ಅಫ್ಘಾನಿಸ್ತಾನದಲ್ಲಿ ಭಾರಿ ಸ್ಪೋಟ, 40 ಸಾವು 140 ಕ್ಕೂ ಹೆಚ್ಚು ಜನರಿಗೆ ಗಾಯ

     

Last Updated : Jan 27, 2018, 04:27 PM IST
ಅಫ್ಘಾನಿಸ್ತಾನದಲ್ಲಿ ಭಾರಿ ಸ್ಪೋಟ, 40 ಸಾವು 140 ಕ್ಕೂ ಹೆಚ್ಚು ಜನರಿಗೆ ಗಾಯ  title=
ಸಾಂಧರ್ಭಿಕ ಚಿತ್ರ

ಕಾಬೂಲ್ :ಶನಿವಾರದಂದು ಇಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ  ಕನಿಷ್ಠ 40 ಜನರು ಮೃತಪಟ್ಟು,140 ಮಂದಿ ಗಾಯಗೊಂಡಿದ್ದಾರೆ. ಈ ಸ್ಪೋಟದ ಹೊಣೆಯನ್ನು ತಾಲಿಬಾನ್ ಉಗ್ರರು ಹೊತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾಂಬ್ ಸ್ಪೋಟದ ನಂತರ ಹತ್ತಿರದ ಕಟ್ಟಡಗಳು ಕಿಡಿಗಳು ಸ್ಪೋಟದ ತೀವ್ರತೆಗೆ  ಅಲುಗಾಡಿವೆ ಎಂದು ಸ್ಥಳಿಯರು ತಿಳಿಸಿದ್ದಾರೆ. ಈ ಬಾಂಬ್ ಸ್ಫೋಟದ ನಂತರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಪ್ರಮಾಣದ ಹೋಗೆ ಬರುತ್ತಿರುವ ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಅಘಾನಿಸ್ತಾನದಲ್ಲಿನ ಆಸ್ಪತ್ರೆಯಲ್ಲಿ ತುರ್ತುಸ್ಥಿತಿ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇಟಲಿಯ ಡೆಜನ್ ಪ್ಯಾನಿಕ್ ಇದೊಂದು ಸಾರ್ವಜನಿಕ ಹತ್ಯಾಕಾಂಡ ಎಂದು ಹೇಳಿದ್ದಾರೆ. 

ಈ ಬಾಂಬ್ ಸ್ಪೋಟವು ಆಂತರಿಕ ಸಚಿವಾಲಯ, ಐರೋಪ್ಯ ಒಕ್ಕೂಟ ಮತ್ತು ಹೈ ಪೀಸ್ ಕೌನ್ಸಿಲ್, ಮತ್ತು ಕಾಬೂಲ್ ಪೋಲಿಸ್ ಪ್ರಧಾನ ಕಛೇರಿಗಳನ್ನು ಹೊಂದಿರುವ ನಗರದ ಮಧ್ಯಭಾಗದಲ್ಲಿ ಸಂಭವಿಸಿದೆ, ಎಂದು ಆಂತರಿಕ ಇಲಾಖೆಯ ಉಪ ವಕ್ತಾರ ನಸ್ರತ್ ರಹೀಮಿ ತಿಳಿಸಿದ್ದಾರೆ.

Trending News