WhatsApp ಬಂಪರ್ ಧಮಾಕಾ! ಈ ವೈಶಿಷ್ಟ್ಯ ಬಳಸುವವರಿಗೆ ಸಿಗಲಿದೆ ಹಣ, ಲಾಭ ಗಳಿಸುವುದು ಹೇಗೆ?

WhatsApp Cashback on UPI Transaction: ವಿಶ್ವದ ಖ್ಯಾತ ಮೆಸೇಜಿಂಗ್ ಆಪ್ ಆಗಿರುವ ವಾಟ್ಸ್ ಆಪ್ ಹೊಸ ಕಾರ್ಯಕ್ರಮವೊಂದನ್ನು ಆರಂಭಿಸುತ್ತಿದೆ ಎನ್ನಲಾಗಿದೆ. ವಾಟ್ಸ್ ಆಪ್ ನ ಒಂದು ವೈಶಿಷ್ಟ್ಯ ಬಳುಸುವ ಎಲ್ಲಾ ಬಳಕೆದಾರರಿಗೆ ವಾಟ್ಸ್ ಆಪ್ ಹಣ ನೀಡಲಿದೆ ಎನ್ನಲಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Apr 29, 2022, 04:45 PM IST
  • ಇನ್ಮುಂದೆ ವಾಟ್ಸ್ ಆಪ್ ನ ಈ ವೈಶಿಷ್ಟ್ಯವನ್ನು ಬಳಸಿ ಕ್ಯಾಶ್ ಬ್ಯಾಕ್ ಪಡೆಯಿರಿ
  • ಪ್ರತಿ ವಹಿವಾಟಿನ ಮೇಲೆ ರೂ.33 ಕ್ಯಾಶ್ ಬ್ಯಾಕ್
  • ಯಾವುದು ಆ ವೈಶಿಷ್ಟ್ಯ ತಿಳಿದುಕೊಳ್ಳೋಣ ಬನ್ನಿ
WhatsApp ಬಂಪರ್ ಧಮಾಕಾ! ಈ ವೈಶಿಷ್ಟ್ಯ ಬಳಸುವವರಿಗೆ ಸಿಗಲಿದೆ ಹಣ, ಲಾಭ ಗಳಿಸುವುದು ಹೇಗೆ? title=
WhatsApp Cashback Programme

ನವದೆಹಲಿ: WhatsApp Cashback Programme - ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್‌ಗಳಲ್ಲಿ ಒಂದಾದ ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ಅನೇಕ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಿದೆ ಮತ್ತು ಪ್ರತಿ ಅಪ್ಡೇಟ್ ನೊಂದಿಗೆ ತನ್ನ ಬಳಕೆದಾರರಿಗೆ ಹೊಸದನ್ನು ನೀಡಲು ಪ್ರಯತ್ನಿಸುತ್ತದೆ. ಆದರೆ ವಾಟ್ಸ್ ಆಪ್ ತನ್ನ ಆ್ಯಪ್‌ನ ಒಂದು ನಿರ್ದಿಷ್ಟ ವೈಶಿಷ್ಟ್ಯ ಬಳಸುವ ಎಲ್ಲಾ ಬಳಕೆದಾರರಿಗೆ ಕ್ಯಾಶ್‌ಬ್ಯಾಕ್ ನೀಡಲಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಯಾವುದು ಆ ವೈಶಿಷ್ಟ್ಯ ಮತ್ತು ಬಳಕೆದಾರರಿಗೆ ಎಷ್ಟು ಹಣವನ್ನು ನೀಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-Koo App : ಬದಲಾದ ಸ್ವರೂಪದಲ್ಲಿ Koo ಆ್ಯಪ್‌ : ಬಳಕೆದಾರರಿಗೆ ಈಗ ಉತ್ತಮ ಬ್ರೌಸಿಂಗ್ ಅನುಭವ

WhatsApp ನ ಈ ವೈಶಿಷ್ಟ್ಯವನ್ನು ಬಳಸಿ ಕ್ಯಾಶ್ ಬ್ಯಾಕ್ ಪಡೆಯಿರಿ
WhatsApp ನ ಯಾವ ವೈಶಿಷ್ಟ್ಯವನ್ನು ಬಳಸಿಕೊಂಡು ಆಪ್ ನಿಂದ  ಕ್ಯಾಶ್‌ಬ್ಯಾಕ್ ಪಡೆಯಬಹುದು? ಎಂಬುದನ್ನು ನೀವೂ ಕೂಡ ಯೋಚಿಸುತ್ತಿದ್ದರೆ, ನಾವು ವಾಟ್ಸ್ ಆಪ್ ಪೇಮೆಂಟ್ ಕುರಿತು ಮಾತನಾಡುತ್ತಿದ್ದೇವೆ ಎಂಬುದು ಇಲ್ಲಿ ಉಲ್ಲೇಖನೀಯ. ಹೌದು, ವಾಟ್ಸ್ ಆಪ್ ನಲ್ಲಿ 'ವಾಟ್ಸ್ ಆಪ್ ಪೇಮೆಂಟ್' ವೈಶಿಷ್ಟ್ಯವನ್ನು ಹೆಚ್ಚು ಜನಪ್ರೀಯಗೊಳಿಸಲು ವಾಟ್ಸ್ ಆಪ್  ಕ್ಯಾಶ್‌ಬ್ಯಾಕ್ ಪ್ರೋಗ್ರಾಮ್ ಆರಂಭಿಸುತ್ತಿದೆ ಎನ್ನಲಾಗಿದೆ, ಇದರಲ್ಲಿ ಬಳಕೆದಾರರು ಯುಪಿಐ ಪಾವತಿ ಸೇವಯನ್ನು ಬಳಸಿ ಮಾಡುವ ಪ್ರತಿ ವಹಿವಾಟಿನ ಮೇಲೆ ಕ್ಯಾಶ್‌ಬ್ಯಾಕ್ ನೀಡಲಾಗುವುದು ಎನ್ನಲಾಗಿದೆ, ಆದರೆ, ಪಾವತಿ ಮಾಡುವ ಹಣಕ್ಕೆ ಯಾವುದೇ ಮಿತಿ ನೀಡಲಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ-Vi ಗ್ರಾಹಕರಿಗೆ ಶಾಕ್! ಈಗ ಬಳಕೆದಾರರಿಗೆ ಸಿಗಲ್ಲ ಈ ಸೌಲಭ್ಯ

ಪ್ರತಿ ವಹಿವಾಟಿನ ಮೇಲೆ ಕ್ಯಾಶ್‌ಬ್ಯಾಕ್ ಸಿಗಲಿದೆ
ಕೆಲ ದಿನಗಳ ಹಿಂದೆಯೇ ಆರಂಭಗೊಂಡ ವಾಟ್ಸ್ ಆಪ್ ಪಾವತಿ ಸೇವೆಯಲ್ಲಿ, ಬಳಕೆದಾರರಿಗೆ ವಾಟ್ಸ್ ಆಪ್ ಕ್ಯಾಶ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ. ವಾಟ್ಸ್ ಆಪ್ ನ ಈ ವೈಶಿಷ್ಟ್ಯ ಬಲೈಸ್ ನೀವು ಯಾವುದೇ ವಹಿವಾಟು ನಡೆಸಿದರೆ, ನಂತರ ನೀವು ಪ್ರತಿ ಬಾರಿ 33 ರೂಪಾಯಿಗಳ ಕ್ಯಾಶ್ಬ್ಯಾಕ್ ಪಡೆಯಬಹುದು. ಸುದ್ದಿ ಸಂಸ್ಥೆ ರಾಯಿಟರ್ಸ್ ಈ ಕುರಿತು ವರದಿಯನ್ನು ಪ್ರಕಟಿಸಿದ್ದು, ಸದ್ಯಕ್ಕೆ ವಾಟ್ಸ್ ಆಪ್ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಈ ಹೊಸ ಕ್ಯಾಶ್‌ಬ್ಯಾಕ್ ಕಾರ್ಯಕ್ರಮದ ವಿಶೇಷತೆ ಎಂದರೆ, ಇದರಲ್ಲಿ ಯಾವುದೇ ಕನಿಷ್ಠ ವಹಿವಾಟು ಮಿತಿ ಇರುವುದಿಲ್ಲ ಎನ್ನಲಾಗಿದೆ, ಅಂದರೆ, ಸಣ್ಣ ಮೊತ್ತದ ಪಾವತಿಯಲ್ಲೂ ಸಹ, ವಾಟ್ಸ್ ಆಪ್ ಬಳಕೆದಾರರು 33 ರೂಪಾಯಿಗಳ ಕ್ಯಾಶ್‌ಬ್ಯಾಕ್ ಪಡೆಯಬಹುದು ಎಂದರ್ಥ. ತನ್ಮೂಲಕ ವಾಟ್ಸ್ ಆಪ್ ಈ ವೈಶಿಷ್ಟ್ಯವನ್ನು ಹೆಚ್ಚು ಜನಪ್ರಿಯಗೊಳಿಸಲು ಮತ್ತು ಫೋನ್ ಪೇ, ಪೇಟಿಎಂ ಮತ್ತು ಗೂಗಲ್ ಪೇ ನಂತಹ ಪ್ಲಾಟ್‌ಫಾರ್ಮ್‌ಗಳಿಗೆ ತೀವ್ರ ಪೈಪೋಟಿ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News