ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೆರಿಕಾದ ವರದಿ ತಿರಸ್ಕರಿಸಿದ ಭಾರತ

 ಅಮೆರಿಕಾದ ಸ್ಟೇಟ್ ವಿಭಾಗ ಪ್ರಕಟಿಸಿದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ಭಾರತ ತಿರಸ್ಕರಿಸಿದೆ. ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಉಗ್ರಗಾಮಿ ಹಿಂದೂ ಗುಂಪುಗಳ ಜನಸಮೂಹ ದಾಳಿಗಳು ವರ್ಷಪೂರ್ತಿ ನಡೆದಿವೆ ಎಂದು ಉಲ್ಲೇಖಿಸಿರುವ ವರದಿಯನ್ನು ಭಾರತವು ಸಾರಾಸಗಾಟಾಗಿ ತಳ್ಳಿಹಾಕಿದೆ.

Last Updated : Jun 23, 2019, 12:01 PM IST
ಧಾರ್ಮಿಕ ಸ್ವಾತಂತ್ರ್ಯದ ಕುರಿತ ಅಮೆರಿಕಾದ ವರದಿ ತಿರಸ್ಕರಿಸಿದ ಭಾರತ  title=

ನವದೆಹಲಿ:  ಅಮೆರಿಕಾದ ಸ್ಟೇಟ್ ವಿಭಾಗ ಪ್ರಕಟಿಸಿದ ಧಾರ್ಮಿಕ ಸ್ವಾತಂತ್ರ್ಯದ ವರದಿಯನ್ನು ಭಾರತ ತಿರಸ್ಕರಿಸಿದೆ. ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಿಂಸಾತ್ಮಕ ಉಗ್ರಗಾಮಿ ಹಿಂದೂ ಗುಂಪುಗಳ ಜನಸಮೂಹ ದಾಳಿಗಳು ವರ್ಷಪೂರ್ತಿ ನಡೆದಿವೆ ಎಂದು ಉಲ್ಲೇಖಿಸಿರುವ ವರದಿಯನ್ನು ಭಾರತವು ಸಾರಾಸಗಾಟಾಗಿ ತಳ್ಳಿಹಾಕಿದೆ.

ಈಗ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ "ದೇಶದಲ್ಲಿನ ನಾಗರಿಕ ಹಕ್ಕುಗಳ ಸ್ಥಿತಿ ಕುರಿತಾಗಿ ಪ್ರಕಟಿಸಿರುವ ಈ ವಿದೇಶಿ ವರದಿಯಲ್ಲಿ ಭಾರತಕ್ಕೆ ಯಾವುದೇ ವಿಶ್ವಾಸಾರ್ಹತೆ ಕಾಣುತ್ತಿಲ್ಲ ಎಂದು ಹೇಳಿದರು. ಭಾರತಕ್ಕೆ ತನ್ನ ಜಾತ್ಯತೀತ ತತ್ವಗಳ ಬಗ್ಗೆ ಹೆಮ್ಮೆ ಇದೆ, ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಬಹುಸಂಖ್ಯಾತ ಸಮಾಜವಾಗಿ ಸಹಿಷ್ಣುತೆ ಮತ್ತು ಒಳಗೊಳ್ಳುವಿಕೆ ವಿಚಾರವಾಗಿ ಬಹಳ ಹಿಂದಿನಿಂದಲೂ ತನ್ನ ಬದ್ದತೆಯನ್ನು ಅದು ಹೊಂದಿದೆ. ಭಾರತೀಯ ಸಂವಿಧಾನವು ತನ್ನ ಅಲ್ಪಸಂಖ್ಯಾತ ಸಮುದಾಯಗಳು ಸೇರಿದಂತೆ ಎಲ್ಲಾ ನಾಗರಿಕರಿಗೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುತ್ತದೆ ಎಂದು ರವೀಶ್ ಕುಮಾರ್ ಹೇಳಿದರು. 

ಇನ್ನು ಮುಂದುವರೆದು 'ಭಾರತವು ರೋಮಾಂಚಕ ಪ್ರಜಾಪ್ರಭುತ್ವ ಎನ್ನುವುದನ್ನು ಎಂದು ವ್ಯಾಪಕವಾಗಿ ಒಪ್ಪಿಕೊಳ್ಳಲಾಗಿದೆ, ಇಲ್ಲಿನ ಸಂವಿಧಾನವು ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆ, ಪ್ರಜಾಪ್ರಭುತ್ವ ಆಡಳಿತ ಮತ್ತು ಕಾನೂನಿನ ನಿಯಮವು ಮೂಲಭೂತ ಹಕ್ಕುಗಳನ್ನು ಉತ್ತೇಜಿಸುತ್ತದೆ ಮತ್ತು ರಕ್ಷಿಸುತ್ತದೆ" ಎಂದು ಅವರು ಹೇಳಿದರು.

ಯುಎಸ್ ಸ್ಟೇಟ್ ವಿಭಾಗವು ತನ್ನ ವೈಬ್ ಸೈಟ್ ನಲ್ಲಿ ಲಭ್ಯವಿರುವ 'ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯವರದಿ- 2018' ರಲ್ಲಿ ಗೋ ಹತ್ಯೆ ದಾಳಿ ,ಕೊಲೆಗಳು, ಜನಸಮೂಹ ಹಿಂಸೆ ಮತ್ತು ಬೆದರಿಕೆಗಳು ಸೇರಿವೆ ಎಂದು ಅದು ಪ್ರಸ್ತಾಪಿಸಿದೆ.ಇನ್ನೊಂದೆಡೆಗೆ ಬಿಜೆಪಿ ಈ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಅದು ಆರೋಪಿಸಿದೆ.
 

Trending News