Viral Video: ಗ್ರಾಮಕ್ಕೆ ರಸ್ತೆ-ವಿದ್ಯುತ್ ನೀಡುವಂತೆ ಜಿಲ್ಲಾಧಿಕಾರಿಗೆ ಪುಟ್ಟ ಬಾಲಕಿಯ ಮನವಿ

ಈ ಪುಟಾಣಿ ಬಾಲಕಿ ತಮ್ಮ ಗ್ರಾಮಕ್ಕೆ ರಸ್ತೆ ಮತ್ತು ವಿದ್ಯುತ್ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ.

Written by - Puttaraj K Alur | Last Updated : Aug 8, 2022, 04:22 PM IST
  • ತಮ್ಮ ಗ್ರಾಮಕ್ಕೆ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಪುಟ್ಟ ಬಾಲಕಿಯ ಮನವಿ
  • ಜಿಲ್ಲಾಧಿಕಾರಿಗೆ ಮನವಿ ಮಾಡಿದ ಶಿವಮೊಗ್ಗದ ಸಾಗರ ತಾಲೂಕಿನ ಉರುಳುಗಲ್ಲು ಗ್ರಾಮದ ಬಾಲಕಿ
  • 5 ವರ್ಷದ ಬಾಲಕಿ ಸಾನ್ವಿ ಮನವಿ ಮಾಡಿರುವ ವಿಡಿಯೋ ವೈರಲ್ ಆಗಿದೆ
Viral Video: ಗ್ರಾಮಕ್ಕೆ ರಸ್ತೆ-ವಿದ್ಯುತ್ ನೀಡುವಂತೆ ಜಿಲ್ಲಾಧಿಕಾರಿಗೆ ಪುಟ್ಟ ಬಾಲಕಿಯ ಮನವಿ title=
ರಸ್ತೆ & ವಿದ್ಯುತ್‍ಗಾಗಿ ಪುಟ್ಟ ಬಾಲಕಿಯ ಮನವಿ

ಶಿವಮೊಗ್ಗ: ತಮ್ಮ ಗ್ರಾಮಕ್ಕೆ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ನೀಡುವಂತೆ ಪುಟ್ಟ ಬಾಲಕಿಯೊಬ್ಬಳು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾಳೆ. ಶಿವಮೊಗ್ಗದ ಸಾಗರ ತಾಲೂಕಿನ ಕಾರ್ಗಲ್ ಬಳಿಯ ಉರುಳುಗಲ್ಲು ಗ್ರಾಮದ ಬಾಲಕಿ ಸಾನ್ವಿ ಡಿಸಿಗೆ ಮನವಿ ಮಾಡಿ ಗಮನ ಸೆಳೆದಿದ್ದಾಳೆ.

ಅಂಗನವಾಡಿಗೆ ಹೋಗಿ ಬರಲು ರಸ್ತೆ ಸಂಪರ್ಕ ಕಲ್ಪಿಸುವಂತೆ 5 ವರ್ಷದ ಬಾಲಕಿ ಸಾನ್ವಿ ಮನವಿ ಮಾಡಿಕೊಂಡಿದ್ದಾಳೆ. ಶಿವಮೊಗ್ಗದ ಕುಗ್ರಾಮ ವಾಗಿರುವ ಕಾರ್ಗಲ್ ನ ಉರುಳುಗಲ್ಲುವಿನಲ್ಲಿ ರಸ್ತೆ ಸಂಪರ್ಕ ಹಾಗೂ ವಿದ್ಯುತ್ ಇಲ್ಲದೇ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಇದನ್ನೂ ಓದಿ: 48 ಗಂಟೆಗಳಲ್ಲಿ ಬದಲಾಗಲಿದೆ ಬಿಹಾರದ ರಾಜಕೀಯ ಚಿತ್ರಣ ! ಮುರಿದು ಬೀಳುವುದೇ ಬಿಜೆಪಿ-ಜೆಡಿಯು ಮೈತ್ರಿ ?

ತಮ್ಮ ಗ್ರಾಮಕ್ಕೆ ರಸ್ತೆ ಹಾಗೂ ವಿದ್ಯುತ್ ಸೌಲಭ್ಯ ಕಲ್ಪಿಸುಂತೆ ಈ ಹಿಂದೆ ಸಹ ಗ್ರಾಮಸ್ಥರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು. ಕೆಲವು ದಿನಗಳ ಹಿಂದಷ್ಟೇ ರಸ್ತೆ ನಿರ್ಮಿಸಲು ಗ್ರಾಮಸ್ಥರೇ ಮುಂದಾಗಿದ್ದರು. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಕ್ಕೆ ಗ್ರಾಮಸ್ಥರ ಮೇಲೆ ಅರಣ್ಯ ಇಲಾಖೆಯ ಕೇಸ್ ಕೂಡ ಹಾಕಿತ್ತು.

.
 

ಈ ಹಿನ್ನೆಲೆ ಕೆಲ ದಿನಗಳ ಹಿಂದೆ ಸ್ಥಳೀಯರು ಅರಣ್ಯ ಸಿಬ್ಬಂದಿ ವರ್ತನೆ ವಿರೋಧಿಸಿ ಪಾದಯಾತ್ರೆ ಕೂಡ ಮಾಡಿದ್ದರು. ಈಗ ಈ ಪುಟಾಣಿ ಬಾಲಕಿ ತಮ್ಮ ಗ್ರಾಮಕ್ಕೆ ರಸ್ತೆ ಮತ್ತು ವಿದ್ಯುತ್ ಸೌಲಭ್ಯ ನೀಡುವಂತೆ ಜಿಲ್ಲಾಧಿಕಾರಿಗೆ ಮನವಿ ಮಾಡಿಕೊಂಡಿದ್ದಾಳೆ. ಅಂಗನವಾಡಿ 12 ಕಿ.ಮೀ ದೂರವಿರುವ ಕಾರಣ ರಸ್ತೆ ಮಾಡಿಕೊಡುವಂತೆ ಸಾನ್ವಿ ಮನವಿ ಮಾಡಿದ್ದಾಳೆ. ಸಾನ್ವಿಯ ಈ ವಿಡಿಯೋ ಸಾಮಾಜೀಕ ಜಾಲ ತಾಣಗಳಲ್ಲಿ ಸಖತ್ ವೈಲ್ ಆಗುತ್ತಿದೆ. ಪುಟ್ಟ ಬಾಲಕಿ ಮನವಿ ಮಾಡಿರುವ ವಿಡಿಯೋವನ್ನು ಸಾವಿರಾರು ಜನರು ವೀಕ್ಷಿಸಿದ್ದು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Petrol-Diesel Price: ರಾಜ್ಯದ ಈ ಜಿಲ್ಲೆಗಳಲ್ಲಿ ಇಂಧನ ಬೆಲೆ ಭಾರೀ ಇಳಿಕೆ: ದರ ವಿವರ ಹೀಗಿದೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News