ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ

What Is ATM Card Trap Scam: ಇತ್ತೀಚಿನ ದಿನಗಳಲ್ಲಿ ಎಟಿಎಂ ಕಾರ್ಡ್ ಟ್ರ್ಯಾಪ್ ಹಗರಣ ಪ್ರಕರಣಗಳು ಹೆಚ್ಚು ಮುನ್ನಲೆಗೆ ಬರುತ್ತಿವೆ. ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಹಗರಣ? ಇದರಿಂದ ನೀವು ಸುರಕ್ಷಿತವಾಗಿರುವುದು ಹೇಗೆ ಎಂದು ತಿಳಿಯೋಣ... 

Written by - Yashaswini V | Last Updated : May 6, 2024, 11:01 AM IST
  • ಇತ್ತೀಚಿನ ದಿನಗಳಲ್ಲಿ ಎಟಿಎಂ ಹಗರಣಕ್ಕೆ ಸಂಬಂಧಿಸಿದಂತೆ ಎಟಿಎಂ ಕಾರ್ಡ್ ಟ್ರ್ಯಾಪ್ ಹೆಸರಿನ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ.
  • ವಂಚಕರು ಇದರಲ್ಲಿ ಬ್ಯಾಂಕ್ ಗ್ರಾಹಕರ ವೈಯಕ್ತಿಯ ಮಾಹಿತಿಯನ್ನು ಕದಿಯುವ ಮೂಲಕ ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡುತ್ತಾರೆ.
  • ಇದರಿಂದ ನಿಮ್ಮ ಖಾತೆಯನ್ನು ರಕ್ಷಿಸುವುದು ಹೇಗೆ?
ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ  title=

ATM Card Trap Scam: ನೀವು ಹಣ ವಿತ್ ಡ್ರಾ ಮಾಡಲು, ಇಲ್ಲವೇ ಇನ್ನಾವುದೇ ಬ್ಯಾಂಕಿಂಗ್ ಕೆಲಸಗಳಿಗಾಗಿ ಎಟಿಎಂಗೆ ಹೋಗುತ್ತಿದ್ದೀರಾ? ಒಮ್ಮೆ ಈ ಸುದ್ದಿಯನ್ನು ಓದಲೇ ಬೇಕು. ಇತ್ತೀಚಿನ ದಿನಗಳಲ್ಲಿ ಎಟಿಎಂ ಹಗರಣಕ್ಕೆ ಸಂಬಂಧಿಸಿದಂತೆ ಎಟಿಎಂ ಕಾರ್ಡ್ ಟ್ರ್ಯಾಪ್ ಹೆಸರಿನ ಹೊಸ ಹಗರಣವೊಂದು ಬೆಳಕಿಗೆ ಬಂದಿದೆ. ವಂಚಕರು ಇದರಲ್ಲಿ ಬ್ಯಾಂಕ್ ಗ್ರಾಹಕರ ವೈಯಕ್ತಿಯ ಮಾಹಿತಿಯನ್ನು ಕದಿಯುವ ಮೂಲಕ ಖಾತೆಯಲ್ಲಿರುವ ಹಣವನ್ನು ಲೂಟಿ ಮಾಡುತ್ತಾರೆ. ಇದರಿಂದ ನಿಮ್ಮ ಖಾತೆಯನ್ನು ರಕ್ಷಿಸುವುದು ಹೇಗೆ? ಇಂತಹ ವಂಚನೆಗಳಿಂದ ಬಚಾವಾಗಲು ಅನುಸರಿಸಬೇಕಾದ ಮಾರ್ಗಗಳು ಯಾವುವು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. 

ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್  ಹೇಗೆ ಕೆಲಸ ಮಾಡುತ್ತದೆ? 
ಟ್ಯಾಂಪರ್ಡ್ ಎಟಿಎಂ:

ಎಟಿಎಂನಲ್ಲಿ ಕಳ್ಳರು ಎಟಿಎಂ ಕಾರ್ಡ್ ರೀಡರ್ (ATM card reader) ಹಾನಿಗೊಳಿಸಿ ಆ ಸ್ಥಳದಲ್ಲಿ ನಿಮ್ಮ ಕಾರ್ಡ್ ಮಾಹಿತಿಯನ್ನು ಕದಿಯುವ ಸ್ಕ್ಯಾನಿಂಗ್ ಸಾಧನವನ್ನು ಸ್ಥಾಪಿಸಿರುತ್ತಾರೆ. ಇದರಲ್ಲಿ ಕಾರ್ಡ್ ಅಳವಡಿಸುವುದರಿಂದ ಗ್ರಾಹಕರ ವೈಯಕ್ತಿಕ ಮಾಹಿತಿ ಕಳುವಾಗುವ ಅಪಾಯ ಹೆಚ್ಚು. 

ಸಹಾಯ ಮಾಡುವಂತೆ ನಟನೆ: 
ಎಟಿಎಂನಲ್ಲಿ ಕಾರ್ಡ್ ಸಿಲುಕಿಕೊಂಡಾಗ ಅಪರಿಚಿತರು ಬಂದು ಸಹಾಯ ಮಾಡುವಂತೆ ನಟಿಸುತ್ತಾರೆ. 

ಇದನ್ನೂ ಓದಿ- ನೀವು ಮನೆಯ ಈ ಜಾಗದಲ್ಲಿ ವೈಫೈ ರೂಟರ್ ಅಳವಡಿಸಿದ್ದೀರಾ? ಸರಿಯಾದ ಜಾಗ ತಿಳಿದುಕೊಳ್ಳಿ!

ಪಿನ್ ಕಳ್ಳತನ: 
ನಿಮ್ಮ ಕಾರ್ಡ್ ಅನ್ನು ಹೊರ ತೆಗೆಯಲು ನಿಮ್ಮ ಪಿನ್ ಅನ್ನು ನಮೂದಿಸುವಂತೆ ಅವರು ನಿಮ್ಮ ಮನವೊಲಿಸಬಹುದು. ನಿಮ್ಮ ಗಮನ ಬೇರೆಡೆ ತಿರುಗುತ್ತಿದ್ದಂತೆ ನಿಮ್ಮ ಖಾತೆಯಿಂದ ಹಣವನ್ನು ಸಂಪೂರ್ಣವಾಗಿ ಖಾಲಿ ಮಾಡಬಹುದು. 

ಇಂತಹ ವಂಚನೆಗಳಿಂದ ಸುರಕ್ಷಿತವಾಗಿರುವುದು ಹೇಗೆ? 
ನೀವೂ ಎಟಿಎಂನಿಂದ ಹಣ ಪಡೆಯಲು (Money Withdrawal From ATM) ಇಲ್ಲವೇ ಬ್ಯಾಲೆನ್ಸ್ ಚೆಕ್ ಮಾಡಲು ಹೋದಾಗ ಕೆಲವು ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದರಿಂದ ವಂಚನೆಗೆ ಬಲಿಯಾಗುವುದನ್ನು ತಪ್ಪಿಸಬಹುದು. ಅವುಗಳೆಂದರೆ... 

ಎಟಿಎಂ ಅನ್ನು ಪರೀಕ್ಷಿಸಿ: 
ನೀವೂ ಎಟಿಎಂಗೆ (ATM) ಭೇಟಿ ನೀಡಿದಾಗ ಮೊದಲು ಎಟಿಎಂ ಕಾರ್ಡ್ ಹಾಕುವ ಸ್ಲಾಟ್ ಸುತ್ತಲೂ ಯಾವುದೇ ಅಕ್ರಮಗಳು ಅಥವಾ ಅನುಮಾನಾಸ್ಪದ ವಸ್ತುಗಳಿವೆಯೇ ಎಂದು ಎಚ್ಚರಿಕೆಯಿಂದ ಪರಿಶೀಲಿಸಿ. ಯಾವುದೇ ಮುರಿದ ಅಥವಾ ಸಡಿಲವಾದ ಭಾಗಗಳು ಇಲ್ಲವೇ ಗುಪ್ತ ಕ್ಯಾಮರಾ ಅಳವಡಿಸಲಾಗಿದೆಯೇ ಎಂಬುದನ್ನೂ ಎಚ್ಚರಿಕೆಯಿಂದ ಪರಿಶೀಲಿಸಿ. 

ಅಪರಿಚಿತರನ್ನು ನಂಬಬೇಡಿ: 
ಎಟಿಎಂ ನಲ್ಲಿ ನಿಮ್ಮ ಕಾರ್ಡ್ ತೆಗೆಯಲು ಸಹಾಯ ಮಾಡುವುದಾಗಿ ಬರುವ ಅಪರಿಚಿತ ವ್ಯಕ್ತಿಯನ್ನು ನಂಬಬೇಡಿ. 

ಪಿನ್ ಹಂಚಿಕೆ: 
ಎಂದಿಗೂ ಯಾರೊಂದಿಗೂ ಸಹ ಎಂತಹುದೇ ಸಂದರ್ಭದಲ್ಲಿ ಪಿನ್ ಹಂಚಿಕೊಳ್ಳಬೇಡಿ. 

ಇದನ್ನೂ ಓದಿ- POCO M6 Pro 5G: ಅತ್ಯಂತ ಕಡಿಮೆ ಬೆಲೆಗೆ ಅದ್ಭುತ ಫೀಚರ್ಸ್‌ ಹೊಂದಿರುವ ಸ್ಮಾರ್ಟ್‌ಫೋನ್!

ಎಟಿಎಂನಲ್ಲಿ ಕಾರ್ಡ್ ಸಿಲುಕಿಕೊಂಡರೆ ಏನು ಮಾಡಬೇಕು? 
ಒಂದೊಮ್ಮೆ ಎಟಿಎಂನಲ್ಲಿ ನಿಮ್ಮ ಕಾರ್ಡ್ ಸಿಲುಕಿಕೊಂಡರೆ ಅಂತಹ ಸಂದರ್ಭದಲ್ಲಿ ನಿಮ್ಮ ಬ್ಯಾಂಕ್‌ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಿ ಸಹಾಯ ಪಡೆಯಿರಿ. 

ಎಟಿಎಂ ಆಯ್ಕೆ: 
ನೀವು ಹಣ ವಿತ್ ಡ್ರಾ ಮಾಡಲು ಜನನಿಬಿಡ ಪ್ರದೇಶಗಳು, ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಉತ್ತಮ ಬೆಳಕಿನ ಪ್ರದೇಶಗಳಲ್ಲಿ ಇರುವ ಎಟಿಎಂಗಳನ್ನು ಬಳಸಿ. ಇದರಿಂದ ವಂಚನೆಗೆ ಬಲಿಯಾಗುವ ಸಾಧ್ಯತೆ ಕಡಿಮೆ ಎಂತಲೇ ಹೇಳಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News