ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದವರ ಬಂಧನ

  • Zee Media Bureau
  • Mar 22, 2023, 06:51 PM IST

ಚುನಾವಣೆ ಹತ್ತಿರವಾಗುತ್ತಿರುವ ಹಿನ್ನೆಲೆ ಚಾಮರಾಜನಗರ ಅಬಕಾರಿ ಇಲಾಖೆ ಹೈ ಅಲರ್ಟ್ ಆಗಿದ್ದು, ಮಿಂಚಿನ ಕಾರ್ಯಾಚರಣೆ ನಡೆಸುತ್ತಿದೆ. ಎಲೆಕ್ಷನ್ ಬಂತೆಂದರೆ ಎಣ್ಣೆ ಹಂಚೋದು ಮಾಮೂಲಿ. ಅಕ್ರಮ ಮದ್ಯ ಹಂಚಿಕೆ ಆಗಬಾರದೆಂದು ಈಗಿನಿಂದಲೇ ಅಬಕಾರಿ ಇಲಾಖೆ ಅಲರ್ಟ್ ಆಗಿದೆ. ಕಳೆದ ಒಂದು ತಿಂಗಳಿನಲ್ಲಿ 115 ದಾಳಿ ನಡೆಸಿ 58 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಳೆದ ಫೆ. 19ರಿಂದ ಮಾರ್ಚ್ 20ರವರೆಗೆ ಜಿಲ್ಲೆಯಲ್ಲಿ ಅಬಕಾರಿ ಇಲಾಖೆಯು ಒಟ್ಟು 115 ದಾಳಿ ನಡೆಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ 58 ಮಂದಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Trending News