Viral Video: ಡಮ್ಮಿ ಲವ್ವಿಡವ್ವಿಯನ್ನು ಬೈಕ್ ಮೇಲೆ ಕೂರಿಸಿ ದಿಮಾಕಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಿಕೊಂಡ ಭೂಪ!

Viral Video: ಯುವಕನೊಬ್ಬ ತನ್ನ ಮೋಟಾರು ಸೈಕಲ್‌ನಲ್ಲಿ ಹುಡುಗಿಯ ಡಮ್ಮಿ ಪ್ರತಿಕೃತಿಯನ್ನು ಹೊತ್ತುಕೊಂಡು ನಗರದಾದ್ಯಂತ ಸುತ್ತಾಡಿದ್ದಾನೆ. ಪ್ರತಿಯೊಬ್ಬ ದಂಪತಿಗಳು ಈ ದಿನವನ್ನು ತಮ್ಮದೇ ಆದ ಶೈಲಿಯಲ್ಲಿ ಆಚರಿಸಿದ್ದಾರೆ. (Viral News In Kannada)  

Written by - Nitin Tabib | Last Updated : Feb 17, 2024, 09:21 PM IST
  • ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ @indorigram_ ಎಂಬ ಬಳಕೆದಾರರಿಂದ ಹಂಚಿಕೊಳ್ಳಲಾಗಿದ್ದು,
  • ಶೀರ್ಷಿಕೆಯಲ್ಲಿ - ಇದು ಇಂದೋರ್ ನಲ್ಲಿ ಮಾತ್ರ ಸಂಭವ ಎಂದು ಬರೆಯಲಾಗಿದೆ. ಈ ವೀಡಿಯೊ ಮಧ್ಯಪ್ರದೇಶದ ಇಂದೋರ್‌ನಿಂದ ಹೊರಹೊಮ್ಮಿದೆ
  • ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಈ ವೀಡಿಯೊ ಎಲ್ಲಿಂದ ಬಂದಿದೆ ಎಂಬುದನ್ನು ನಾವು ಖಚಿತಪಡಿಸುವುದಿಲ್ಲ.
Viral Video: ಡಮ್ಮಿ ಲವ್ವಿಡವ್ವಿಯನ್ನು ಬೈಕ್ ಮೇಲೆ ಕೂರಿಸಿ ದಿಮಾಕಿನಲ್ಲಿ ವ್ಯಾಲೆಂಟೈನ್ ಡೇ ಆಚರಿಸಿಕೊಂಡ ಭೂಪ! title=

Viral Video: ಪ್ರೇಮಿಗಳ ದಿನ ಪ್ರೇಮಿಗಳ ಪಾಲಿಗೆ ಅತಿ ದೊಡ್ಡ ದಿನ. ಪ್ರೇಮಿಗಳು ಈ ದಿನಕ್ಕಾಗಿ ಸಾಕಷ್ಟು ಕಾಯುತ್ತಾರೆ. ಪ್ರೇಮಿಗಳ ದಿನದಂದು, ಅನೇಕ ಜೋಡಿಗಳ ವೀಡಿಯೊಗಳು ಅಂತರ್ಜಾಲದಲ್ಲಿ ಹೊರಹೊಮ್ಮುತ್ತಿವೆ. ಈ ವೀಡಿಯೊಗಳಲ್ಲಿ ಕೆಲವು ವಿಡಿಯೋಗಳು ತುಂಬಾ ತಮಾಷೆಯಿಂದ ಕೂಡಿದ್ದರೆ, ಮತ್ತೆ ಕೆಲವು ವಿಡಿಯೋಗಳು ವಿವಾದಾತ್ಮಕವಾಗಿವೆ. ಏತನ್ಮಧ್ಯೆ ಅಂತಹುದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವೈರಲ್ ಆಗಿರುವ ಈ ವೀಡಿಯೋದಲ್ಲಿ ಯುವಕನೊಬ್ಬ ಪ್ರೇಮಿಗಳ ದಿನದಂದು ಬೈಕ್ ನಲ್ಲಿ ಡಮ್ಮಿ ಹುಡುಗಿಯೊಂದಿಗೆ ನಗರ ತುಂಬಾ ಸುತ್ತಾಡುತ್ತಿದ್ದಾನೆ. ವಿಡಿಯೋ ನೋಡಿದ ಜನ ಬೆಚ್ಚಿಬಿದ್ದಿದ್ದಾರೆ. (Viral News In Kannada)

ವೈರಲ್ ವಿಡಿಯೋದಲ್ಲಿ ಏನಿದೆ?
ಪ್ರೇಮಿಗಳ ದಿನವು ಪ್ರೇಮಿಗಳಿಗೆ ಅತ್ಯಂತ ವಿಶೇಷವಾದ ದಿನಗಳಲ್ಲಿ ಒಂದಾಗಿದೆ. ಪ್ರತಿಯೊಬ್ಬ ದಂಪತಿ ಜೋಡಿ ಈ ದಿನವನ್ನು ತನ್ನದೇ ಆದ ಶೈಲಿಯಲ್ಲಿ ಈ ದಿನವನ್ನು ಆಚರಿಸುತ್ತದೆ. ಆದರೆ ಗೆಳತಿ ಇಲ್ಲದವರಿಗೆ ಈ ದಿನ ಗರ್ಲ್ ಫ್ರೆಂಡ್ ಇಲ್ಲದ ದುಃಖವೇ ಬೇರೆ. ಈ ನಡುವೆ ಅಂತರ್ಜಾಲದಲ್ಲಿ ವಿಡಿಯೋವೊಂದು ಹರಿದಾಡುತ್ತಿದ್ದು. ಯುವಕನೊಬ್ಬ ತನ್ನ ಮೋಟಾರ್‌ಸೈಕಲ್‌ನಲ್ಲಿ ಹುಡುಗಿಯ ಡಮ್ಮಿ ಪ್ರತಿಕೃತಿಯನ್ನು ಹೊತ್ತುಕೊಂಡು ನಗರದಾದ್ಯಂತ ಸುತ್ತಾಡುತ್ತಿರುವುದನ್ನು ನೀವು ವೀಡಿಯೊದಲ್ಲಿ ನೋಡಬಹುದು. ಈ ಡಮ್ಮಿ ಮನುಷ್ಯಾಕೃತಿಯನ್ನು ಮೊದಲ ನೋಟಕ್ಕೆ ನೋಡಿದರೆ, ಇದು ಹುಡುಗಿ ಎಂದು ನೀವು ಭಾವಿಸುತ್ತೀರಿ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅದು ಹುಡುಗಿಯ ಡಮ್ಮಿ ಪ್ರತಿಮೆ ಎಂಬುದು ನಿಮಗೆ ನಂತರ ತಿಳಿಯುತ್ತದೆ. ವೀಡಿಯೊದಲ್ಲಿ, ಒಂದು ಹಂತದಲ್ಲಿ ಯುವಕ 'ಹ್ಯಾಪಿ ವ್ಯಾಲೆಂಟೈನ್ಸ್ ಡೇ ಬಾಬು' ಎಂದು ಹೇಳುತ್ತಿರುವುದನ್ನು ಸಹ ನೀವು ಕೇಳಬಹುದು. ಈ ಯುವಕನ ಕೃತ್ಯವನ್ನು ಕಂಡು ರಸ್ತೆಯಲ್ಲಿ ಸಾಗುತ್ತಿದ್ದ ಪಾದಚಾರಿಗಳು ಬೆಚ್ಚಿ ಬಿದ್ದಿದ್ದು, ಕೆಲವರು ನಗುತ್ತಿರುವ ದೃಶ್ಯವೂ ಕಂಡು ಬಂದಿದೆ.

 ವಿಡಿಯೋ ನೋಡಿದ ಜನರು ಏನೆನ್ನುತ್ತಿದ್ದಾರೆ
ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ Instagram ನಲ್ಲಿ @indorigram_ ಎಂಬ ಬಳಕೆದಾರರಿಂದ ಹಂಚಿಕೊಳ್ಳಲಾಗಿದ್ದು, ಶೀರ್ಷಿಕೆಯಲ್ಲಿ  - ಇದು ಇಂದೋರ್ ನಲ್ಲಿ ಮಾತ್ರ ಸಂಭವ ಎಂದು ಬರೆಯಲಾಗಿದೆ. ಈ ವೀಡಿಯೊ ಮಧ್ಯಪ್ರದೇಶದ ಇಂದೋರ್‌ನಿಂದ ಹೊರಹೊಮ್ಮಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಆದರೆ ಈ ವೀಡಿಯೊ ಎಲ್ಲಿಂದ ಬಂದಿದೆ ಎಂಬುದನ್ನು  ನಾವು ಖಚಿತಪಡಿಸುವುದಿಲ್ಲ. ವೀಡಿಯೊವನ್ನು ವೀಕ್ಷಿಸಿದ ನಂತರ, ವಿಡಿಯೋಗೆ ಪ್ರತಿಕ್ರಿಯಿಸಿದ ಓರ್ವ ಬಳಕೆದಾರ- ಹೇ ಬ್ರೋ, ನಿಶ್ಚಿಂತೆಯಿಂದಿರು ಎಂದು ಹೇಳಿದ್ದಾರೆ. ಮತ್ತೊಬ್ಬರು 'ಸೋ ಸ್ವೀಟ್' ಎಂದು ಬರೆದಿದ್ದಾರೆ. ಇದುವರೆಗೆ ಲಕ್ಷಾಂತರ ಜನರು ಈ ವಿಡಿಯೋವನ್ನು ವೀಕ್ಷಿಸಿದ್ದು, ಸಾಮಿರಾರು ಜನ ಲೈಕ್ ಮಾಡಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News