Viral Video: ಪರಸ್ಪರ ತಬ್ಬಿಕೊಂಡು ಬೈಕ್‌ ಮೇಲೆ ಯುವ ಜೋಡಿಯ ರೊಮ್ಯಾನ್ಸ್!

Romancing in Bike: ಛತ್ತೀಸ್‌ಗಢದ ಜಶ್‌ಪುರದಲ್ಲಿ ಬೈಕ್‌ ಓಡಿಸುವಾಗ ಪರಸ್ಪರ ತಬ್ಬಿಕೊಂಡು ರೊಮ್ಯಾನ್ಸ್‌ ಮಾಡಿದ ಯುವ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, 500 ರೂ. ದಂಡ ಹಾಕಿದ್ದಾರೆ.

Written by - Puttaraj K Alur | Last Updated : May 14, 2024, 06:43 PM IST
  • ಪರಸ್ಪರ ತಬ್ಬಿಕೊಂಡು ಬೈಕ್‌ ಮೇಲೆ ಯುವ ಜೋಡಿಯ ರೊಮ್ಯಾನ್ಸ್
  • ಛತ್ತೀಸ್‌ಗಢದ ಜಶ್‌ಪುರದಲ್ಲಿ ನಡೆದಿರುವ ಘಟನೆಯ ವಿಡಿಯೋ ವೈರಲ್
  • ಬೈಕ್‌ ಮೇಲೆ ಸ್ಟಂಟ್‌ ಮಾಡುವವರಿಗೆ ಖಾಕಿಪಡೆಯಿಂದ ಖಡಕ್‌ ಎಚ್ಚರಿಕೆ
Viral Video: ಪರಸ್ಪರ ತಬ್ಬಿಕೊಂಡು ಬೈಕ್‌ ಮೇಲೆ ಯುವ ಜೋಡಿಯ ರೊಮ್ಯಾನ್ಸ್! title=
ಬೈಕ್‌ ಮೇಲೆ ರೊಮ್ಯಾನ್ಸ್!

ನವದೆಹಲಿ: ಪರಸ್ಪರ ತಬ್ಬಿಕೊಂಡು ಬೈಕ್‌ ಮೇಲೆ ಯುವ ಜೋಡಿಯೊಂದು ರೊಮ್ಯಾನ್ಸ್ ಮಾಡಿದೆ. ಛತ್ತೀಸ್‌ಗಢದ ಜಶ್‌ಪುರದಲ್ಲಿ ಈ ಘಟನೆ  ನಡೆದಿದ್ದು, ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ.   

ಬೈಕ್‌ ಓಡಿಸುವಾಗ ಪರಸ್ಪರ ತಬ್ಬಿಕೊಂಡು ರೊಮ್ಯಾನ್ಸ್‌ ಮಾಡಿದ ಯುವ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, 500 ರೂ. ದಂಡ ಹಾಕಿದ್ದಾರೆ. ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಯುವತಿಯು ಬೈಕ್ ಚಲಾಯಿಸುತ್ತಿರುವ ತನ್ನ ಪ್ರೇಮಿಯ ಎದುರಾಗಿ ಇಂಧನ ಟ್ಯಾಂಕ್ ಮೇಲೆ ಕುಳಿತಿದ್ದಾಳೆ. ಬೈಕ್ ಸವಾರಿ ವೇಳೆ ಆಕೆ ಆತನನ್ನು ಅಪ್ಪಿಕೊಂಡಿದ್ದಾಳೆ. 

ಇದನ್ನೂ ಓದಿ: ಶಸ್ತ್ರ ಚಿಕಿತ್ಸೆ ಮಾಡಿ ಹೊಟ್ಟೆಯಲ್ಲಿ ಹತ್ತಿ ಮರೆತ ವೈದ್ಯ

ಈ ವೇಳೆ ಅದೇ ರಸ್ತೆಯಲ್ಲಿ ತೆರಳುತ್ತಿದ್ದ ಜಶ್‌ಪುರದ ಪೊಲೀಸ್ ಅಧೀಕ್ಷಕ (SP) ಶಶಿ ಮೋಹನ್ ಸಿಂಗ್ ತಮ್ಮ ಕಾರಿನಿಂದ ನೋಡಿದ್ದು, ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್‌ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿರುವ ಅವರು, ನಡುರಸ್ತೆಯಲ್ಲಿ ಈ ರೀತಿ ಮಾಡುವುದು ಎಷ್ಟು ಸರಿ..? ಬೈಕ್‌ ಮೇಲೆ ರೊಮ್ಯಾನ್ಸ್‌ ಮಾಡಿದವರ ವಿರುದ್ಧ ಕ್ರಮ ಕೈಗೊಂಡಿದ್ದು, ಬೈಕ್‌ ಚಲಾಯಿಸುತ್ತಿದ್ದ ವಿನಯ್‌ ಎಂಬಾತನಿಗೆ 500 ರೂ. ದಂಡ ಹಾಕಲಾಗಿದೆ ಎಂದು ಹೇಳಿದ್ದಾರೆ. 

ಇನ್ನೂ ಜೋಡಿಯನ್ನು ವಿಚಾರಣೆ ನಡೆಸಿದಾಗ ಅವರಿಬ್ಬರೂ ಮಯಾಲಿ ಅಣೆಕಟ್ಟಿಗೆ ಭೇಟಿ ನೀಡಲು ಹೋಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇಂತಹ ಅಪಾಯಕಾರಿ ಸ್ಟಂಟ್‌ಗಳನ್ನು ಮಾಡಬೇಡಿ ಅಂತಾ ಪೊಲೀಸರು ಸಲಹೆ ನೀಡಿದ್ದು, ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸುವಂತೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪುಷ್ಯ ನಕ್ಷತ್ರ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಧಾನಿ ಮೋದಿಗೆ ಗೆಲುವಿನ ಸಾಧ್ಯತೆ ಎಷ್ಟಿದೆ ಗೊತ್ತಾ?

ಯಾರಾದರೂ ಇದೇ ರೀತಿಯ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಂತಾ ಪೊಲೀಸ್‌ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ಬೈಕ್‌ ಮೇಲೆ ಮೈಮರೆತು ರೊಮ್ಯಾನ್ಸ್‌ ಮಾಡಿದ ಜೋಡಿಯ ವರ್ತನೆಗೆ ಕಿಡಿಕಾರಿದ್ದಾರೆ. ಇಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಬೈಕ್‌ ಜಪ್ತಿ ಮಾಡಿ ದೊಡ್ಡ ಮೊತ್ತದ ದಂಡ ವಿಧಿಸಿ ಬುದ್ಧಿ ಕಲಿಸಬೇಕು ಅಂತಾ ಒತ್ತಾಯಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News