ಟೇಕ್ ‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಳೆದುಕೊಂಡ ಶ್ರೀವಿಜಯ ಏರ್ ವಿಮಾನ

ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಶನಿವಾರ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಶ್ರೀವಿಜಯ ಏರ್ ವಿಮಾನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Last Updated : Jan 9, 2021, 04:39 PM IST
  • 10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಹಾರಾಡುವಾಗ ಸಂಪರ್ಕ ಕಳೆದುಕೊಂಡಿದೆ ಎಂದು ಫ್ಲೈಟ್ ಟ್ರ್ಯಾಕರ್ ವೆಬ್‌ಸೈಟ್ ಫ್ಲೈಟ್ ರಾಡಾರ್24 ವರದಿ ಮಾಡಿದೆ.
  • ವಿಮಾನವು ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಹೊರಟಿತು.ಅದು ಪಶ್ಚಿಮ ಕಾಲಿಮಂಟನ್‌ನ ಪ್ರಾಂತೀಯ ರಾಜಧಾನಿಯಾದ ಪೊಂಟಿಯಾನಕ್‌ಗೆ ಹೋಗುತ್ತಿತ್ತು ಎನ್ನಲಾಗಿದೆ.
ಟೇಕ್ ‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಸಂಪರ್ಕ ಕಳೆದುಕೊಂಡ ಶ್ರೀವಿಜಯ ಏರ್ ವಿಮಾನ title=
Source: Markus Mainka/picture alliance

ನವದೆಹಲಿ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಶನಿವಾರ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಶ್ರೀವಿಜಯ ಏರ್ ವಿಮಾನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಫ್ಲೈಟ್ ಟ್ರ್ಯಾಕಿಂಗ್ ಕಳೆದುಕೊಂಡ ನಂತರ ಜಕಾರ್ತಾದ ಉತ್ತರಕ್ಕೆ ಕರಾವಳಿಯಲ್ಲಿ ಕೊನೆಗೊಳ್ಳುವ ಹಾರಾಟದ ಮಾರ್ಗವನ್ನು ತೋರಿಸಿದೆ. ವಿಮಾನವು ಒಂದು ನಿಮಿಷಕ್ಕಿಂತ ಕಡಿಮೆ ಅವಧಿಯಲ್ಲಿ 10,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಹಾರಾಡುವಾಗ ಸಂಪರ್ಕ ಕಳೆದುಕೊಂಡಿದೆ ಎಂದು ಫ್ಲೈಟ್ ಟ್ರ್ಯಾಕರ್ ವೆಬ್‌ಸೈಟ್ ಫ್ಲೈಟ್ ರಾಡಾರ್ 24 ವರದಿ ಮಾಡಿದೆ.

ವಿಮಾನವು ಸೂಕರ್ನೊ-ಹಟ್ಟಾ ವಿಮಾನ ನಿಲ್ದಾಣದಿಂದ ಹೊರಟಿತು.ಅದು ಪಶ್ಚಿಮ ಕಾಲಿಮಂಟನ್‌ನ ಪ್ರಾಂತೀಯ ರಾಜಧಾನಿಯಾದ ಪೊಂಟಿಯಾನಕ್‌ಗೆ ಹೋಗುತ್ತಿತ್ತು ಎನ್ನಲಾಗಿದೆ.ವಿಮಾನವು ಬೋಯಿಂಗ್ 737-500 ಎಂದು ವರದಿಯಾಗಿದೆ ಎಂದು ಇಂಡೋನೇಷ್ಯಾದ ಸುದ್ದಿವಾಹಿನಿಯ ಸಿಂಡೊನ್ಯೂಸ್ ವರದಿ ಮಾಡಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News