Video:ರಾಯಲ್ ನಡಿಗೆಯಿಂದಲೇ ಸಾಲು ಸಾಲು ಕಾರ್ ಗಳನ್ನು ನಿಲ್ಲಿಸಿದ ಸಿಂಹರಾಜ..!

ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸಿಂಹಗಳ ಹಿಂಡು ತನ್ನ ರಾಯಲ್ ನಡಿಗೆಯಿಂದ ಸಾಲು ಸಾಲು ಕಾರಗಳನ್ನು ನಿಲ್ಲಿಸುವಂತೆ ಮಾಡಿದೆ. 

Updated: Jan 11, 2019 , 05:06 PM IST
 Video:ರಾಯಲ್ ನಡಿಗೆಯಿಂದಲೇ ಸಾಲು ಸಾಲು ಕಾರ್ ಗಳನ್ನು ನಿಲ್ಲಿಸಿದ ಸಿಂಹರಾಜ..!

ನವದೆಹಲಿ: ಈಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಸಿಂಹಗಳ ಹಿಂಡು ತನ್ನ ರಾಯಲ್ ನಡಿಗೆಯಿಂದ ಸಾಲು ಸಾಲು ಕಾರಗಳನ್ನು ನಿಲ್ಲಿಸುವಂತೆ ಮಾಡಿದೆ. 

ಈಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಟ್ವೀಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋದಲ್ಲಿ ದಕ್ಷಿಣ ಆಫ್ರಿಕಾದಲ್ಲಿನ ಸರಾಸರಿ ಟ್ರಾಪಿಕ್ ಜಾಮ್ ಎಂದು ಬರೆದುಕೊಂಡಿದೆ.  

ಈ ವಿಡಿಯೋದಲ್ಲಿರುವ ರಸ್ತೆ ದಕ್ಷಿಣ ಆಫ್ರಿಕಾದಲ್ಲಿನ ಕ್ರುಗರ್ ನ್ಯಾಷನಲ್ ಪಾರ್ಕ್ ಎಂದು ತಿಳಿದು ಬಂದಿದೆ. ವಿಶೇಷವೆಂದರೆ ಈ ಅಭಯಾರಣ್ಯ ಸಿಂಹಗಳ ಸಫಾರಿಗೆ ಪ್ರಸಿದ್ದಿಯಾಗಿದೆ.ಈ ವಿಡಿಯೋ ನೋಡಿದ ಟ್ವಿಟ್ಟಿಗರು ಈಗ ಇದನ್ನು 12 ಸಾವಿರಕ್ಕೂ ಅಧಿಕ ಬಾರಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ನೋಡಿದಾಗ ಒಂದು ಕ್ಷಣ ನಾವು ಹಲವು ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೂ ಸಹಿತ  ಈ ರೀತಿಯ ಸಿಂಹಗಳ ಹಿಂಡಿನ ಹಿಂದೆ ಕಾರುಗಳನ್ನು ಸಾವಕಾಶವಾಗಿ ಚಾಲನೆ ಮಾಡುವುದು ನಿಜಕ್ಕೂ ಅಪರೂಪ ಎನ್ನಬಹುದು.
 
 

Tags: