Viral Video: 73 ವರ್ಷದ ವೃದ್ಧನ ಮಧುರ ಕಂಠಕ್ಕೆ ಖ್ಯಾತ ಬಾಲಿವುಡ್ ಗಾಯಕ ಶಾನ್ ಪಾಪಾ ಫಿದಾ; ವಿಡಿಯೋ ವೈರಲ್!

Singer Shaun Papa: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್‌ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿರುವ ವಿಡಿಯೋ ವೈರಲ್‌ ಆಗಿದೆ.

Written by - Zee Kannada News Desk | Last Updated : Jul 1, 2023, 07:35 PM IST
  • 73 ವರ್ಷದ ವೃದ್ಧನ ಮಧುರ ಕಂಠಕ್ಕೆ ಖ್ಯಾತ ಬಾಲಿವುಡ್ ಗಾಯಕ ಶಾನ್ ಪಾಪಾ ಫಿದಾ
  • ಖ್ಯಾತ ಬಾಲಿವುಡ್ ಗಾಯಕ ಶಾನ್ ಜೊತೆ ಧ್ವನಿ ಗೂಡಿದ 73 ವರ್ಷದ ವೃದ್ಧ
  • 73 ವರ್ಷದ ವೃದ್ಧಗಾಯನ ಸಾಮಾಜಿಕ ಜಾಲತಾಣದಲ್ಲಿ ವೈರಲ್
Viral Video: 73 ವರ್ಷದ ವೃದ್ಧನ ಮಧುರ ಕಂಠಕ್ಕೆ ಖ್ಯಾತ ಬಾಲಿವುಡ್ ಗಾಯಕ ಶಾನ್ ಪಾಪಾ ಫಿದಾ; ವಿಡಿಯೋ ವೈರಲ್! title=

ಕೇರಳ: ಇತ್ತಿಚೇಗೆ ಸಾಮಾಜಿಕ ಜಾಲತಾಣದ ಅಭಿವೃದ್ದಿ ಹೆಚ್ಚಾದಂತೆ ಜನಪದ ಕಲೆ, ಹಿರಿಯರ ಗಾಯನ ಸಂಗೀತ ಎಲ್ಲವೂ ಕಣ್ಮರೆಯಾಗುತ್ತಿರುವ ಯುಗದಲ್ಲಿ ಇದೀಗ 73 ವರ್ಷದ ವೃದ್ದರೊಬ್ಬರು ಮೊದಲ ಬಾರಿಗೆ ಮೈಕ್‌ ಹಿಡಿದು ಹಾಡಿದರೂ ಯಾವ ಗಾಯಕರಿಗೆ ಕಡಿಮೆ ಇಲ್ಲಾದಂತೆ ಹಾಡಿದ್ದಾರೆ.

ಇದೀಗ ಇವರು ಹಾಡು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ. 73 ವರ್ಷದ ಈ ವೃದ್ದ ಸಾಮಾನ್ಯರಲ್ಲ ಇವರು ವೃತ್ತಿಯಲ್ಲಿ ವೈದ್ಯರು .. ಆದರೆ ಇವರ ಧ್ವನಿಯೂ ಅಷ್ಟೇ ಮಧುರವಾಗಿದೆ. ಡಾ. ಸುರೇಶ್ ನಂಬಿಯಾರ್ ಎಂಬುವವರು ಮೊದಲ ಬಾರಿಗೆ ವೇದಿಕೆ ಮೇಲೆ ಮೈಕ್‌ ಹಿಡಿದು ಹಾಡಿದ್ದಾರೆ.

ಇದನ್ನೂ ಓದಿ: Lust Stories 2: ಲಸ್ಟ್‌ ಸ್ಟೋರಿಸ್‌ 2 ಸೆಟ್‌ನಲ್ಲೇ ತಮನ್ನಾ-ವಿಜಯ್‌..; ನಿರ್ದೇಶಕ ಸುಜೋಯ್ ಘೋಷ್‌!

ಖ್ಯಾತ ಬಾಲಿವುಡ್ ಗಾಯಕ ಶಾನ್ ರವರ ಜೊತೆ ಹಳೆಯ ಜನಪ್ರಿಯ ಹಿಂದೀ ʼಜವಾನಿಯಾಂ ಯೆ ಮಸ್ತ್ ಮಸ್ತ್ ಬಿನ್ ಪಿಯೇʼ ಹಾಡಿಗೆ ಧ್ವನಿ ಗೂಡಿಸಿದ್ದಾರೆ. ಮೈಕ್‌ ಹಿಡಿದು ಹಾಡಿದ ವೈದ್ಯರು, ನನಗೀಗ 73 ವರ್ಷ. ನಮ್ಮಲ್ಲಿ ಹಾಡುವವರಿಗಾಗಿ ಬಹಳಷ್ಟು ಸ್ಪರ್ಧೆಗಳಿವೆ, ವೇದಿಕೆಗಳಿವೆ.

ಆದರೆ ಸಾಮಾನ್ಯವಾಗಿ ಅವೆಲ್ಲ 20 ವರ್ಷದ ಕೆಳಗಿನವರಿಗೆ, ಅಥವಾ 20ರಿಂದ 40 ವರ್ಷದವರಿಗೆ ಮಾತ್ರ .ಆದರೆ ವೃದ್ದರಿಗಲ್ಲ. ನನಗೆ ಈಗಲಾದರೂ ಹಾಡುವ ಅವಕಾಶ ಸಿಕ್ಕಿರುವುದಕ್ಕೆ ಖುಷಿ ಇದೆ.

ಇದನ್ನೂ ಓದಿ: Viral Video: ಸಿಗರೇಟು ಸೇದುವುದರಲ್ಲಿ ಹೆಣ್ಮಕ್ಳೆ ಸ್ಟ್ರಾಂಗು ಗುರು; ಈ ಪಟ್ಟಣಕ್ಕೆ ಏನಾಗಿದೆ ಎಂದ ನೆಟ್ಟಿಗರು!

ನನಂತೆ ಅನೇಕ ಪ್ರತಿಭೆಗಳು ಇದ್ದಾರೆ . ಹಿರಿಯ ಗಾಯಕರಿಗಾಗಿ ವೇದಿಕೆಗಳನ್ನು ಸೃಷ್ಟಿಸುವಂತೆ ಕೋರಿಕೆ ಇಟ್ಟಿದ್ದಾರೆ. ಇವರ ಹಾಡಿಗೆ ವೀಕ್ಷಕರು ಮಾತ್ರವಲ್ಲದೇ ಅವರ ಜೊತೆ ಇದ್ದ ಖ್ಯಾತ ಬಾಲಿವುಡ್ ಗಾಯಕ ಶಾನ್ ಕೂಡ ಶಾಕ್‌ ಆಗಿದ್ದಾರೆ. ಅಷ್ಟೆ ಅಲ್ಲದೇ ನೆಟ್ಟಿಗರು ಸಹ ಫಿದ ಆಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News