದ ರೂ.10.55 ಲಕ್ಷದವರೆಗೆ ಇರುತ್ತದೆ.

Written by - Bhavishya Shetty | Last Updated : Jun 1, 2023, 10:33 AM IST
    • ಇದು ಈಗ ಮಾಸ್-ಸೆಗ್ಮೆಂಟ್ ಕಾರುಗಳಲ್ಲಿ ಬಹಳ ಜನಪ್ರಿಯ ವೈಶಿಷ್ಟ್ಯವಾಗಿದೆ.
    • ಮಿಡ್-ಸ್ಪೆಕ್ XM+ ಟ್ರಿಮ್ ಸನ್‌ ರೂಫ್ ಹೊಂದಿದ್ದು, ಸನ್‌ ರೂಫ್ ಒಟ್ಟು 16 ರೂಪಾಂತರಗಳಲ್ಲಿ ಲಭ್ಯವಿದೆ
    • ಇದು ಸನ್‌ ರೂಫ್ ಹೊಂದಿರುವ ಭಾರತದಲ್ಲಿನ ಅತ್ಯಂತ ಅಗ್ಗದ ಕಾರಾಗಿದೆ
ಸನ್’ರೂಫ್ ಜೊತೆ ಸೂಪರ್ ಮೈಲೇಜ್… ದೇಶದಲ್ಲಿಯೇ ಅತೀ ಅಗ್ಗದ ಕಾರಿದು! CNG ಆಯ್ಕೆಯೂ ಲಭ್ಯವಿದೆ title=
New Cars Update

Tata Altroz Sunroof: ಸನ್‌ ರೂಫ್ ಈಗೀಗ ಐಷಾರಾಮಿ ಕಾರುಗಳ ಹೊರತಾಗಿ ಬೇರೆ ಬೇರೆ ಬಜೆಟ್ ಫ್ರೆಂಡ್ಲಿ ಕಾರುಗಳಲ್ಲಿ ಸಹ ಕಾಣಿಸಿಕೊಳ್ಳುತ್ತದೆ. ಇಂದು ಅಂತಹ ಕಾರೊಂದರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇದು ಈಗ ಮಾಸ್-ಸೆಗ್ಮೆಂಟ್ ಕಾರುಗಳಲ್ಲಿ ಬಹಳ ಜನಪ್ರಿಯ ವೈಶಿಷ್ಟ್ಯವಾಗಿದೆ. ಈ ರೇಸ್‌ ನಲ್ಲೂ ಮುಂಚೂಣಿಯಲ್ಲಿರುವ ಕಾರು ತಯಾರಕರಲ್ಲಿ ಟಾಟಾ ಮೋಟಾರ್ಸ್ ಕೂಡ ಒಂದಾಗಿದೆ.

ಇದನ್ನೂ ಓದಿ: ಇಂದಿನ ಅಡಿಕೆ ಧಾರಣೆ: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

ಟಾಟಾ ಮೋಟಾರ್ಸ್ ಇತ್ತೀಚೆಗೆ ತನ್ನ ಆಲ್ಟ್ರೊಜ್ ಹ್ಯಾಚ್‌ ಬ್ಯಾಕ್ ಮಾದರಿ ಶ್ರೇಣಿಯಲ್ಲಿ ಸನ್‌ ರೂಫ್ ಅನ್ನು ಪರಿಚಯಿಸಿದ್ದಾರೆ. ಇದು ಸನ್‌ ರೂಫ್ ಹೊಂದಿರುವ ಭಾರತದಲ್ಲಿನ ಅತ್ಯಂತ ಅಗ್ಗದ ಕಾರಾಗಿದೆ. ಟಾಟಾ ಆಲ್ಟ್ರೋಜ್‌ನ ಸನ್‌ರೂಫ್ ರೂಪಾಂತರಗಳ ಬೆಲೆಗಳು ರೂ.7.90 ಲಕ್ಷದಿಂದ ರೂ.10.55 ಲಕ್ಷದವರೆಗೆ ಇರುತ್ತದೆ.

ಮಿಡ್-ಸ್ಪೆಕ್ XM+ ಟ್ರಿಮ್ ಸನ್‌ ರೂಫ್ ಹೊಂದಿದ್ದು, ಸನ್‌ ರೂಫ್ ಒಟ್ಟು 16 ರೂಪಾಂತರಗಳಲ್ಲಿ ಲಭ್ಯವಿದೆ. ಅವುಗಳಲ್ಲಿ ಮೂರು CNG ರೂಪಾಂತರಗಳಾಗಿವೆ.

ಮಾರುತಿ ಬಲೆನೊ ಮತ್ತು ಹ್ಯುಂಡೈ i20 ಆಸ್ಟಾ ಮತ್ತು ಆಸ್ಟಾ (O) ಟ್ರಿಮ್‌ ಗಳಿಗೆ ಟಾಟಾದ ಈ ವೇರಿಯೆಂಟ್ ಪೈಪೋಟಿ ನೀಡುತ್ತದೆ. ಇವುಗಳಲ್ಲಿ ಸನ್ ರೂಫ್ ಇದ್ದರೂ ಸಹ ಇದರ ಬೆಲೆ ರೂ 9.03 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ದಕ್ಷಿಣ ಕೊರಿಯಾದ ವಾಹನ ತಯಾರಕರು ಶೀಘ್ರದಲ್ಲೇ ಹ್ಯುಂಡೈ ಎಕ್ಸ್‌ಟರ್ ಮೈಕ್ರೋ ಎಸ್‌ ಯು ವಿಯನ್ನು ಸಿಂಗಲ್-ಪೇನ್ ಸನ್‌ರೂಫ್‌ನೊಂದಿಗೆ ಪರಿಚಯಿಸಲಿದ್ದಾರೆ. ಸನ್‌ ರೂಫ್ ಅದರ ಟಾಪ್ ಟ್ರಿಮ್‌ ಗಳಲ್ಲಿ ಲಭ್ಯವಿರುತ್ತದೆ. ಇದು ಹ್ಯುಂಡೈನ ಅತ್ಯಂತ ಕೈಗೆಟುಕುವ SUV ಆಗಿರುತ್ತದೆ ಮತ್ತು ಸನ್‌ ರೂಫ್‌ನೊಂದಿಗೆ ಬರುವ ಅಗ್ಗದ ಕಾರು.

ಎಂಜಿನ್ ಆಯ್ಕೆಗಳು

ಟಾಟಾ ಆಲ್ಟ್ರೊಜ್ ಮಾದರಿಯು 1.2L NA ಪೆಟ್ರೋಲ್, 1.2L ಟರ್ಬೊ ಪೆಟ್ರೋಲ್ ಮತ್ತು 1.5L ಡೀಸೆಲ್ ಎಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. NA ಮತ್ತು ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಳು ಕ್ರಮವಾಗಿ 86bhp ಮತ್ತು 110bhp ಹೊಂದಿದ್ದರೆ, ಡೀಸೆಲ್ ಎಂಜಿನ್ 90bhp ಹೊಂದಿದೆ. ಇದರಲ್ಲಿ 5-ಸ್ಪೀಡ್ ಗೇರ್‌ಬಾಕ್ಸ್ ಅನ್ನು ಪ್ರಮಾಣಿತವಾಗಿ ಇದ್ದು, 6-ಸ್ಪೀಡ್ DCT ಸ್ವಯಂಚಾಲಿತ ಪ್ರಸರಣವು 1.2L NA ಪೆಟ್ರೋಲ್ ಎಂಜಿನ್‌ನೊಂದಿಗೆ ಮಾತ್ರ ಲಭ್ಯವಿದೆ.

ಇದನ್ನೂ ಓದಿ: RBI ಮತ್ತೆ ಬಿಡುಗಡೆ ಮಾಡಲಿದೆಯೇ 1000 ರೂ.? ಈ ಬಗ್ಗೆ ಕೇಂದ್ರ ಬ್ಯಾಂಕ್ ನೀಡಿದ ಮಾಹಿತಿ ಇದು

CNG  ವೇರಿಯೆಂಟ್:

ಟಾಟಾ ಆಲ್ಟ್ರೊಜ್ ಶ್ರೇಣಿಗೆ 6 ಸಿ ಎನ್‌ ಜಿ ರೂಪಾಂತರಗಳನ್ನು ಸೇರಿಸಿದ್ದಾರೆ. ಇದರ ಬೆಲೆ 7.55 ಲಕ್ಷದಿಂದ 10.55 ಲಕ್ಷ ರೂ. ಇದೆ. ಇದು ಡ್ಯುಯಲ್-ಸಿಲಿಂಡರ್ CNG ಸೆಟಪ್ನೊಂದಿಗೆ 1.2L ಪೆಟ್ರೋಲ್ ಎಂಜಿನ್ ಅನ್ನು ಬಳಸುತ್ತದೆ. CNG ಮೋಡ್‌ ನಲ್ಲಿ, ಈ ಎಂಜಿನ್ 77bhp ನ ಗರಿಷ್ಠ ಶಕ್ತಿಯನ್ನು ಮತ್ತು 103Nm ಟಾರ್ಕ್ ಅನ್ನು ನೀಡುತ್ತದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News