ನಿಮಗಿದು ಗೊತ್ತೇ? ಇಲ್ಲಿನ ಜನರು ಸಂತೋಷವಾಗಿರಲು ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರಂತೆ!

ಕುಟುಂಬದ ಜವಾಬ್ದಾರಿಗಳು, ಹೆಚ್ಚುತ್ತಿರುವ ಜೀವನ ವೆಚ್ಚ, ಭಾರೀ ಬಿಲ್‌ಗಳು ಮತ್ತು ಆರ್ಥಿಕ ಹಿಂಜರಿತಗಳು ಸಾಮಾನ್ಯವಾಗಿ ಕೆಲಸಗಾರರನ್ನು ಒಂದು ಬಾರಿ ತಮ್ಮ ಉದ್ಯೋಗ ಮತ್ತು ಸಂಬಳದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡುತ್ತದೆ.

Written by - Bhavishya Shetty | Last Updated : Aug 17, 2022, 12:00 PM IST
    • ಕೆಲಸಗಾರರನ್ನು ಒಂದು ಬಾರಿ ತಮ್ಮ ಉದ್ಯೋಗ ಮತ್ತು ಸಂಬಳದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡುತ್ತದೆ
    • ಅತಿಯಾದ ಕೆಲಸಗಾರರು ಎಂದರೆ ನೀಡಿದ ಕೆಲಸಕ್ಕಿಂತ ಹೆಚ್ಚಿನದನ್ನು ಮಾಡುವವರು
    • ಧನಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ಕ್ವೈಟ್ ಕ್ವಿಟಿಂಗ್ ಟ್ರೆಂಡ್ ತರಲಾಗಿದೆ
ನಿಮಗಿದು ಗೊತ್ತೇ? ಇಲ್ಲಿನ ಜನರು ಸಂತೋಷವಾಗಿರಲು ಉದ್ಯೋಗಕ್ಕೆ ರಾಜೀನಾಮೆ ನೀಡುತ್ತಾರಂತೆ!  title=
Quiet Quitting

ಕೊಂಚ ವಿಚಿತ್ರವಾದರೂ ಉತ್ತಮ ಚಿಂತನೆ ಹೊಂದಿರುವ ಈ ಟ್ರೆಂಡ್ ಪ್ರಪಂಚದಾದ್ಯಂತ ಜನರನ್ನು ಅಚ್ಚರಿಗೊಳಿಸಿದೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟಿಕ್‌ಟಾಕ್‌ನಲ್ಲಿ ಈ ಟ್ರೆಂಡ್ ಪ್ರಾರಂಭವಾಗಿದೆ. ಇದರಲ್ಲಿ ನಿರಂತರವಾಗಿ ಸಮರ್ಪಣಾ ಮನೋಭಾವದಿಂದ ಮತ್ತು ತಮ್ಮ ಕೆಲಸದಲ್ಲಿ ಹೋರಾಡುವ ಜನರು ಸ್ವಲ್ಪ ನಿಧಾನವಾಗಬೇಕು ಎಂದು ಹೇಳಲಾಗುತ್ತಿದೆ. ಇಷ್ಟೇ ಅಲ್ಲ, ಜನರು ತಮ್ಮ ಕೆಲಸವನ್ನು ಮರು ಮೌಲ್ಯಮಾಪನ ಮಾಡಬೇಕು ಎಂದು ಸಲಹೆ ನೀಡಲಾಗುತ್ತಿದೆ. ಸದ್ಯ ಈ ಟ್ರೆಂಡಿಂಗ್ ನ್ನು ಕ್ವೈಟ್ ಕ್ವಿಟಿಂಗ್ ಎಂದು ಕರೆಯಲಾಗುತ್ತಿದೆ.

ಇದನ್ನೂ ಓದಿ: ತೂಕ ನಷ್ಟಕ್ಕೆ ನಿಜವಾಗಿಯೂ ಸಹಕಾರಿ ಆಗಿದೆಯೇ ಮೊಟ್ಟೆ!

ಕುಟುಂಬದ ಜವಾಬ್ದಾರಿಗಳು, ಹೆಚ್ಚುತ್ತಿರುವ ಜೀವನ ವೆಚ್ಚ, ಭಾರೀ ಬಿಲ್‌ಗಳು ಮತ್ತು ಆರ್ಥಿಕ ಹಿಂಜರಿತಗಳು ಸಾಮಾನ್ಯವಾಗಿ ಕೆಲಸಗಾರರನ್ನು ಒಂದು ಬಾರಿ ತಮ್ಮ ಉದ್ಯೋಗ ಮತ್ತು ಸಂಬಳದ ಬಗ್ಗೆ ಪ್ರಶ್ನೆ ಮಾಡುವಂತೆ ಮಾಡುತ್ತದೆ.

ಅತಿಯಾದ ಕೆಲಸಗಾರರು ಎಂದರೆ ನೀಡಿದ ಕೆಲಸಕ್ಕಿಂತ ಹೆಚ್ಚಿನದನ್ನು ಮಾಡುವವರು. ಅದು ಒತ್ತಡದಲ್ಲಾದರೂ ಸಹ, ಇಚ್ಚೆಯಿಂದಲಾದರೂ ಸರಿ. ಅವರನ್ನು ಅತಿಯಾದ ಕೆಲಸಗಾರರು ಎಂದು ಕರೆಯುತ್ತಾರೆ. ಇದು ಒಂದು ಸಮಯದಲ್ಲಿ ನಮ್ಮ ಸಂಕಷ್ಟಕ್ಕೆ ಕಾರಣವಾಗುತ್ತದೆ. ಹೀಗಾಗಿ ಜನರಿಗೆ ಕಚೇರಿ ಸಂಸ್ಕೃತಿಯಿಂದ ಧನಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಈ ಕ್ವೈಟ್ ಕ್ವಿಟಿಂಗ್ ಟ್ರೆಂಡ್ ತರಲಾಗಿದೆ. ಇದು ಹೇಗೆಂದರೆ, ಬಾಸ್ ಅನ್ನು ಮೆಚ್ಚಿಸಲು ಮಾಡುವ ಕೆಲಸವನ್ನು ನಿಲ್ಲಿಸಿ, ನಿಮಗೆ ಎಷ್ಟು ಸಂಬಳ ನೀಡುತ್ತಾರೋ ಅದಕ್ಕೆ ಪೂರಕವಾದ ಕೆಲಸ ಮಾತ್ರ ಮಾಡಿ ಎಂಬುದನ್ನು ಸೂಚಿಸುತ್ತದೆ. ಹೆಚ್ಚೇನು ಪ್ರತಿಫಲ ಬಯಸದೆ, ನಿಧಾನವಾಗಿ ಕೊಟ್ಟ ಕೆಲಸ ಪೂರ್ಣಗೊಳಿಸುವ ಪ್ರವೃತ್ತಿ ಬೆಳೆಸುವುದನ್ನು ಈ ಟ್ರೆಂಡಿಂಗ್ ಸೂಚಿಸುತ್ತದೆ.

ಅತಿಯಾದ ಕೆಲಸದ ಹೊರೆಯಿಂದ ಮಾನಸಿಕ ಆರೋಗ್ಯ ಹದಗೆಡುತ್ತಿದೆ. ಇನ್ನು ಕ್ವೈಟ್ ಕ್ವಿಟಿಂಗ್ ಟ್ರೆಂಡ್ 2021ರಲ್ಲೂ ಇತ್ತು.  ಆ ಸಂದರ್ಭದಲ್ಲಿ ಅನೇಕರು ಮನಸ್ಸಿನ ನೆಮ್ಮದಿ ಕಾಪಾಡಿಕೊಳ್ಳಲು ಮಹಾ ರಾಜೀನಾಮೆಯನ್ನೇ ನೀಡಿದರು. ಅಲ್ಲಿ ಉದ್ಯೋಗ ನಷ್ಟಗಳ ಸಂಖ್ಯೆಯು ನವೆಂಬರ್ 2021 ರಲ್ಲಿ 20 ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಗ್ರೇಟ್ ರಾಜೀನಾಮೆಯನ್ನು ಬಿಗ್ ಕ್ವೈಟ್ ಎಂದೂ ಕರೆಯುತ್ತಾರೆ. 2021 ರ ಆರಂಭದಲ್ಲಿ ಪ್ರಾರಂಭವಾದ ಉದ್ಯೋಗಿಗಳು ತಮ್ಮ ಉದ್ಯೋಗಗಳಿಗೆ ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದ ಪ್ರವೃತ್ತಿ ಆರ್ಥಿಕತೆಯ ಮೇಲೂ ಪ್ರಭಾವ ಬೀರಿತು, ಸಂಭವನೀಯ ಕಾರಣಗಳಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ದೀರ್ಘಾವಧಿಯ ಉದ್ಯೋಗಗಳ ಬಗ್ಗೆ ಅಸಮಾಧಾನ ಮತ್ತು COVID ಸಾಂಕ್ರಾಮಿಕ ಸಮಯದಲ್ಲಿ ವೇತನವನ್ನು ತಡೆಹಿಡಿಯುವುದು ಸೇರಿ ಉದ್ಯೋಗಸ್ಥರು ಸ್ವಯಂ ಪ್ರೇರಿತರಾಗಿ ಕೆಲಸವನ್ನು ತ್ಯಜಿಸಿದ್ದರು.

ಈ ಪ್ರವೃತ್ತಿಯು ಸೋಶಿಯಲ್ ಮೀಡಿಯಾ ಬಳಕೆದಾರ @zaidleppelin ನಿಂದ ಪ್ರಾರಂಭವಾಯಿತು. ಅವರು ತಮ್ಮ ರಾಜೀನಾಮೆ ನೀಡುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಖತ್ ಟ್ರೆಂಡಿಂಗ್ ನ್ನು ಕ್ರಿಯೇಟ್ ಮಾಡಿದೆ.

ಇನ್ನು ಕ್ವೈಟ್ ಕ್ವಿಟಿಂಗ್ ಎಂಬ ಪದವನ್ನು ಹೇಗೆ ಸೃಷ್ಟಿಸಲಾಯಿತು ಎಂಬುದನ್ನು ಅವರು ವೀಡಿಯೊದಲ್ಲಿ ವಿವರಿಸಿದ್ದಾರೆ. ಅವರು ವೀಡಿಯೊದಲ್ಲಿ ಬರೆದಿದ್ದಾರೆ, 'ಕೆಲಸವು ನಿಮ್ಮ ಜೀವನವಲ್ಲ. ನಿಮ್ಮ ಉತ್ಪಾದಕ ಔಟ್‌ಪುಟ್‌ನಿಂದ ನಿಮ್ಮ ಮೌಲ್ಯವನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ಈ ಒಂದು ವಿಡಿಯೋ ಯುವಜನರನ್ನು ಎಷ್ಟರ ಮಟ್ಟಿಗೆ ಪ್ರೇರೇಪಿಸಿತ್ತು ಎಂದರೆ ಅಂದಿನಿಂದ ಸಾವಿರಾರು ಇತರ ಟಿಕ್‌ ಟಾಕರ್ ಗಳು ತಮ್ಮದೇ ಆದ ರಾಜೀನಾಮೆ ನೀಡುವ ವೀಡಿಯೊಗಳನ್ನು ಶೇರ್ ಮಾಡಿಕೊಂಡಿದ್ದರು. 

ಇದನ್ನೂ ಓದಿ: ಭಾರತಕ್ಕೆ ಮತ್ತೆ ಕಾಲಿಡಲಿದೆ BGMI! ಹೊಸ ವರದಿಯಲ್ಲಿ ಮಾಹಿತಿ ಬಹಿರಂಗ

ಇದೀಗ ಅನೇಕ ಬಳಕೆದಾರರು 'ಆರೋಗ್ಯಕರ ಕೆಲಸ' ಎಂಬ ಟ್ರೆಂಡ್‌ ಬಗ್ಗೆ ಮಾತನಾಡುತ್ತಿದ್ದಾರೆ. ಉದಾಹರಣೆಗೆ ಸಂಜೆ 5 ಗಂಟೆ ಬಳಿಕ ಕಚೇರಿಯಿಂದ ಹೊರಹೋಗುವುದು, ಕೆಲಸದ ಸಮಯದ ನಂತರ ಇಮೇಲ್‌ಗಳು ಮತ್ತು ಸಂದೇಶಗಳಿಗೆ ಪ್ರತಿಕ್ರಿಯಿಸದಿರುವುದು, ರಜಾದಿನಗಳಲ್ಲಿ ಕೆಲಸ ಮಾಡದಿರುವುದು ಹೀಗೆ. ಈ ಟ್ರೆಂಡ್ ಈ ಸಮಯದಲ್ಲಿ ಸಾಕಷ್ಟು ಜನಪ್ರಿಯವಾಗಿದ್ದರೂ, ಜನರು ತಮ್ಮ ಉದ್ಯೋಗವನ್ನು ತೊರೆಯುವ ಪರವಾಗಿಲ್ಲ ಎಂದು ಹಲವರು ಟೀಕಿಸಿದ್ದಾರೆ. ಎಲ್ಲಾ ವೃತ್ತಿಗಳು ಸಮಯ, ಕೆಲಸದ ನೀತಿ, ಸಂಬಂಧಗಳು ಮತ್ತು ಸಂಭಾವನೆಯಲ್ಲಿ ವಿಭಿನ್ನವಾಗಿರುವ ಕಾರಣ ಈ ಪ್ರವೃತ್ತಿಯು ತಪ್ಪುದಾರಿಗೆಳೆಯುತ್ತಿದೆ ಎಂದು ಇತರರು ಹೇಳಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News