Viral Video: ಮದುವೆ ಮಂಟಪದಲ್ಲಿ ʼವರʼನಿಗಾಗಿ ಯುವತಿಯರ ಮಾರಾಮಾರಿ..!

Wedding Viral Video: ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿ ನಡೆದಿದೆ. ಈ ಫೈಟ್‌ ಯಾವ WWFಗೂ ಕಡಿಮೆಯಿಲ್ಲ.

Written by - Puttaraj K Alur | Last Updated : May 17, 2024, 05:41 PM IST
  • ಮದುವೆ ಮಂಟಪದಲ್ಲಿ ವರನಿಗಾಗಿ ಯುವತಿಯರ ಮಾರಾಮಾರಿ
  • ವಧು-ಪ್ರೇಯಸಿ ನಡುವಿನ ಫೈಟ್‌ನಿಂದ ಕಂಗಾಲಾದ ವರ
  • ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಸಖತ್‌ ವೈರಲ್‌
Viral Video: ಮದುವೆ ಮಂಟಪದಲ್ಲಿ ʼವರʼನಿಗಾಗಿ ಯುವತಿಯರ ಮಾರಾಮಾರಿ..! title=
ವರನಿಗಾಗಿ ಯುವತಿಯರ ಮಾರಾಮಾರಿ!

ನವದೆಹಲಿ: ಮದುವೆ ಅಂದರೆ ಅಲ್ಲಿ ಸಡಗರ-ಸಂಭ್ರಮಕ್ಕೆ ಕೊರತೆಯಿರುವುದಿಲ್ಲ. ಬಂಧು-ಬಳಗದವರು, ಸ್ನೇಹಿತರು ಸಂಭ್ರಮದಿಂದ ಮದುವೆ ಸಂಭ್ರಮದಲ್ಲಿರುತ್ತಾರೆ. ಆದರೆ ಕೆಲವು ಸಲ ಯಡವಟ್ಟುಗಳಾಗಿಬಿಡುತ್ತವೆ. ಊಟಕ್ಕೆ ಸ್ವೀಟ್‌ ಇಲ್ಲ ಅಂತಾ, ಬಾಡೂಟ ಇಲ್ಲ ಅಂತಾ, ಕಲ್ಯಾಣ ಮಂಟಪ ಸರಿ ಇಲ್ಲ ಅಂತಾ ಹೀಗೆ ವಿವಿಧ ಕಾರಣಗಳಿಗೆ ಮದುವೆಗಳು ಕ್ಯಾನಲ್ಸ್‌ ಆಗಿವೆ. ಕೆಲವು ಸರಿ ಮದುವೆಯಾಗುತ್ತಿದ್ದ ವೇಳೆ ಲವರ್‌ ಎಂಟ್ರಿಯಾಗಿ ದೊಡ್ಡ ಪಜೀತಿ ಉಂಟಾಗಿರುವ ನಿದರ್ಶನಗಳು ಇವೆ. ಅದರಂತೆ ಇಲ್ಲೊಂದು ಮದುವೆ ಸ್ಟೋರಿ ಯಾವುದೇ ಬಾಲಿವುಡ್‌ ಸಿನಿಮಾ ಕಥೆಗೂ ಕಮ್ಮಿ ಇಲ್ಲ. 

ಸಿನಿಮಾಗಳಲ್ಲಿ ಮಾತ್ರ ನೀವು ತ್ರಿಕೋನ ಪ್ರೇಮಕಥೆ ನೋಡಿರುತ್ತೀರಿ. ಆದರೆ ರಿಯಲ್‌ ಲೈಫ್‌ನಲ್ಲಿಯೂ ಈ ರೀತಿಯ ಘಟನೆಗಳು ನಡೆಯುತ್ತವೆ. ಇದಕ್ಕೆ ನಿದರ್ಶನವೇ ಒಬ್ಬನಿಗಾಗಿ ಇಬ್ಬರು ಮಹಿಳೆಯರು ಪರಸ್ಪರ ಹೊಡೆದಾಡಿಕೊಂಡಿರುವುದು. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. 

ಇದನ್ನೂ ಓದಿ: Chardham Yatra : ಮೇ 31ರವರೆಗೆ VIP ದರ್ಶನಕ್ಕಿಲ್ಲ ಅವಕಾಶ, ವಿಡಿಯೋಗ್ರಫಿ ನಿಷೇಧ!

ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಮದುವೆ ಮಂಟಪದಲ್ಲಿ ವರನಿಗಾಗಿ ಇಬ್ಬರು ಯುವತಿಯರ ನಡುವೆ ಮಾರಾಮಾರಿ ನಡೆದಿದೆ. ಈ ಫೈಟ್‌ ಯಾವ WWFಗೂ ಕಡಿಮೆಯಿಲ್ಲ. ಈ ವಿಡಿಯೋ ನೋಡಿದೆ ಸಾವಿರಾರು ಜನರು ಇಬ್ಬರು ಯುವತಿಯಿಂದ ಪಜೀತಿಗೆ ಸಿಕ್ಕ ವರನ ಹ್ಯಾಪ್‌ ಮೋರೆ ಕಂಡು ಹೊಟ್ಟೆ ಹುಣ್ಣಾಗುವಂತೆ ನಕ್ಕು ನಕ್ಕು ಸುಸ್ತಾಗಿದ್ದಾರೆ.  

ಅಂದಹಾಗೆ ಈ ಘಟನೆ ಎಲ್ಲಿ ನಡೆದಿದೆ ಅನ್ನೋದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅನಿತಾ ಸುರೇಶ್‌ ಶರ್ಮಾ ಎಂಬುವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಇಬ್ಬರು ಯುವತಿಯರು ವೇದಿಕೆಯಲ್ಲಿ ಯುವಕನಿಗಾಗಿ ಮಾರಾಮಾರಿ ನಡೆಸಿದ್ದಾರೆ. ಇಲ್ಲಿ ಮಧು ಮತ್ತು ವರನ ಪ್ರೇಯಸಿ ನಡುವೆ ಸಖತ್‌ ಫೈಟ್‌ ನಡೆದಿದೆ. ಒಬ್ಬರನೊಬ್ಬರು ಬೈದಾಡಿಕೊಂಡು ಇಬ್ಬರು ಜುಟ್ಟು ಹಿಡಿದು ಎಳೆದಾಡಿ ಹೊಡೆದಾಡಿಕೊಂಡಿದ್ದಾರೆ. ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದು, ವಿವಿಧ ರೀತಿಯಲ್ಲಿ ಫನ್ನಿ ಫನ್ನಿಯಾಗಿ ಕಾಮೆಂಟ್‌ ಮಾಡಿದ್ದಾರೆ. 

ಇದನ್ನೂ ಓದಿ: ರಂಗೇರಿದ ರಾಯ್‌ಬರೇಲಿ ಲೋಕಸಭೆ ಚುನಾವಣೆ ಅಖಾಡ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News