ಆರ್ಟಿಕಲ್ 370 ರದ್ದು; ಭಾರತವನ್ನು ಬೆಂಬಲಿಸಿ ಫ್ರಾನ್ಸ್ ರಾಷ್ಟ್ರಪತಿ ಮ್ಯಾಕ್ರನ್ ಹೇಳಿದ್ದೇನು?

ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂದು ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೋನ್ ಹೇಳಿದ್ದಾರೆ.  

Last Updated : Aug 23, 2019, 08:36 AM IST
ಆರ್ಟಿಕಲ್ 370 ರದ್ದು; ಭಾರತವನ್ನು ಬೆಂಬಲಿಸಿ ಫ್ರಾನ್ಸ್ ರಾಷ್ಟ್ರಪತಿ ಮ್ಯಾಕ್ರನ್ ಹೇಳಿದ್ದೇನು? title=

ನವದೆಹಲಿ: ಜಿ -7 ಸಮ್ಮೇಳನಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಫ್ರಾನ್ಸ್‌ಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೋನ್ ನಡುವೆ ದ್ವಿಪಕ್ಷೀಯ ಸಭೆ ನಡೆಯಿತು. ಈ ಸಮಯದಲ್ಲಿ, ಫ್ರಾನ್ಸ್ ರಾಷ್ಟ್ರಪತಿ ಮ್ಯಾಕ್ರನ್ ಅವರು ಮೋದಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿರುವುದನ್ನು ಬೆಂಬಲಿಸಿದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ. ಕಾಶ್ಮೀರ ವಿಷಯದಲ್ಲಿ ಯಾವುದೇ ಮೂರನೇ ರಾಷ್ಟ್ರಗಳು ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ. ಅದಕ್ಕೆ ಅವಕಾಶ ನೀಡದಿರಿ ಎಂದು ಅವರು  ಪ್ರಧಾನಿ ಮೋದಿಯವರಿಗೆ ತಿಳಿಸಿದ್ದಾರೆ. 

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಭಯೋತ್ಪಾದನೆ ಹೋರಾಟದಲ್ಲಿ ಭಾರತದೊಂದಿಗೆ ನಿಂತಿರುವ ಬಗ್ಗೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಾತನಾಡಿದರು. ಭಯೋತ್ಪಾದನೆ ಹೋರಾಟದಲ್ಲಿ ಫ್ರಾನ್ಸ್ ಯಾವಾಗಲೂ ಭಾರತದೊಂದಿಗೆ ನಿಲ್ಲುತ್ತದೆ. ಭಾರತ ಮತ್ತು ಫ್ರಾನ್ಸ್ ಪ್ರತಿಯೊಂದು ಪರಿಸ್ಥಿತಿಯಲ್ಲೂ ಒಟ್ಟಾಗಿ ನಿಂತಿವೆ. ಈ ಸಮಯದಲ್ಲಿ ಭಾರತ ಮತ್ತು ಫ್ರಾನ್ಸ್ ಅವರ ಸ್ನೇಹ ಸಹೋದರತ್ವವನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಫ್ರಾನ್ಸ್ ರಾಷ್ಟ್ರಪತಿ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಡಿಜಿಟಲ್, ಸೈಬರ್ ಭದ್ರತೆ ಮತ್ತು ಆಫ್ರಿಕಾದಂತಹ ವಿಷಯಗಳ ಕುರಿತು ಪ್ರಧಾನಿ ಮೋದಿ ಅವರೊಂದಿಗೆ ಸಂವಾದ ನಡೆಸಿದ್ದೇವೆ ಎಂದು ಹೇಳಿದರು. ಈ ಎಲ್ಲ ವಿಷಯಗಳ ಬಗ್ಗೆ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು. 

ಪುಲ್ವಾಮಾ ದಾಳಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಸಂಭವಿಸಿದ ಭೀಕರ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಭಯೋತ್ಪಾದನೆ ಕುರಿತು ಉಭಯ ದೇಶಗಳು ಒಟ್ಟಾಗಿ ಕೆಲಸ ಮಾಡಲಿವೆ. ರಕ್ಷಣಾ ಕ್ಷೇತ್ರದಲ್ಲಿ ಉಭಯ ದೇಶಗಳ ನಡುವಿನ ಸಾಮರಸ್ಯವನ್ನು ನೋಡಿದಾಗ, ನಮಗೆ ತುಂಬಾ ಹೆಮ್ಮೆ ಇದೆ ಎಂದು ಅವರು ತಿಳಿಸಿದ್ದಾರೆ.

Trending News